`ಗೋವಿನ ಅವಲಂಬನೆ ಇಲ್ಲದ ಬದುಕೇ ಇಲ್ಲ'

7

`ಗೋವಿನ ಅವಲಂಬನೆ ಇಲ್ಲದ ಬದುಕೇ ಇಲ್ಲ'

Published:
Updated:
`ಗೋವಿನ ಅವಲಂಬನೆ ಇಲ್ಲದ ಬದುಕೇ ಇಲ್ಲ'

ಬದಿಯಡ್ಕ:`ಪ್ರತಿಯೊಬ್ಬನಿಗೂ ಹಸಿವಿನ ತುತ್ತು ಎತ್ತುವಾಗ ಮಾತೃಸಮಾನಳಾದ ಗೋವಿನ ನೆನಪಾಗಿ ಆಕೆಯ ರಕ್ಷಣೆಯ ದೀಕ್ಷೆ ಜಾಗೃತವಾಗಬೇಕು. ಅದುವೇ ಪ್ರತಿಯೊಬ್ಬನೂ ಮಾಡುವ ಸಾರ್ಥಕ ಗೋಸೇವೆ. ಗೋವಿನಲ್ಲಿ  ಅಖಂಡ ಭಾರತದ ಅನುಕರಣೀಯ ತತ್ವಸಿದ್ಧಾಂತಗಳು ಅಡಕವಾಗಿದೆ' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸಾಮೀಜಿ ಹೇಳಿದರು.ಪೆರ್ಲದ ಸತ್ಯನಾರಾಯಣ ಪ್ರೌಢಶಾಲಾ ಪರಿಸರದಲ್ಲಿ ಭಾನುವಾರ ಸಂಜೆ ನಡೆದ ಜನಜನನೀ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. `ಗೋವು ಕೇವಲ ಪಶುವಲ್ಲ. ಅದು ಪವಿತ್ರ ಕಾಮಧೇನು. ಸಮಾಜದಲ್ಲಿ ಹೋರಿಗಳು ಸ್ವಾಭಿಮಾನ ಹಾಗೂ ಗೋವುಗಳು ಪ್ರೀತಿ ವಾತ್ಸಲ್ಯದ ಸಂಕೇತವಾಗಿವೆ. ಸಾಮಾಜಿಕವಾಗಿ ಗೋರಕ್ಷಣೆಯ ಬಗ್ಗೆ ಹೆಚ್ಚಿನ ಚಿಂತನೆ ಅಗತ್ಯ. ಗೋವಿನ ಅವಲಂಬನೆ ಇಲ್ಲದ ಬದುಕನ್ನು ಮಾನವನಿಗೆ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ' ಎಂದು ಅವರು ಹೇಳಿದರು.ಸಭೆಯಲ್ಲಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಪಳ್ಳತ್ತಡ್ಕ ರಘುರಾಮ ಆಳ್ವ, ಎ.ಎಸ್ ಭಟ್, ವಿಜಯ ಕೃಷ್ಣನ್, ಯುಧ್ಠಿರ ಶರ್ಮ, ಚಂದ್ರಶೇಖರ ಏತಡ್ಕ, ಡಾ.ವೈ.ವಿ.ಕೃಷ್ಣಮೂರ್ತಿ ಮೊದಲಾದವರು ಭಾಗವಹಿಸಿದ್ದರು.

ಭಾನುವಾರ ಬೆಳಗ್ಗೆ ನಿರ್ವಿಷ ನಿರಂತರ ಗೋ ಆಧರಿತ ಕೃಷಿ ಎಂಬ ವಿಷಯದ ಮೇಲೆ ಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಗೋಪೂಜೆ, ಗೋವರ್ಧನ ಗೋಪೂಜೆ, ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ, ಬಂಗಾರಿಗೆ ಬಾಗಿನ ಮೊದಲಾದ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry