ಗುರುವಾರ , ಏಪ್ರಿಲ್ 22, 2021
28 °C

ಗೋ ಮಾಂಸ ಅಂಗಡಿಗೆ ದಾಳಿ ಯತ್ನ: ಬಜರಂಗ ದಳದ ಮೂವರಿಗೆ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರದ ಅಂಡೆಛತ್ರ ಸಮೀಪದ ಮಹಮದ್‌ಖಾನ್ ಗಲ್ಲಿಯಲ್ಲಿ ಗೋ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗ ದಳ ಕಾರ್ಯಕರ್ತರು ಎರಡು ಮಳಿಗೆಗಳ ಮೇಲೆ ಸೋಮವಾರ ದಾಳಿ ನಡೆಸಲು ಯತ್ನಿಸಿದರು.ಈ ಸಂದರ್ಭದಲ್ಲಿ ಸ್ಥಳೀಯರು ಹಲ್ಲೆ ನಡೆಸಿದ್ದರಿಂದ ಬಜರಂಗ ದಳದ ಕಾರ್ಯಕರ್ತರಾದ ರಘು, ಶಾಂತಿ ಮತ್ತು ಪುರುಷೋತ್ತಮ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದಲ್ಲಿ ಬಜರಂಗದಳ ಕಾರ್ಯಕರ್ತ ಶಾಂತಿ ಎಂಬಾತನ ತಲೆ ಮತ್ತು ಮೈಕೈಗೆ ಪೆಟ್ಟಾಗಿದೆ. ಉಳಿದಿಬ್ಬರಿಗೆ ಸಣ್ಣ ಗಾಯವಾಗಿದೆ.ಬೆಂಕಿ-ಅಂಗಡಿಗೆ ಹಾನಿ: ಇದೇ ವೇಳೆ, ಫೈರೋಜ್ ಮತ್ತು ಅಮ್ಜದ್ ಮಾಲೀಕತ್ವದ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಭಾಗಶಃ ಸುಟ್ಟುಹೋಗಿವೆ. ಒಂದು ಬೈಸಿಕಲ್ ಸಹ ಹಾನಿಗೊಂಡಿದೆ. ತಕ್ಷಣ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.