ಶುಕ್ರವಾರ, ಫೆಬ್ರವರಿ 26, 2021
22 °C

ಗೌರಿಬಿದನೂರಿನಲ್ಲಿ ಗ್ರಾಹಕರ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರಿನಲ್ಲಿ ಗ್ರಾಹಕರ ದಿನಾಚರಣೆ

ಗೌರಿಬಿದನೂರು: ಪಟ್ಟಣದಲ್ಲಿ ಭಾನು­ವಾರ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಘವೇಂದ್ರ ಟ್ರಸ್ಟ್ ಫಾರ್ ಎಜು­ಕೇಷನ್ ಸಂಸ್ಥೆ ಸದಸ್ಯರು ಸಂತೆಯಲ್ಲಿ ಗ್ರಾಹಕರ ಹಕ್ಕುಗಳ ಮತ್ತು ಜವಾ­ಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಿದರು.ರಾಘವೇಂದ್ರ ಟ್ರಸ್ಟ್‌ನ ಕಾರ್ಯ­ದರ್ಶಿ ಬಿ.ವಿ ಅಶ್ವತ್ಥ­ನಾರಾಯಣಶೆಟ್ಟಿ ಮಾತ­ನಾಡಿ, ಖರೀದಿಸುವ ಮುನ್ನ ಗ್ರಾಹಕರು ವಸ್ತುವಿನ ದಿನಾಂಕ, ಗುಣಮಟ್ಟ ಪರಿಶೀಲಿಸಬೇಕು. ಇದಲ್ಲದೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಗ್ರಾಹಕರ ವೇದಿಕೆಗಳಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ತಿಳಿಸಿದರು.ತೂಕ ಮತ್ತು ಅಳತೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಿಸಿದ ಅಧಿಕಾರಿ­ಗಳಿಗೆ ಮಾಹಿತಿ ನೀಡಿ, ನಕಲಿ ವಸ್ತುಗಳ ಬಗ್ಗೆ ಎಚ್ಚರ ವಹಿಸಿ, ಪ್ರತಿ ವರ್ಷ ಇಲಾಖೆ ವತಿಯಿಂದ ಪರಿಶೀಲಿಸ­ಲಾಗಿ­ದೆಯೇ ಎಂಬುದನ್ನು ಗಮನಿಸ­ಬೇಕು. ಸರಕುಗಳ ಯೋಗ್ಯತೆ, ಪ್ರಮಾಣ, ಶುದ್ಧತೆ, ಧಾರಣೆ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಬಾಲ­ಕೃಷ್ಣ, ಕೆ.ನರ­ಸಿಂಹರೆಡ್ಡಿ, ಬಾಲಕೃಷ್ಣ, ಪ್ರದೀಪ್‌ಕುಮಾರ್, ಲಕ್ಷ್ಮೀನರಸಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.