ಮಂಗಳವಾರ, ಜನವರಿ 28, 2020
21 °C

ಗ್ರಂಥಾಲಯ: ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಂಥಾಲಯ ಇಲಾಖೆಯು 2011ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳನ್ನು ಏಕಗವಾಕ್ಷಿ, ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಯೋಜನೆಯಡಿ ಗ್ರಂಥಾಲಯಗಳಿಗೆ ಪೂರೈಸಲು ನೋಂದಣಿಯ ಅವಧಿಯನ್ನು ಫೆಬ್ರುವರಿ 15ರ ವರೆಗೆ ವಿಸ್ತರಿಸಿದೆ.ಇಲಾಖೆಯು ಸೂಚಿಸಿದ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ, ಇತ್ಯಾದಿ ವಿಷಯಗಳ ಕನ್ನಡ, ಇಂಗ್ಲಿಷ್ ಮತ್ತು ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-2286 4990 ಹಾಗೂ 2286 7358 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)