ಶುಕ್ರವಾರ, ಮಾರ್ಚ್ 5, 2021
18 °C

ಗ್ರಾ.ಪಂ.ಚುನಾವಣೆ: ಮತದಾನ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾ.ಪಂ.ಚುನಾವಣೆ: ಮತದಾನ ಚುರುಕು

ಬೆಂಗಳೂರು: ರಾಜ್ಯದ 15 ಜಿಲ್ಲೆಗಳು ಮತ್ತು ಒಂದು ಪೊಲೀಸ್‌ ಕಮೀಷನರೇ ಟ್‌ ವ್ಯಾಪ್ತಿಯಲ್ಲಿ ಎರಡನೇ ಹಂತದ ಗ್ರಾಮಪಂಚಾಯಿತಿ ಚುನಾವಣೆಯ ಮತದಾನ ಬಿರುಸಿನಿಂದ ಆರಂಭವಾಗಿದೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಬಿರುಸಿನ ಮತದಾನ ನಡೆಯುತ್ತಿದೆ ಎಂದು ಸ್ಥಳೀಯ ಸುದ್ದಿ ಮೂಲಗಳು ತಿಳಿಸಿವೆ.ರಾಯಚೂರು, ದಾವಣಗೆರೆಯಲ್ಲಿ ಚಿತ್ರದುರ್ಗದಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ಜರುಗಿವೆ. ರಾಯಚೂರಿನ ಕ್ಯಾದಿಗೇರೆ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿರುವುದರಿಂದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ.ಮತದಾನ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ.ಭದ್ರತೆಗಾಗಿ 19 ಪೊಲೀಸ್ ವರಿಷ್ಠಾಧಿಕಾರಿಗಳು, 10 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 87 ಡಿವೈಎಸ್‌ಪಿ, 235 ಇನ್‌ಸ್ಪೆಕ್ಟರ್‌ಗಳು, 1780 ಸಬ್‌ ಇನ್‌ಸ್ಪೆಕ್ಟರ್‌ಗಳು ಹಾಗೂ 1778 ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳು ಸೇರಿದಂತೆ ಒಟ್ಟು 20,109 ಮಂದಿಯನ್ನು ನಿಯೋಜಿಸಲಾಗಿದೆ.ಜತೆಗೆ ಗೃಹ ರಕ್ಷಕ ದಳದ 9115  ಸಿಬ್ಬಂದಿ, 278 ಕೆಎಸ್‌ಆರ್‌ಪಿ,ಸಿಎಆರ್‌, ಡಿಎಆರ್‌ ತುಕಡಿಗಳು ಹಾಗೂ  ಕೇರಳ  ರಾಜ್ಯ ಸಶಸ್ತ್ರ ಮೀಸಲು ಪಡೆಯ 3 ತುಕಡಿಗಳು ಚುನಾವಣಾ ಭದ್ರತಾ ಕಾರ್ಯ ನಿರ್ವಹಿಸಲಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಅಂಕಿ ಅಂಶ

19,079 ಒಟ್ಟು ಮತಗಟ್ಟೆ

3,294 ಅತಿ ಸೂಕ್ಷ್ಮ ಮತಗಟ್ಟೆ

4,607 ಸೂಕ್ಷ್ಮ ಮತಗಟ್ಟೆ

11,178 ಸಾಮಾನ್ಯ ಮತಗಟ್ಟೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.