ಮಂಗಳವಾರ, ಮೇ 24, 2022
23 °C

ಗ್ರಾ.ಪಂ ಸದಸ್ಯ ಸೇರಿ 6 ಆನೆ ಹಂತಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರಾಮಾಪುರ ಅರಣ್ಯ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ 6 ಮಂದಿ ಕುಖ್ಯಾತ ಆನೆ ಹಂತಕರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿದೆ.ಕೊಳ್ಳೇಗಾಲ ತಾಲ್ಲೂಕು ದೊಮ್ಮನಗದ್ದೆಯ ಮುರುಗೇಶ ಅಲಿಯಾಸ್ ತಂಬಿ, ಹೊಸಹಳ್ಳಿಯ ಚನ್ನರಾಜು ಅಲಿಯಾಸ್ ಮಹದೇವ, ಅಜ್ಜೀಪುರದ ಸತೀಶ್, ಅರುಣ್‌ಕುಮಾರ್, ಕುರುಬರದೊಡ್ಡಿಯ ನಯಾಜ್ ಹಾಗೂ ಕೌದಳ್ಳಿಯ ಅಬ್ದುಲ್ ನಜು ಬಂಧಿತರು.ಆನೆ ಹತ್ಯೆ ಜಾಲದ ಪ್ರಮುಖ ಆರೋಪಿ ತಂಬಿ ಅಜ್ಜೀಪುರ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದು, ಈತನನ್ನೂ ಬಂಧಿಸಲಾಗಿದೆ.ಬಂಧಿತರಿಂದ 2 ದಂತ ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ತಂಡ ಕೊಳ್ಳೇಗಾಲ ಹಾಗೂ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಆನೆಗಳ ಹತ್ಯೆಗೆ ಸಂಚು ರೂಪಿಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಖಚಿತ ಮಾಹಿತಿ ದೊರೆಕಿತ್ತು.ಆರೋಪಿಗಳ ಬಂಧನಕ್ಕಾಗಿ ಒಂದು ತಿಂಗಳ ಹಿಂದೆಯೇ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳೊಂದಿಗೆ ಆನೆ ದಂತ ಖರೀದಿಸುವ ನೆಪದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಂಪರ್ಕ ಸಾಧಿಸಿ ಅವರನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.