ಸಿಂಧನೂರು:  ಟಿ.ವಿ, ಮೊಬೈಲ್, ಇಂಟರ್ನೆಟ್ ತಂತ್ರಜ್ಞಾನಕ್ಕೆ ಮಾರು ಹೋದ ಯುವ ಜನಾಂಗ ಗ್ರಾಮೀಣ ಪ್ರದೇಶ ಕ್ರೀಡೆಗಳಿಂದ ದೂರ ಸರಿಯುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಲವಾರು ವರ್ಷಗಳಿಂದ ರೈತರಿಗೆ ಮತ್ತು ಎತ್ತುಗಳಿಗೆ ಸ್ಪರ್ಧೆ ಏರ್ಪ ಡಿಸುವ ಮೂಲಕ ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸುತ್ತಿರುವುದಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಎಪಿಎಂಸಿಯಿಂದ ಕಾರ ಹುಣ್ಣಿಮೆ ಅಂಗವಾಗಿ ಬುಧವಾರ ರೈತ ರಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಈಗಾಗಲೇ ಮಳೆಗಾಲ ಆರಂಭಗೊಂಡಿದ್ದು, ಬಿತ್ತನೆ ಕಾರ್ಯ ಆರಂಭವಾಗಿವೆ. ಇನ್ನೂ ಹೆಚ್ಚಿನ ಮಳೆ ಯಾಗಿ ರೈತರಿಗೆ ಚೈತನ್ಯ ಸಿಗಲಿ ಎಂದರು.

ರಾಜ್ಯದಲ್ಲಿಯೇ ಸಿಂಧನೂರು ಎಪಿಎಂಸಿ ವ್ಯಾಪಾರ ವಹಿವಾಟಿನಲ್ಲಿ ಮುನ್ನಡೆ ಪಡೆದಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕಾದರೆ ರೈತರು ವಿಭಿನ್ನ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಎತ್ತುಗಳ ಓಟ: ಕಾರಹುಣ್ಣಿಮೆ ಅಂಗ ವಾಗಿ ಎಪಿಎಂಸಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಎತ್ತುಗಳ ಓಟದ ಸ್ಪರ್ಧೆ ನೋಡುಗರ ಮನಸೂ ರೆಗೊಂಡಿತು.

2.1 ಟನ್ ತೂಕದ ಕಲ್ಲನ್ನು ಜೋಡಿ ಎತ್ತುಗಳು 10 ನಿಮಿಷದಲ್ಲಿ ಎಳೆದವು. ಇದಕ್ಕೆ ಸೇರಿದ್ದ ರೈತ ಸಮೂಹ ಕೇಕೆ ಹಾಕಿ, ಸಿಳ್ಳೆ ಹಾಕಿ ಪ್ರೋತ್ಸಾಹಿಸಿತು. ಉರಿ ಬಿಸಿಲು ಲೆಕ್ಕಿಸದೆ ರೈತರು ಎತ್ತುಗಳನ್ನು ಓಡಿಸುತ್ತಿದ್ದ ದೃಶ್ಯ ಆಕರ್ಷಕವಾಗಿತ್ತು.

1.5 ಟನ್ ಮತ್ತು 1 ಟನ್ ತೂಕದ ಕಲ್ಲುಗಳನ್ನು ಜೋಡಿ ಎತ್ತುಗಳು ಎಳೆಯು ವುದು. 1 ಟನ್ ತೂಕದ ಕಲ್ಲನ್ನು ಒಂಟೆತ್ತುಗಳು ಎಳೆದವು. ಕಲ್ಲಿನ ಗುಂಡು, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ಸಂಜೆ ವರೆಗೂ ನಡೆದವು.

ಎಪಿಎಂಸಿ ಅಧ್ಯಕ್ಷ ಪಿ.ಚನ್ನಬಸವ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ಮಾಜಿ ಅಧ್ಯಕ್ಷ ಸಣ್ಣ ಕರಿಯಪ್ಪ ಹರೇಟನೂರು, ಮಾಜಿ ಉಪಾಧ್ಯಕ್ಷರಾದ ರಾಮಣ್ಣ ಹುಡಾ, ಫಾರುಖ್ಸಾಬ, ಸದಸ್ಯರಾದ ಮಲ್ಲಿಕಾ ರ್ಜುನ ಮೇಟಿ, ಲಿಂಗರಾಜ ಪಾಟೀಲ್ ರಾಗಲಪರ್ವಿ, ಟಿ.ಪಂಪನಗೌಡ, ದುರು ಗಪ್ಪ ಕಟಾಲಿ, ಬಸನಗೌಡ ಕೋಳಬಾಳ ಇದ್ದರು. ನಿವೃತ್ತ ನೌಕರ ಮನೋಹರ ರಾವ್ ಕುಲಕರ್ಣಿ ನಿರೂಪಿಸಿದರು.

ಕಾರಹುಣ್ಣಿಮೆ ರೈತರ ಹಬ್ಬವಾಗಿದೆ. ಮುಂಗಾರು ಹಂಗಾಮು ಚುರುಕುಗೊಂಡರೆ ರೈತರ ಮುಖದಲ್ಲಿ ಕಳೆಕಟ್ಟುತ್ತದೆ.
ಹಂಪನಗೌಡ ಬಾದರ್ಲಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.