ಮಂಗಳವಾರ, ಜನವರಿ 28, 2020
25 °C

ಗ್ರಾಮೀಣ ಬದುಕು: ಸತ್ಯೇಂದ್ರಕುಮಾರ್ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಸಾಗರ ಫೋಟೋಗ್ರಾಫಿಕ್ ಸೊಸೈಟಿ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ `ಗ್ರಾಮೀಣ ಬದುಕು~  ವಿಭಾಗದಲ್ಲಿ ಶಿಕಾರಿಪುರ ತಾಲ್ಲೂಕು ನಲ್ಲಿನಕೊಪ್ಪ ಗ್ರಾಮದ  ಸತ್ಯೇಂದ್ರ ಕುಮಾರ್ ಪ್ರಥಮ ಬಹುಮಾನ ಗಳಿಸಿದ್ದಾರೆ. ಶಿರಸಿ ತಾಲ್ಲೂಕಿನ ಬೈರುಂಬೆಯ ಗಣೇಶ ಕಾಳಿಸರ ದ್ವಿತೀಯ, ದೊಡ್ಡಬಳ್ಳಾಪುರ ಸುಧೀರ್ ಬಿ. ತೃತೀಯ ಬಹುಮಾನ ಪಡೆದಿದ್ದಾರೆ.`ಪಿಕ್ಟೋರಿಯಲ್~ ( ಭಾವ್ಯಾಂಭಿಜಕ)  ವಿಭಾಗದಲ್ಲಿ ಗದಗ ಜಿಲ್ಲೆ ಮುಂಡರಗಿಯ ಸಲೀಂ ಬಾಲಬಟ್ಟಿ ಪ್ರಥಮ, ಶಿರಸಿಯ ಜಿ.ಎಚ್. ದಿಗ್ವಾಸ್ ದ್ವಿತೀಯ, ಬೆಂಗಳೂರಿನ ಎನ್. ರಘುಪತಿ ತೃತೀಯ ಸ್ಥಾನ ಪಡೆದಿದ್ದಾರೆ.ಮೇಲಿನ ಎರಡೂ ವಿಭಾಗಗಳಿಂದ ಬೆಂಗಳೂರಿನ ಕೆ.ಆರ್. ತೇಜಸ್ ಅವರಿಗೆ ಅತ್ಯುತ್ತಮ ಬೆಳಕಿನ ಸಂಯೋಜನೆ, ಉಡುಪಿ ಹೆಬ್ರಿಯ ಸುನೈನಾ ನಾಯಕ್ ಅವರಿಗೆ ಅತ್ಯುತ್ತಮ ಶಾಲಾ ವಿದ್ಯಾರ್ಥಿ, ಬೆಂಗಳೂರಿನ ಕೆ.ಆರ್. ರಾಜಲೇಖಾ ಅವರಿಗೆ ಅತ್ಯುತ್ತಮ ಮಹಿಳಾ ಪ್ರದರ್ಶಕಿ, ಮಂಗಳೂರಿನ ದಯಾನಂದ ಕುಕ್ಕಜೆ ಅವರಿಗೆ ಅತ್ಯುತ್ತಮ ಆ್ಯಕ್ಷನ್  ಪ್ರಶಸ್ತಿ ಲಭ್ಯವಾಗಿದೆ.ಗ್ರಾಮೀಣ ಬದುಕು ವಿಭಾಗದಲ್ಲಿ ಬಾಗಲಕೋಟೆಯ ಇಂದ್ರಕುಮಾರ್ ಬಿ. ದಸ್ತನಾವರ್, ಕೊಪ್ಪಳದ ವಿನುತಾ ಪ್ರಕಾಶ್ ಕಂದಕೂರ, ಉಡುಪಿಯ ರಾಘವೇಂದ್ರ, ಬೆಂಗಳೂರಿನ ಎ. ರೋನಾಲ್ಡ್, ಪಿಕ್ಟೋರಿಯಲ್ ವಿಭಾಗದಲ್ಲಿ ಉಡುಪಿಯ ರಾಮು ಕುಂಜೂರು, ಮೈಸೂರಿನ ಅಪೂರ್ವಾ, ಸಾಗರದ ವೈಶಾಲಿ, ಚಿತ್ರದುರ್ಗದ ಗಣೇಶ್ ಕತಾರೆ ಜಿ.ಎನ್. ಮೆಚ್ಚುಗೆ ಬಹುಮಾನ ಗಳಿಸಿದ್ದಾರೆ. ಜ. 26ರಂದು ಸಾಗರದಲ್ಲಿ ಬಹುಮಾನಿತ ಚಿತ್ರಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದು   ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)