ಸೋಮವಾರ, ಮೇ 17, 2021
27 °C

ಗ್ರಾಮ ಪಂಚಾಯಿತಿ ಚುನಾವಣೆ : ಶೇ. 76 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ 4 ಗ್ರಾಮ ಪಂಚಾಯಿತಿಗಳ ಪೈಕಿ 3 ಗ್ರಾಮ ಪಂಚಾಯಿತಿಯ 3 ಕ್ಷೇತ್ರಗಳಿಗೆ ಭಾನು ವಾರ ನಡೆದ ಚುನಾವಣೆಯಲ್ಲಿ  ಶೇ. 76.48 ರಷ್ಟು ಮತದಾನವಾಗಿದೆ.ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಕ್ಷೇತ್ರಕ್ಕೆ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ ಮತ ದಾರರು ಉತ್ಸಾಹದಿಂದ ಮತದಾನ ದಲ್ಲಿ ಪಾಲ್ಗೊಂಡಿದ್ದರು. ನಂತರ ಮಂದಗತಯಲ್ಲಿ ಸಾಗಿತು. ಮಧ್ಯಾಹ್ನದ ವೇಳೆಗೆ ಶೇ. 48 ರಷ್ಟು ಮತದಾನ ವಾಗಿತ್ತು. 373 ಪುರುಷ ಮತದಾರರ ಪೈಕಿ 305 ಮಂದಿ, 410 ಮಹಿಳಾ ಮತದಾರರ ಪೈಕಿ 310 ಮಂದಿ ಮತ ಚಲಾಯಿಸಿದರು.ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ಜಯ ಸಾಧಿಸಿದ ವೆಂಕಪ್ಪ ಅವರ ನಂತರ ತೆರವಾಗಿದ್ದ ಸ್ಥಾನಕ್ಕೆ ವಿ.ಎ. ಅಬ್ಬಾಸ್, ಡೊಂಬಯ್ಯ, ಕೆ.ಎ. ಯಾಕೂಬ್ ಸ್ಪರ್ಧಿಸಿದ್ದು, ಇಲ್ಲಿ ಶೇ. 78.5 ರಷ್ಟು ಮತದಾನವಾಗಿದೆ.ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಕ್ಷೇತ್ರಕ್ಕೆ ನಂದಿಗುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಿಧಾನಗತಿಯಲ್ಲಿ ಸಾಗಿ ಸಂಜೆ ವೇಳೆಗೆ ಬಿರುಸು ಕಂಡಿತು.ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ ಎನ್.ಎಸ್.ಗೀತಾ ನಂತರ ತೆರವಾದ ಸ್ಥಾನಕ್ಕೆ ಜೀನತ್ ಸುಲೈಮಾನ್, ಪುಷ್ಪಾವತಿ ಮತ್ತು ಭವಾನಿ ಕಣದಲ್ಲಿದ್ದು, ಒಟ್ಟಾರೆ ಶೇ. 77 ರಷ್ಟು ಮತದಾನವಾಗಿದೆ.ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಈರಳೆವಳಮುಡಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬಲ್ಲಾರಂಡ ಮಣಿ ಉತ್ತಪ್ಪ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ಬಳಿಕ ತೆರವಾದ ಸ್ಥಾನಕ್ಕೆ ಆಯ್ಕೆ ಬಯಸಿ ಪಿ.ಎಂ.ದೇವಯ್ಯ, ಎ.ಈ.ಮುತ್ತಪ್ಪ ಹಾಗೂ ಲೀಲಾವತಿ ಕಣದಲ್ಲಿದ್ದಾರೆ. ಮೀಸಲಾತಿಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತನಳ್ಳಿ ಕ್ಷೇತ್ರದ 445 ಮಂದಿಗೆ ಮತದಾನ ದಿಂದ ಹೊರಗುಳಿದರು.ಪ್ರಚಾರದ ಭರಾಟೆ : ಮತದಾನ ಕೇಂದ್ರದ 100 ಮೀ. ಅಂತರದಲ್ಲಿ ಪ್ರಚಾರ ನಿಷೇಧಿಸಿದ್ದರೂ ಚುನಾವಣಾಧಿ ಕಾರಿ  ಕಣ್ತಪ್ಪಿಸಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತದಾರರ ಮನ ವೊಲಿಸುತ್ತಿದ್ದ ದೃಶ್ಯ ಕಂಡು ಬಂದಿತು.ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಕ್ಷೇತ್ರದ ಮತದಾನ ಕೇಂದ್ರದಲ್ಲಿ 88 ರ ಪ್ರಾಯದ ಗಿರಿಜಮ್ಮ ಮೊಮ್ಮಕ್ಕಳ ಸಹಾಯದಿಂದ ಮತ ಹಾಕಿದರು. ಹೆಗ್ಗುಳ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುಷ್ಪಾವತಿ ಅನಾರೋಗ್ಯ ದಿಂದಾಗಿ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಇದ್ದುದರಿಂದ ಅಂತಿಮ ಹಂತದ ಮತಯಾಚನೆಯಿಂದ ದೂರ ಉಳಿದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.