ಭಾನುವಾರ, ಜೂನ್ 13, 2021
21 °C

ಗ್ರಾಮ ಸಹಾಯಕರ ಸಂಘದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮಸಹಾಯಕರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದ ಬಳಿ ಶನಿವಾರ ಧರಣಿ ನಡೆಸಿದರು.ಸಂಘದ ಅಧ್ಯಕ್ಷ ಮುದ್ದುಕೃಷ್ಣ ಮಾತನಾಡಿ `ರಾಜ್ಯ ಕಂದಾಯ ಇಲಾಖೆಯಲ್ಲಿ ಗ್ರಾಮಸಹಾಯಕರ ಹುದ್ದೆಗೆ ನಮ್ಮನ್ನು ಆಯ್ಕೆ ಮಾಡಿ 33 ವರ್ಷಗಳು ಕಳೆದು ಹೋಗಿವೆ. ಆದರೆ, 100 ರಿಂದ 3,500 ರೂಪಾಯಿ ವೇತನ ನೀಡುತ್ತಿರುವುದು ಬಿಟ್ಟರೆ ಇನ್ನೂ ನಮ್ಮನ್ನು `ಡಿ~ ದರ್ಜೆಯ ನೌಕರರು ಎಂದು ಪರಿಗಣಿಸಿಲ್ಲ.2007ರಲ್ಲಿಯೇ ಗ್ರಾಮ ಸಹಾಯಕ ನೌಕರರ ಹುದ್ದೆಖಾಯಂಗೊಳಿಸಲಾ ಗಿದೆ. ಆದರೆ, ವೇತನ ಪರಿಷ್ಕರಣೆ ಮಾತ್ರ ಆಗಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ನೀಡುತ್ತಿರುವ ವೇತನದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸರ್ಕಾರ ಇದನ್ನು ಪ್ರಾಮಾಣಿಕವಾಗಿ ಪರಿಗಣಿಸಿಲ್ಲ. ನಮ್ಮನ್ನು `ಡಿ~ ದರ್ಜೆಯ ನೌಕರರೆಂದು ಪರಿಗಣಿಸಿ ಅವರಿಗೆ ನೀಡುವಷ್ಟು ವೇತನವನ್ನು ನೀಡಬೇಕು ಎಂದರು.1993ರ ಸರ್ಕಾರದ ಆದೇಶದಂತೆ, ಸೇವೆಯಲ್ಲಿರುವ ಕಾರ್ಮಿಕ ಮರಣ ಹೊಂದಿದರೆ ಹಾಗೂ ನಿವೃತ್ತಿ ಹೊಂದಿದರೆ ಅವನ ಕುಟುಂಬದ ಸದಸ್ಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ನಿವೃತ್ತ ಗ್ರಾಮಸಹಾಯಕರಿಗೆ ಒಂದು ಲಕ್ಷ ನಿವೃತ್ತಿ ವೇತನ ಹಾಗೂ ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸಂಘದ ಉಪಾಧ್ಯಕ್ಷ ಬಿ.ಪುಟ್ಟಮಾದಯ್ಯ, ಟಿ.ವಾಸು, ಜನಾರ್ದನ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ವೆಂಕಟಾಚಲಪ್ಪ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.