ಗ್ರಾಹಕರೊಂದಿಗೆ ಅನುಚಿತ ವರ್ತನೆ: ದೂರು ದಾಖಲು

7

ಗ್ರಾಹಕರೊಂದಿಗೆ ಅನುಚಿತ ವರ್ತನೆ: ದೂರು ದಾಖಲು

Published:
Updated:

ಚನ್ನಪಟ್ಟಣ: ಗ್ಯಾಸ್ ಸಿಲಿಂಡರ್ ನೀಡಲು ವಿಫಲಗೊಂಡ ವಿತರಕರನ್ನು ಪ್ರಶ್ನಿಸಿದ ಗ್ರಾಹಕನ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿರುವ ಪ್ರಕರಣ ಇಲ್ಲಿನ ಆನಂದಪುರದ ಕಾಶಿ ಎಂಟರ್ ಪ್ರೈಸಸ್‌ನಲ್ಲಿ ಸೋಮವಾರ ನಡೆದಿದೆ.ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಲೋಕೇಶ್ ಎಂಬುವರು ಸಿಲಿಂಡರ್‌ಗೆ ಬುಕ್ ಮಾಡಿ ಸುಮಾರು ದಿನ ಕಳೆದಿತ್ತಾದರೂ ಸಿಲಿಂಡರ್ ವಿತರಿಸಿ ರಲಿಲ್ಲ, ಇದನ್ನು ಪ್ರಶ್ನಿಸಿದ ಲೋಕೇಶ್ ಜತೆ ಅನುಚಿತವಾಗಿ ವರ್ತಿಸಿದ್ದಾರೆ.ಇವರ ವರ್ತನೆಯ ಬಗ್ಗೆ ಪ್ರಶ್ನಿಸಲು ಮುಂದಾದ ಕಾಂಗ್ರೆಸ್ ಮುಖಂಡ ಪಿ. ರಮೇಶ್ ಮೇಲೂ ಸಹ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry