ಬೆಂಗಳೂರು: ನಗರದ `ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ಸ್~ನಲ್ಲಿ ಹೊಸದಾಗಿ ಸ್ಥಾಪಿಸಿರುವ `ಗ್ಲೋಬಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್~ ಬುಧವಾರ ಉದ್ಘಾಟನೆಗೊಳ್ಳಲಿದೆ. ಈ ನೂತನ ಕೇಂದ್ರದಲ್ಲಿ ಅತ್ಯಾಧುನಿಕ `ಟ್ರ್ಯೂಬೀಮ್ ಎಸ್ಟಿಎಕ್ಸ್~ ಎಂಬ ಯಂತ್ರೋಪಕರಣದಿಂದ ಎಲ್ಲ ಬಗೆಯ ಕ್ಯಾನ್ಸರ್ಗಳಿಗೆ ಅತ್ಯುನ್ನತ ಮಟ್ಟದ ವಿಕಿರಣ ಚಿಕಿತ್ಸೆ ನೀಡುವ ಸೌಲಭ್ಯ ಇದೆ.

`ಈ ಯಂತ್ರೋಪಕರಣ ನಾಜೂಕಿನ ವಿಕಿರಣ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ನಿಖರವಾಗಿ ನೆರವೇರಿಸಲಿದೆ. ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಇಂತಹ ಉಪಕರಣ ಹೊಂದಿರುವ ಮೊದಲ ಆಸ್ಪತ್ರೆ ನಮ್ಮದಾಗಿದೆ~ ಎಂದು ಹಾಸ್ಪಿಟಲ್ಸ್ ಸಮೂಹದ ಅಧ್ಯಕ್ಷ ಡಾ.ಕೆ. ರವೀಂದ್ರನಾಥ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈ ಉಪಕರಣವು ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಕೋಶಗಳಿದ್ದರೆ ಅದನ್ನು ಪತ್ತೆ ಹಚ್ಚಿ ವಿಕಿರಣದ ಮೂಲಕ ನಾಶಪಡಿಸಲಿದೆ. ಆರೋಗ್ಯಕರ ಜೀವ ಕೋಶಗಳಿಗೆ ಹಾನಿಯಾಗದಂತೆ, ಕ್ಯಾನ್ಸರ್ ಕೋಶಗಳನ್ನು ಮಾತ್ರ ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ನಡೆಸಲಿದೆ~ ಎಂದರು.

`ಇದುವರೆಗಿನ ತಂತ್ರಜ್ಞಾನಗಳಲ್ಲಿ ಸಾಧ್ಯವಾಗುವುದಕ್ಕಿಂತ ಶೇಕಡಾ 60ರಷ್ಟು ಕ್ಷಿಪ್ರವಾಗಿ ಕ್ಯಾನ್ಸರ್ ಗಡ್ಡೆ ಮತ್ತು ಅದರ ಸುತ್ತಮುತ್ತಲ ಅಂಗಾಂಗಗಳ ಚಿತ್ರಣವನ್ನು ಈ ಉಪಕರಣವು 3ಡಿ ಇಮೇಜ್ನಲ್ಲಿ ನೀಡಲಿದೆ. ಶೇ 25ರಷ್ಟು ಕಡಿಮೆ ಎಕ್ಸ್ರೇ ಡೋಸ್ ಬಳಸಿ ಚಿತ್ರಗಳನ್ನು ಪಡೆದುಕೊಳ್ಳಬಹುದು~ ಎಂದರು.

`ಸಾಮಾನ್ಯವಾಗಿ ಸಂಪೂರ್ಣ ವಿಕಿರಣ ಚಿಕಿತ್ಸೆಗೆ 30ರಿಂದ 60 ನಿಮಿಷ ಬೇಕಾಗುತ್ತದೆ. ಈ ಉಪಕರಣದ ಮೂಲಕ ಕೇವಲ 5ರಿಂದ 20 ನಿಮಿಷಗಳಲ್ಲಿ ಚಿಕಿತ್ಸೆಯನ್ನು ನೀಡಬಹುದು~ ಎಂದು ವಿವರಿಸಿದರು.

`ಹೊಸ ಉಪಕರಣದಲ್ಲಿನ ಗೇಟೆಡ್ ರ್ಯಾಪಿಡ್ ಆರ್ಕ್ ಸಾಮರ್ಥ್ಯದಿಂದಾಗಿ ವಿಕಿರಣ ಚಿಕಿತ್ಸೆಯು ರೋಗಿಯ ಉಸಿರಾಟದ ಚಲನೆಗೆ ಅನುಗುಣವಾಗಿ ಸಾಗುತ್ತದೆ. ಇದು ಹೆಚ್ಚು ಸುರಕ್ಷಿತ, ಕ್ಷಿಪ್ರಗತಿಯ ಚಿಕಿತ್ಸೆಯನ್ನು ಖಾತರಿಗೊಳಿಸುತ್ತದೆ~ ಎಂದು ತಿಳಿಸಿದರು.

`25 ಕೋಟಿ ರೂಪಾಯಿ ಮೌಲ್ಯದ ಯಂತ್ರೋಪಕರಣವನ್ನು ಜರ್ಮನಿಯಿಂದ ತರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಚೆನ್ನೈ, ಮುಂಬೈ, ಹೈದರಾಬಾದ್ ಶಾಖೆಗಳಿಗೂ ಈ ಯಂತ್ರೋಪಕರಣಗಳನ್ನು ತರಿಸಿಕೊಳ್ಳಲಾಗುವುದು~ ಎಂದರು.

ಜರ್ಮನಿಯ ವೇರಿಯಾನ್ ಮೆಡಿಕಲ್ ಸಿಸ್ಟಮ್ಸನ ಶಸ್ತ್ರಚಿಕಿತ್ಸಾ ವಿಜ್ಞಾನಗಳ ನಿರ್ದೇಶಕ ಡೇವಿಡ್ ಜೇಮ್ಸ, ಹಾಸ್ಪಿಟಲ್ಸ್ನ ಡಾ.ಎಸ್.ನಿರ್ಮಲಾ, ಡಾ.ಜೆ.ಮಾತಂಗಿ, ಸಿ.ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.