ಗ್ವಾಟೆಮಾಲದಲ್ಲಿ ಭಾರಿ ಭೂಕಂಪ - 48 ಸಾವು
ಸ್ಯಾನ್ ಮಾರ್ಸೊ (ಎಪಿ): ಬುಧವಾರ ಸ್ಥಳಿಯ ಕಾಲಮಾನ 10.35ರಲ್ಲಿ ಇಲ್ಲಿ ಸಂಭವಿಸಿದ 7.4 ತೀವ್ರತೆ ಶಕ್ತಿಶಾಲಿ ಭೂಕಂಪದಿಂದ 48 ಮಂದಿ ಸಾವನ್ನಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಗ್ವಾಟೆಮಾಲ ಸೇರಿದಂತೆ ಮೆಕ್ಸಿಕೊ ಹಾಗೂ ಎಲ್ ಸಾಲ್ವಡೊರ್ ದೇಶಗಳಲ್ಲೂ ಭೂಕಂಪ ಸಂಭವಿಸಿದ ಬಗೆಗೆ ವರದಿಯಾಗಿದೆ.
ಭೂಕಂಪದ ಕೇಂದ್ರ ಬಿಂದು ಗ್ವಾಟೆಮಾಲದಿಂದ 24 ಕಿ.ಮೀ. ದೂರದ ಫೆಸಿಫಿಕ್ ಸಾಗರದಲ್ಲಿತ್ತೆಂದು ಹವಾಮಾನ ಇಲಾಖೆ ತಿಳಿಸಿದೆ.
ಭೂಕಂಪದಿಂದ ಗ್ವಾಟೆಮಾಲದಲ್ಲಿ ಭಾರಿ ಹಾನಿ ಉಂಟಾಗಿದೆ. ಅನೇಕ ಕಡೆ ಭೂಕುಸಿತಗಳು ಸಂಭವಿಸಿವೆ. ಬಹು ಮಹಡಿ ಕಟ್ಟಡಗಳು ಕುಸಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇನ್ನೂ ಅವಶೇಷಗಳಡಿ ಸಾವಿರಾರು ಮಂದಿ ಸಿಲುಕಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಇದು ಗ್ವಾಟೆಮಾಲದಲ್ಲಿ 1976ರ ನಂತರ ಸಂಭವಿಸಿದ ಶಕ್ತಿಶಾಲಿ ಭೂಕಂಪ ಎಂದು ತಜ್ಞರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.