ಶನಿವಾರ, ಏಪ್ರಿಲ್ 10, 2021
29 °C

ಚಂದಾ: ಪ್ರಭಾವಿ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಐಸಿಐಸಿಐ~ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚ್ಚಾರ್, ಭಾರತದ ಅತ್ಯಂತ ಪ್ರಭಾವಿ ಮಹಿಳಾ ಉದ್ಯಮಿ ಎಂದು   `ಫಾರ್ಚೂನ್~ ನಿಯತಕಾಲಿಕೆ ಹೇಳಿದೆ.ಸತತ ಎರಡನೇ ವರ್ಷವೂ ಕೊಚ್ಚಾರ್ ಮೊದಲ     ಸ್ಥಾನದಲ್ಲಿದ್ದಾರೆ. `ಟಿಎಎಫ್‌ಇ~ನ ಮಲ್ಲಿಕಾ ಶ್ರೀನಿವಾಸನ್, `ಕ್ಯಾಪ್ ಜೆಮಿನಿ ಇಂಡಿಯಾ~ದ ಅರುಣಾ ಜಯಂತಿ ನಂತರದ ಸ್ಥಾನಗಳಲ್ಲಿದ್ದಾರೆ.  `ಫಾರ್ಚೂನ್~ ಭಾರತದ 50 ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ `ಕ್ರಿಸಿಲ್~ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರೂಪ ಕುಡ್ವಾ ಕೂಡ ಸೇರಿದ್ದಾರೆ.`ಈ ವರ್ಷ ಪಟ್ಟಿಗೆ 6 ಜನ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 17 ಜನರು ತಮ್ಮ ಶ್ರೇಣಿಯಲ್ಲಿ ಕುಸಿತ ಕಂಡಿದ್ದಾರೆ~ ಎಂದು ಫಾರ್ಚೂನ್  ಇಂಡಿಯಾ ಸಂಪಾದಕ ದಿಬಯೇಂದ್ರ ನಾಥ್ ಮುಖರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆರು ಹೊಸ ಸೇರ್ಪಡೆಯಲ್ಲಿ `ಕೋಲ್ಗೇಟ್~ ವ್ಯವಸ್ಥಾಪಕ ನಿರ್ದೇಶಕಿ ಪ್ರಭಾ ಪರಮೇಶ್ವರಿ, ಮೋರ್ಗನ್ ಸ್ಟಾನ್ಲಿ ಇಂಡಿಯಾದ ಐಶಾ ಡಿ.ಸಕರಿಯಾ, ಇಂಟೆಲ್ ದಕ್ಷಿಣ ಏಷ್ಯಾ ಎಂ.ಡಿ ದೇಬ್‌ಜಾನಿ ಘೋಷ್, ಟಪ್ಪರ್‌ವೇರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ಆಶಾ ಗುಪ್ತಾ ಇದ್ದಾರೆ.`ಸನ್ ಟಿವಿ~ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕಿ ಕಾವೇರಿ ಕಲಾನಿಧಿ ಅತ್ಯಂತ ಹೆಚ್ಚು ವೇತನ ಪಡೆಯುತ್ತಿರುವ ಭಾರತದ ಮಹಿಳಾ ಉದ್ಯಮಿ. ಕಾವೇರಿ ಅವರ ವಾರ್ಷಿಕ ವೇತನ ರೂ 57 ಕೋಟಿ ಎಂದೂ ಫಾರ್ಚೂನ್ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.