ದಾವಣಗೆರೆ (ಮುದೇನೂರು ಸಂಗಣ್ಣ ವೇದಿಕೆ): `ಚಳವಳಿಗಳು ಸ್ಥಗಿತ ಗೊಂಡಿಲ್ಲ; ಅವುಗಳು ವಿಸ್ತ್ರತಗೊಳ್ಳುವ ಮೂಲಕ ಸ್ವರೂಪದಲ್ಲಿ ಬದಲಾವಣೆ ಕಂಡುಕೊಂಡಿವೆ' ಎಂದು ಲೇಖಕ ಡಾ.ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಗೋಷ್ಠಿಯಲ್ಲಿ `ಸಾಮಾಜಿಕ ಚಳವಳಿಗಳು ಮತ್ತು ಜಾಗತೀಕರಣ' ವಿಷಯ ಕುರಿತು ಅವರು ಮಾತನಾಡಿದರು.

`ಪ್ರಸ್ತುತ ರೈತ ಚಳವಳಿ ಸಾಮಾಜಿಕ ಚಳವಳಿಯಾಗಿ, ದಲಿತ ಚಳವಳಿ ತಲ್ಲಣ ನಿವಾರಣೆ ಚಳವಳಿಯಾಗಿ ಬದಲಾದಂತೆ ಕಾಣಿಸುತ್ತಿವೆ. ಚಳವಳಿಯ ಉದ್ದೇಶ ಅಸಮಾನತೆ ತೊಲಗಿಸುವುದು. ಚಳವಳಿಗೆ `ಸುಧಾರಣಾವಾದಿ' ಹಾಗೂ `ಪರಿವರ್ತನಾವಾದಿ' ಎಂಬ ಎರಡು ಆಯಾಮಗಳಿವೆ. ಮಾನವೀಯತೆ ವಿನಾಶಗೊಂಡರೆ ನಾವು ಚಳವಳಿಯ ಹಾದಿ ತುಳಿಯುತ್ತೇವೆ. ಆರ್ಥಿಕ, ಸಾಮಾಜಿಕ, ಭಾಷೆ, ಪ್ರಾದೇಶಿಕ ಅಸಮಾನತೆ ಕೂಡ ಚಳವಳಿಗೆ ಕಾರಣ ಆಗುತ್ತಿವೆ' ಎಂದು ಹೇಳಿದರು.

`ಸಾಹಿತ್ಯ ಕಲಿಸಿದ ಪಾಠಕ್ಕಿಂತ ಚಳವಳಿ ಹೇಳಿಕೊಟ್ಟ ಪಾಠವೇ ದೊಡ್ಡದು. ಜಾತಿ ವಿನಾಶ ಇಟ್ಟುಕೊಂಡು ಸಮಾಜದಲ್ಲಿ ಸಾಕಷ್ಟು ಚಳವಳಿಗಳು ಜನ್ಮತಳೆದಿವೆ. ಸಾಮಾಜಿಕ ನ್ಯಾಯ ಹಾಗೂ ಮೂಲಸೌಕರ್ಯದ ಹಕ್ಕಿಗಾಗಿ ಚಳವಳಿ ಹುಟ್ಟಿಕೊಂಡಿವೆ. ಸರ್ಕಾರ ಕೂಡ ಅಸಮಾನತೆ ತೊಲಗಿಸದೇ ಬಂದೂಕಿನ ಮೂಲಕ ಉತ್ತರ ನೀಡುತ್ತಿದೆ. ಅನೇಕ ಚಳವಳಿಗಳು ಸರ್ಕಾರಕ್ಕಿಂತ ಖಾಸಗಿ ವ್ಯವಸ್ಥೆಯ ವಿರುದ್ಧವೇ ಮಾತನಾಡುತ್ತಿವೆ. ಅದಕ್ಕೆ ಕಾರಣವೂ ಇದೆ. ಅಸಮಾನತೆ ನಮ್ಮ ಸಂಸ್ಕೃತಿಯ ಭಾಗ ಎಂದು ನೋಡುತ್ತಿದ್ದೇವೆ. ಅದು ಬದಲಾಗಬೇಕು. ನಮ್ಮಳಗೊಬ್ಬ ಪುಟ್ಟ ಗಾಂಧಿ- ಅಂಬೇಡ್ಕರ್ ಇದ್ದಾರೆ. ಅವರ ಚಿಂತನೆಗಳಿಗೆ ಆಕೃತಿ ಕೊಡಬೇಕು' ಎಂದು ಸಲಹೆ ನೀಡಿದರು.

ಲೇಖಕಿ ತಾರಣಿ ಶುಭದಾಯಿನಿ `ಸ್ಥಗಿತಗೊಂಡಂತಿರುವ ಸಾಹಿತ್ಯ ಚಳವಳಿಗಳು- ಮುಂದೇನು' ವಿಷಯ ಕುರಿತು ಮಾತನಾಡಿ, `ಚಳವಳಿಗಳು ಸ್ಥಗಿತಗೊಂಡಿಲ್ಲ; ಅವುಗಳ ಅಧ್ಯಾಯವೂ ಮುಗಿದಿಲ್ಲ. ಮುಗಿದಂತೆ ಕಾಣಿಸುತ್ತಿವೆ ಅಷ್ಟೆ. ಬದಲಾದ ದಿನಮಾನದಲ್ಲಿ ಹೊಸ ಸ್ವರೂಪದಲ್ಲಿ ಕಾಣಿಸುತ್ತಿವೆ. ಸಾಹಿತ್ಯ ಚಳವಳಿ ಸ್ಥಗಿತಗೊಂಡಿದೆ ಎಂಬ ವಾದ ಒಪ್ಪಿಕೊಳ್ಳಲು ಆಗದು. ಅವು ಸುಪ್ತವಾಗಿ; ಒಮ್ಮಮ್ಮೆ ವ್ಯಕ್ತವಾಗಿ ಕಾಣಿಸುತ್ತವೆ' ಎಂದು ವಿಶ್ಲೇಷಿಸಿದರು.

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ `ಸಾಮಾಜಿಕ ಚಳವಳಿಗೆ ರಂಗಭೂಮಿ ಕೊಡುಗೆ' ಕುರಿತು ಮಾತನಾಡಿ, `ವೃತ್ತಿರಂಗಭೂಮಿಗೆ 140 ವರ್ಷಗಳ ಇತಿಹಾಸವಿದೆ. 6 ದಶಕಗಳ ಕಾಲ ಅದರದು ವೈಭವದ ಯುಗ. ಸ್ವಾತಂತ್ರ್ಯಪೂರ್ವದಲ್ಲೂ ವೃತ್ತಿರಂಗ ಭೂಮಿ ಕಲಾತ್ಮಕವಾಗಿ ತನ್ನ ಜವಾಬ್ದಾರಿ ನಿಭಾಯಿಸಿದೆ. ಅದು ಎಲ್ಲಾ ಚಳವಳಿಗಾರರಿಗೆ ಅನ್ನ ಹಾಗೂ ಆಶ್ರಯ ಕೊಟ್ಟಿದೆ. 1920ರಿಂದ ಪೌರಾಣಿಕ ನಾಟಕಗಳು ಸ್ವಾತಂತ್ರ್ಯದ ಸಂದೇಶ ಸಾರುವ ಮೂಲಕ ಸಾಮಾಜಿಕ ಚಳವಳಿಗೆ ಕೊಡುಗೆ ನೀಡಿದವು' ಎಂದು ವಿಶ್ಲೇಷಿಸಿದರು.

`ರಂಗಭೂಮಿ ಕಲಾವಿದರು ಬ್ರಿಟಿಷರಿಗೆ ನೆರವಾಗುವ ಕೆಲಸವನ್ನು ಎಂದೂ ಮಾಡಲಿಲ್ಲ. ಬದಲಾಗಿ ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣ ಕರ್ನಾಟಕಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. 1910ರಿಂದ ಹವ್ಯಾಸಿ ರಂಗಭೂಮಿ ಇದ್ದರೂ, 1950ರಲ್ಲಿ ಅದು ಪ್ರಬಲವಾಯಿತು. ಬಳಿಕ ಸಾಮಾಜಿಕ ಚಳವಳಿಯ ಭಾಗವಾಗಿ ಬೀದಿ ನಾಟಕಗಳು ಪ್ರಾರಂಭವಾದವು. ಅವುಗಳನ್ನು ಸರ್ಕಾರ ಬದಲಾವಣೆ ಹಾಗೂ ಸುಧಾರಣೆಯ ವಾಹಕವಾಗಿ ಬಳಸಿಕೊಂಡಿತು. ಈಚೆಗೆ ಮಾರುಕಟ್ಟೆಯಲ್ಲಿ ವಸ್ತುಗಳ ಪ್ರಚಾರಕ್ಕಾಗಿಯೂ ಬೀದಿ ನಾಟಕ ಬಳಕೆ ಆಗುತ್ತಿದೆ. ಜನಸಾಮಾನ್ಯರ ಮೇಲೆ ಬೀದಿ ನಾಟಕ ಬೀರುವ ಪ್ರಭಾವ ಸಹ ದೊಡ್ಡದು' ಎಂದು ಹೇಳಿದರು. ಹಿರಿಯ ಸಾಹಿತಿ ಪ್ರೊ.ಸಿ.ವಿ.ಪಾಟೀಲ್ ಆಶಯ ನುಡಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.