ತಿರುವನಂತಪುರ: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವು ಕೇರಳ ವಿರುದ್ಧ ಇನಿಂಗ್ಸ್ ಹಾಗೂ 164 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಪ್ರಸಕ್ತ ಸಾಗುತ್ತಿರುವ ರಣಜಿ ಋತುವಿನಲ್ಲಿ ಮೊದಲ ಗೆಲುವು ದಾಖಲಿಸಿರುವ ಮಯಂಕ್ ಅಗರವಾಲ್ ಪಡೆಯು, ಎಲೈಟ್ 'ಬಿ' ಗುಂಪಿನಲ್ಲಿ 10 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.

ಕರ್ನಾಟಕ ತಂಡವು ಆಡಿರುವ ಮೊದಲೆರಡು (ಸೌರಾಷ್ಟ್ರ ಮತ್ತು ಗೋವಾ ವಿರುದ್ಧ) ಪಂದ್ಯಗಳೂ ಡ್ರಾ ಆಗಿದ್ದವು.

ಮಂಗಲಪುರದ ಕೆಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರುಣ್ ನಾಯರ್ (233) ಹಾಗೂ ಸ್ಮರಣ್ ರವಿಚಂದ್ರನ್ ಅಮೋಘ ದ್ವಿಶತಕಗಳ (200*) ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ನಷ್ಟಕ್ಕೆ 586 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ವಿದ್ವತ್ ಕಾವೇರಪ್ಪ (4 ವಿಕೆಟ್) ಹಾಗೂ ವೈಶಾಖ ವಿಜಯಕುಮಾರ್ (3 ವಿಕೆಟ್) ದಾಳಿಗೆ ತತ್ತರಿಸಿದ ಕೇರಳ, ಮೊದಲ ಇನಿಂಗ್ಸ್ನಲ್ಲಿ 238 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು.

ಮೊದಲ ಇನಿಂಗ್ಸ್ನಲ್ಲಿ 348 ರನ್ಗಳ ಮುನ್ನಡೆ ಗಳಿಸಿದ್ದ ಕರ್ನಾಟಕ, ಎದುರಾಳಿ ತಂಡದ ಮೇಲೆ ಫಾಲೋ ಆನ್ ಹೇರಿತ್ತು. ಬಳಿಕ ಮೊಹಸಿನ್ ಸಿಂಗ್ ದಾಳಿಗೆ ನಲುಗಿದ ಕೇರಳ ದ್ವಿತೀಯ ಇನಿಂಗ್ಸ್ಲ್ಲಿ 184 ರನ್ಗಳಿಗೆ ಸರ್ವಪತನ ಕಂಡಿತು. ಮೊಹಸಿನ್ 29 ರನ್ ತೆತ್ತು ಆರು ವಿಕೆಟ್ ಗಳಿಸಿ ಮಿಂಚಿದರು.
.ರಣಜಿ ಟ್ರೋಫಿ: ವಿದ್ವತ್, ವೈಶಾಖ ದಾಳಿಗೆ ಕುಸಿದ ಕೇರಳ.ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.