ನವದೆಹಲಿ: ಭಾರತ ತಂಡದ ಮಾಜಿ ಸ್ಪಿನ್ನರ್ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನ ಸ್ಪಿನ್ ವಿಭಾಗದ ಮುಖ್ಯಸ್ಥರಾಗಿರುವ ಸುನಿಲ್ ಜೋಶಿ ಅವರು ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಭಾರತ ಎ ತಂಡ ನವೆಂಬರ್ 14 ರಿಂದ ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ನಲ್ಲಿ ಭಾಗವಹಿಸಲಿದೆ .

ಈ ತಂಡದಲ್ಲಿ ಐಪಿಎಲ್ನಲ್ಲಿ ಮಿಂಚಿರುವ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ನಮನ್ ಧೀರ್, ನೆಹಾಲ್ ವಧೇರಾ ಮತ್ತು ರಮಣದೀಪ್ ಸಿಂಗ್ ರಂತಹ ತಾರಾ ಆಟಗರರನ್ನು ಒಳಗೊಂಡಿದೆ. ಇತ್ತೀಚೆಗೆ ಬಿಸಿಸಿಐ ಸಿಒಇ ಸೇರಿರುವ ಜೋಶಿ, ಆಸ್ಟ್ರೇಲಿಯಾ ಎ ವಿರುದ್ಧದ ಟೂರ್ನಿಯಲ್ಲೂ ಭಾರತ ಎ ತಂಡಕ್ಕೆ ಕೋಚ್ ಜವಾಬ್ದಾರಿ ನಿಭಾಯಿಸಿದ್ದರು.

ಸದ್ಯ, ಸುನಿಲ್ ಜೋಶಿಯವರು ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ನಲ್ಲಿ ಭಾರತ ಎ ತಂಡದ ಮುಖ್ಯ ತರಬೇತುದಾರರಾಗಿರುತ್ತಾರೆ. ಇವರ ಜೊತೆಗೆ ಬ್ಯಾಟಿಂಗ್ ಕೋಚ್ ಆಗಿ ಅಪೂರ್ವ ದೇಸಾಯಿ ಮತ್ತು ಪಲ್ಲವ್ ವೋಹ್ರಾ ಫೀಲ್ಡಿಂಗ್ ಕೋಚ್ ಇರಲಿದ್ದಾರೆ.

ಜೋಶಿಯವರು ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಮೆಂಟ್ಗಾಗಿ ಭಾರತ ಎ ತಂಡದ ತರಬೇತುದಾರರಾಗಿ ಆಗಿ ಹೋಗಲಿದ್ದಾರೆ. ಸದ್ಯ, ಭಾರತ ಎ ತಂಡದ ತರಬೇತುದಾರರಾಗಿರುವ ಹೃಷಿಕೇಶ್ ಕಾನಿಟ್ಕರ್ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡದ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಿರತರಾಗಿರುತ್ತಾರೆ.
.ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ಗೆ ಭಾರತ–ಎ ತಂಡ ಪ್ರಕಟ: RCB ಆಟಗಾರನಿಗೆ ನಾಯಕತ್ವ.ಸ್ಪಿನ್ ಕೋಚ್ ಹುದ್ದೆ: ರೇಸ್ನಲ್ಲಿ ಕನ್ನಡಿಗ ಸುನಿಲ್ ಜೋಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.