ಮೈಸೂರು: ಪೋಷಕ ನಟರಾಗಿ, ಮೇಷ್ಟ್ರು, ಮನೆ ಯಜಮಾನ, ಹಿರಿಯಣ್ಣ, ಖಳನಾಯಕನಾಗಿ ಬೆಳ್ಳಿತೆರೆ ಮೇಲೆ ಮಿಂಚಿದ ಡಾ.ಕೆ.ಎಸ್.ಅಶ್ವಥ್ ಅವರನ್ನು ಸ್ನೇಹಿತರು, ಅಭಿಮಾನಿಗಳು ಮನದುಂಬಿ ನೆನೆದರು.

`ನಾಗರಹಾವು~ ಚಿತ್ರದಲ್ಲಿ ಮೇಷ್ಟ್ರು ಪಾತ್ರದ ಮೂಲಕ ಕನ್ನಡಿಗರ ಎದೆಯಾಳದಲ್ಲಿ ಅಚ್ಚಳಿಯದೆ ಉಳಿದಿರುವ ಅಶ್ವಥ್ ಅವರಿಗೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ `ಗೀತ ನಮನ~ ಸಲ್ಲಿಸಲಾಯಿತು.

ಅಶ್ವಥ್ ಅವರ 88 ನೇ ಜನ್ಮದಿನ ಪ್ರಯುಕ್ತ ವಾರ್ತಾ ಇಲಾಖೆ ಸಹಯೋಗ ದೊಂದಿಗೆ ಕಲಾಮಂದಿ ರದಲ್ಲಿ ನಡೆದ `ಕರ್ಮಯೋಗಿ ನಮ್ಮ ಚಾಮಯ್ಯ ಮೇಷ್ಟ್ರು~ ರೂಪಕ ಮತ್ತು ರಸಮಂಜರಿ ಕಾರ್ಯಕ್ರಮದಲ್ಲಿ ಚಾಮಯ್ಯ ಮೇಷ್ಟ್ರು ಅಭಿಮಾನಿಗಳು, ಶಿಷ್ಯವೃಂದ ಅಪಾರ ಸಂಖ್ಯೆಯಲ್ಲಿ ನೆರೆದಿತ್ತು.

ಅಶ್ವಥ್ ನಟಿಸಿದ ಹಳೆಯ ಚಿತ್ರಗಳ ಗೀತೆಗಳನ್ನು ಯುವ ಗಾಯಕರು ಹಾಡುವ ಮೂಲಕ ರಂಜಿಸಿದರು. ಅಶ್ವತ್ಥ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಯಕರ ತಂಡ `ನಮ್ಮ ಮಕ್ಕಳು~ ಚಿತ್ರದ `ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ~ ಹಾಡುತ್ತಿದ್ದಂತೆ ತಂದೆಯನ್ನು ನೆನೆದ ಶಂಕರ್ ಅಶ್ವಥ್ ಕಂಬನಿಗರೆದು ಗದ್ಗದಿತರಾದರು. ಅಶ್ವಥ್ ಅವರ ಕುಟುಂಬದವರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. `ಅಶ್ವಥ್ ಮತ್ತೆ ಹುಟ್ಟಿ ಬಾ ಚಾಮಯ್ಯ ಮತ್ತೆ ಹುಟ್ಟಿ ಬಾ..~ ಗಾಯನ ಸಭಾಂಗಣದಲ್ಲಿ ಮೊಳಗಿತು.

ಯುವ ಗಾಯಕ ವ್ಯಾಸರಾಜ್ `ಜಗದೀಶನಾಡುವ ಜಗವೇ ನಾಟಕ ರಂಗ~ ಗಾನ ಲಹರಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯುವ ಗಾಯಕಿ `ಭಾರತ ಭೂಶಿರ ಮಂದಿರ ಸುಂದರಿ..~ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಸ್ವರ್ಣಗೌರಿ ಚಿತ್ರದ `ನಟವರ ಗಂಗಾಧರ ಉಮಾಶಂಕರ..~ ಗೀತೆಯನ್ನು ಗಾಯಕ ನಾಗಮಂಗಲ ಶ್ರೀನಿವಾಸ್ ಹಾಡಿ ರಂಜಿಸಿದರು.

ಚಿತ್ರೀಕರಣದ ಸಂದರ್ಭದಲ್ಲಿ ವಿಷ್ಣು ಅವರು `ಕೋಹಿ ಹೋತಾ ಜಿಸ್ ಕೋ ಅಪ್ನೆ..~ ಹಿಂದಿಗೀತೆಯನ್ನು ಹಾಡುವಾಗ ಅಶ್ವಥ್ ಇದನ್ನು ಕೇಳಿಸಿಕೊಂಡು ಮತ್ತೆ ಹಾಡುವಂತೆ ಕೇಳಿಕೊಂಡಿದ್ದರಂತೆ. ಅಶ್ವಥ್ ಅವರ ನೆಚ್ಚಿನ ಗೀತೆಯಾದ ಇದೇ ಹಾಡನ್ನು ಗುರುರಾಜ್ ಹಾಡಿ ಮನಸೂರೆಗೊಂಡರು. ಅಶ್ವಥ್ ಅವರ ಮತ್ತೊಂದು ನೆಚ್ಚಿನ ಗೀತೆ `ತುಜೆ ಸೂರಜ್ ವೊ ಚಂದಾ...~ ಗೀತೆಯನ್ನು ಗಾಯಕ ಮೈಸೂರು ರಮೇಶ್ ಸುಶ್ರಾವ್ಯವಾಗಿ ಹಾಡಿ ಚಪ್ಪಾಳೆ ಗಿಟ್ಟಿಸಿದರು.

ಶ್ರಾವಣ ಬಂತು ಚಿತ್ರದ `ಇದೇ ರಾಗದಲ್ಲಿ...~, ಶರಪಂಜರ ಚಿತ್ರದ `ಉತ್ತರ ಧ್ರುವದಿಂದ, ದಕ್ಷಿಣ ಧ್ರುವಕು..~ ಗೀತೆಗಳನ್ನು ಗಾಯಕರಾದ ರಮೇಶ್-ಜ್ಯೋತಿ ಮತ್ತು ವ್ಯಾಸರಾಜ-ಜ್ಯೋತಿ ಹಾಡಿದರು. ಹಳೆಯ ಚಿತ್ರದ ಗೀತೆಗಳ ಲಹರಿ ಸಭಾಂಗಣದಲ್ಲಿ ಒಂದೊಂದೇ ಹರಿಯತೊಡಗಿದರೆ, ಅದನ್ನು ಮತ್ತೆ ಮತ್ತೆ ಕೇಳಬೇಕೆಂಬ ಆಸೆ ಪ್ರೇಕ್ಷಕರಲ್ಲಿ ಹೆಚ್ಚುತ್ತಿತ್ತು.

`ಅಶ್ವಥ್ ಶಿಸ್ತಿನ ಸಿಪಾಯಿಯಾಗಿದ್ದರು. ನಾವಿಬ್ಬರು ಸಸ್ಯಹಾರಿಗಳಾಗಿದ್ದರಿಂದ ಬಹುತೇಕ ಚಿತ್ರೀಕರಣಗಳಲ್ಲಿ ಒಂದೇ ಕೊಠಡಿಯಲ್ಲಿ ಇರುತ್ತಿದ್ದೆವು. ಒಮ್ಮೆ ದೋಸೆ ಮೆಲ್ಲಲು ಹೋದಾಗ ಬೇರೆಯವರು ಹಣ ನೀಡಿದ್ದರಿಂದ ಅಶ್ವಥ್ ನನ್ನ ಮೇಲೆ ಮುನಿಸಿಕೊಂಡರು. ಅಂದಿನಿಂದ ನಮ್ಮ ಸ್ನೇಹ ಗಟ್ಟಿಯಾಯಿತು~ ಎಂದು ಹಿರಿಯ ನಟ ಲೋಕನಾಥ್ ನೆನಪಿಸಿಕೊಂಡರು.

`ಅಶ್ವಥ್ ಯಾರೆಂಬುದು ಹಿಂದಿನ ಪೀಳಿಗೆಗೆ ಗೊತ್ತಿದೆ. ಆದರೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಅದನ್ನು ಗೊತ್ತು ಮಾಡಿಸುವ ಕೆಲಸ ಮಾಡಬೇಕಿದೆ. ಅಶ್ವಥ್ ಅವರ ಕುರಿತು ಪುಸ್ತಕಗಳನ್ನು ಹೊರತರುವ ಜೊತೆಗೆ ಅವರ ಚಿತ್ರಗಳನ್ನು ತೋರಿಸಬೇಕು~ ಎಂದು ಸಲಹೆ ನೀಡಿದರು. ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.