ಉಡುಪಿ: ಬಸ್ ಚಾಲಕರ ಮೇಲೆ ಉಡುಪಿ ನಗರಸಭೆ ಸದಸ್ಯ ಯಶ್ಪಾಲ್ ಸುವರ್ಣ ಮತ್ತು ಇತರ ನಾಲ್ವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸರ್ವೀಸ್ ಬಸ್ ಚಾಲಕರು ಮತ್ತು ನಿರ್ವಾಹಕರು ಸೋಮವಾರ ಬೆಳಿಗ್ಗೆ ಸೇವೆ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದರು.

ಬಸ್ ಸೇವೆ ಇಲ್ಲದ ಕಾರಣ ವಿವಿಧ ಊರುಗಳಿಗೆ ತೆರಳಬೇಕಿದ್ದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಖಾಸಗಿ ಬಸ್ ಮಾಲೀಕರ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

`ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ ವೇಳೆ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಕೊಂಡು ಬಂದ ಐದು ಮಂದಿ ಬಸ್ ಅನ್ನು ಉದ್ಯಾವರದ ಬಳಿ ಅಡ್ಡಗಟ್ಟಿದರು. ವಾಹನ ದಿಂದ ಇಳಿದ ಯಶ್ಪಾಲ್ ಸುವರ್ಣ ಮತ್ತು ಇತರ ನಾಲ್ಕು ಮಂದಿ ನನ್ನ ಮೇಲೆ ಹಲ್ಲೆ ನಡೆಸಿದರು. ಆಯಿರ ಬಸ್ ಚಾಲಕ ಶಂಶುದ್ದೀನ್, ಇನ್ನೊಂದು ವಿಶಾಲ್ ಬಸ್ ಚಾಲಕ ಮಂಜುನಾಥ ಮತ್ತು ಪ್ರಯಾಣಿಕ ಲಕ್ಷ್ಮಣ ಅವರ ಮೇಲೆಯೂ ಐದು ಮಂದಿ ಹಲ್ಲೆ ಮಾಡಿದರು' ಎಂದು ವಿಶಾಲ್ ಬಸ್ ಚಾಲಕ ದಿನೇಶ್ ಅವರು ಕಾಪು ಠಾಣೆಗೆ ಭಾನುವಾರ ರಾತ್ರಿಯೇ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ಬಸ್ ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಸ್ ಚಾಲಕ- ನಿರ್ವಾಹಕರು ವಾಹನ ಸೇವೆ ಸ್ಥಗಿತಗೊಳಿಸಿ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮುಷ್ಕರ ಆರಂಭಿಸಿದರು.

ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಆರೋಪಿ ಗಳನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದರೂ ಚಾಲಕರು ಸ್ಪಂದಿಸಲಿಲ್ಲ. ಸ್ಥಳಕ್ಕೆ ಬಂದ ಡಿವೈಎಸ್ಪಿ ಡಾ. ಪ್ರಭುದೇವ ಮಾನೆ, ಇನ್ಸ್ಟೆಪೆಕ್ಟರ್ ಮಾರುತಿ ನಾಯಕ್, ಮುಷ್ಕರ ನಿರತರ ಮನವೊಲಿಸಲು ಯತ್ನಿಸಿದರು. ಬಂಧನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದರು.

ಇದಕ್ಕೆ ಒಪ್ಪದ ಸಿಬ್ಬಂದಿ `ಮಂಗಳೂರಿನಿಂದ ನಮ್ಮ ಸಂಘದ ಪದಾಧಿಕಾರಿಗಳು ಬಂದ ನಂತರ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ' ಎಂದರು. ಎರಡು ಮೂರು ಬಾರಿ ಪೊಲೀಸರು ಮನವಿ ಮಾಡಿದರೂ ಮುಷ್ಕರ ಹಿಂದಕ್ಕೆ ಪಡೆಯಲಿಲ್ಲ. 11.20ರ ಸುಮಾರಿಗೆ ಮುಷ್ಕರ ಹಿಂದಕ್ಕೆ ಪಡೆದ ಸಿಬ್ಬಂದಿ ಬಸ್ ಸೇವೆ ಆರಂಭಿಸಿದರು.

ಪರದಾಡಿದ ಜನರು: ಬಸ್ ಸೇವೆ ದಿಢೀರ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಉಡುಪಿಯಿಂದ ವಿವಿಧ ಊರುಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಬೆಳಿಗ್ಗೆ ಎಂಟು ಗಂಟೆವರೆಗೆ ಕೆಲವು ಬಸ್ಗಳು ಸಂಚರಿಸಿದವು. ಆ ಬಸ್ಗಳಲ್ಲಿ ಉಡುಪಿ ಮುಂತಾದ ಸ್ಥಳಗಳ ತಲುಪಿದ್ದ ಜನರು ಅಲ್ಲಿಂದ ಮುಂದೆ ಹೋಗಬೇಕಾದ ಸ್ಥಳಕ್ಕೆ ತಲುಪಲಾಗದೆ ಅರ್ಧದಲ್ಲೇ ನಿಲ್ಲಬೇಕಾಯಿತು. ಶಾಲಾ- ಕಾಲೇಜು ವಿದ್ಯಾರ್ಥಿಗಳೂ ವಾಪಸ್ ಮನೆಗೆ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಶಿವಮೊಗ್ಗ, ಕೊಲ್ಲೂರು, ಮಂಗಳೂರು ಮುಂತಾದ ದೂರದ ಊರುಗಳಿಗೆ ಹೋಗ ಲಾಗದೆ ಜನರು ತೊಂದರೆ ಅನುಭವಿಸಿದರು.
ಖಾಸಗಿ ಬಸ್ಗಳ ಪಾಸ್ ಪಡೆದಿದ್ದ ಸರ್ಕಾರಿ ನೌಕರರು ಮಂಗಳೂರು ಮುಂತಾದ ಊರುಗಳಿಗೆ ತಲುಪಲಾಗಲಿಲ್ಲ. ಕೆಲವರು ಸರ್ಕಾರಿ ಬಸ್ಗಳ ಮೂಲಕ ಪ್ರಯಾಣ ಬೆಳೆಸಿದರು. ಇದರಿಂದಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಬಸ್ಗಳೂ ಪ್ರಯಾಣಿಕರಿಂದ ತುಂಬಿದ್ದ ದೃಶ್ಯ ಕಂಡು ಬಂತು.

ಸರ್ಕಾರಿ ಬಸ್ ಹೆಚ್ಚಿಸಿ ಅನುಕೂಲ ಮಾಡಿಕೊಡಿ: ಒತ್ತಾಯ
ಉಡುಪಿ: ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ತೊಂದರೆ ನೀಡಿದ ಖಾಸಗಿ ಬಸ್ ಸಿಬ್ಬಂದಿಯ ವರ್ತನೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. ಸಮಸ್ಯೆಯನ್ನು ಕಾನೂನು ರೀತಿಯಲ್ಲಿ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಏಕಾಏಕಿ ಬಸ್ ಸೇವೆ ಸ್ಥಗಿತಗೊಳಿಸಿ ಜನರಿಗೆ ತೊಂದರೆ ನೀಡಿರುವುದು ಸರಿಯಲ್ಲ. ಪೊಲೀಸರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು.

ಉಡುಪಿಯಿಂದ ಶಿವಮೊಗ್ಗ, ಮಂಗಳೂರು, ಕೊಲ್ಲೂರು, ಕಾರ್ಕಳ ಮುಂತಾದ ಭಾಗಗಳಿಗೆ ಹೆಚ್ಚಿನ ಸರ್ಕಾರಿ ಬಸ್ಗಳನ್ನು ನೀಡಬೇಕು ಎಂದು ಜನರು ಮತ್ತು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಖಂಡನೀಯ: ಮಾಹಿತಿ ನೀಡದೆ ಸೋಮವಾರ ದಿಢೀರ್ ಬಸ್ ಮುಷ್ಕರ ನಡೆಸಿ ಜನ ಸಾಮಾನ್ಯರೊಂದಿಗೆ ಚೆಲ್ಲಾಟವಾಡಿದ ಬಸ್ ಮಾಲೀಕರ ಮತ್ತು ಚಾಲಕರ ವರ್ತನೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉಡುಪಿ ಘಟಕ ಖಂಡಿಸಿದೆ.

ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ ಚಾಲಕನನ್ನು ಸಾರ್ವಜನಿಕರು ಹಿಡಿದು ಹೊಡೆದಿದ್ದಾರೆ. ಘಟನೆ ನಡೆದ ದಿನವೇ ತಮ್ಮ ಮನವಿಯನ್ನು ಪೋಲೀಸ್ ಇಲಾಖೆಗೆ ಸಲ್ಲಿಸದೆ, ಸೋಮವಾರ ಮುಷ್ಕರ ನಡೆಸಿರುವುದು ಖಂಡನೀಯ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

ದಿಢೀರ್ ಪ್ರತಿಭಟನೆ ಮಾಡುವ ವರ್ತನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಖಾಸಗಿ ಬಸ್ಸುಗಳ ಸೇವೆಯನ್ನು ಕಡಿತಗೊಳಿಸಿ ಸರ್ಕಾರಿ ಬಸ್ಗಳನ್ನು ಒದಗಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಅಲಿ ಕಾಪು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.