ಶನಿವಾರ, ಮೇ 8, 2021
26 °C

ಚಿಂತನೆ- ರಂಜನೆ- ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು: ಶನಿವಾರ ಚಿಂತನೆ- ರಂಜನೆ- ಅಭಿನಂದನೆ. ಮಧ್ಯಾಹ್ನ 2.30ಕ್ಕೆ `ಕನ್ನಡ ಸಾಹಿತ್ಯದ ಯುಗ ನಿರ್ಮಾಪಕರು~ ಮರುಚಿಂತನೆ ಗೋಷ್ಠಿಯಲ್ಲಿ ಡಾ.ಎನ್.ಆರ್. ಲಲಿತಾಂಬ (ಪಂಪ), ಡಾ. ಸೆಲ್ವಕುಮಾರಿ (ಬಸವಣ್ಣ), ಡಾ.ಎಚ್.ಎನ್. ಮುರಳೀಧರ್ (ಕುಮಾರವ್ಯಾಸ), ಪ್ರೊ.ಭಕ್ತರಹಳ್ಳಿ ಕಾಮರಾಜ್ (ಕುವೆಂಪು).ಅಧ್ಯಕ್ಷತೆ: ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ.

ಸಂಜೆ 5.15ಕ್ಕೆ ಆನಂದ್ ಮಾದಲಗೆರೆ, ಮೃತ್ಯುಂಜಯ ದೊಡ್ಡವಾಡ, ವಿಜಯ ಹಾವನೂರ, ನಾಗಚಂದ್ರಿಕಾ ಭಟ್, ಕೆ.ಪದ್ಮಾವತಿ ಅವರಿಂದ ಸುಗಮ ಸಂಗೀತ್ಠ. ನವನೀತ ಕೃಷ್ಣ (ಕೀಬೋರ್ಡ್), ಮಾರುತಿ (ತಬಲಾ), ವೇಣು (ರಿದಂಪ್ಯಾಡ್).

ನಾಡೋಜ ದೇ. ಜವರೇಗೌಡ ಅವರಿಂದ ಕಥೆಗಾರ, ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರಿಗೆ ಸನ್ಮಾನ. ಅತಿಥಿಗಳು: ಡಾ.ಹಿ.ಶಿ.ರಾಮಚಂದ್ರೇಗೌಡ, ಅಶ್ವತ್ಥನಾರಾಯಣ, ಪುಂಡಲೀಕ ಹಾಲಂಬಿ.ಅಧ್ಯಕ್ಷತೆ: ಡಾ. ನಲ್ಲೂರು ಪ್ರಸಾದ್.

ಬೈರಮಂಗಲ ರಾಮೇಗೌಡ ಅವರು ಜಾನಪದ ವಿಶ್ವಕೋಶದ ಸಹಾಯಕ ಸಂಪಾದಕರಾಗಿ ದುಡಿದಿದ್ದಾರೆ. ಸದ್ಯ ರಾಜಾಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಧ್ಯಾಪಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ.`ರಸಸಿದ್ಧಿ~, `ರಸಗ್ರಹಣ~ ಮತ್ತು `ರಸಾನುಭೂತಿ~ ಇವರ ವಿಮರ್ಶಾ ಕೃತಿಗಳು. `ಈ ಪರಿಯ ಸೊಬಗು~,`ಜಾನಪದ ದರ್ಶನ~ ಹಾಗೂ ಜಗತ್ತಿನ ಜಾನಪದ ಕಥೆಗಳು~ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿವಿಜಿ ಇಂಡಿಯಾ ಪ್ರಕಾಶನ ಸಂಸ್ಥೆ ಕುವೆಂಪು ಅವರ 108ನೇ ಜನ್ಮದಿನದಂದು ಹೊರತರುತ್ತಿರುವ 108 ಪುಸ್ತಕಗಳ ಸಂಪಾದಕರಾಗಿ ಕಾರ್ಯರ್ನಿಹಿಸುತ್ತಿದ್ದಾರೆ.ಸ್ಥಳ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.