ಯಾದಗಿರಿ: ಕಲೆ ಎಂಬುದು ಮನುಷ್ಯನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದು ನಮ್ಮ ಕಾರ್ಯದಲ್ಲಿ ಅಡಗಿದೆ. ಕಲೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಮ್ಮಲ್ಲಿರುವ ವಿಶೇಷತೆ ಅರ್ಥವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗುಲ್ಬರ್ಗ ಆಯುಕ್ತಾಲಯದ ವಿಷಯ ಪರಿವೀಕ್ಷಕ ಟಿ. ದೇವಿಂದ್ರಪ್ಪ ಹೇಳಿದರು.

ಚಿತ್ರಕಲಾ ಶಿಕ್ಷಕರ ಸಂಘದ ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳ ವತಿಯಿಂದ ತಾಲ್ಲೂಕಿನ ಅಜಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ವಾರ್ಷಿಕ ಚಿತ್ರಕಲಾ ಪ್ರದರ್ಶನ ಹಾಗೂ ಸಾಧನಾಶ್ರೀ ಪುರಸ್ಕಾರ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಅತಿ ಮುಖ್ಯವಾಗಿದೆ. ಅದರಲ್ಲಿ ಚಿತ್ರಕಲಾ ವಿಷಯ ಮಹತ್ವದ್ದಾಗಿದ್ದು, ಇದು ಜನರ ಮೇಲೆ ಸಂಪರ್ಕ ಮಾಧ್ಯಮವಾಗಿ ಪ್ರಭಾವ ಬೀರುವಂಥದ್ದಾಗಿದೆ. ಪ್ರಯತ್ನದಿಂದ ಮಾತ್ರ ಕಲೆಯಲ್ಲಿ ಸಾಧನೆ ಮಾಡಲು ಸಾಧ್ಯ. ಅದರಲ್ಲಿಯೂ ಗಡಿ ಭಾಗದಲ್ಲಿ ವಾಸಿಸುತ್ತಿದ್ದು, ಶಿಕ್ಷಕರು ಹಾಗೂ ಮಕ್ಕಳು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದರು.

ವಿವಿಧ ವಿಷಯ ಬೋಧನೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಲಿಂಗರಡ್ಡಿ ನಾಯಕ, ಸೈಯದ್ ಶೇರ ಅಲಿ, ಸೂರ್ಯಪ್ರಕಾಶ ಘನಾತೆ, ಸತ್ಯನಾರಾಯಣರೆಡ್ಡಿ, ಬಸವರಾಜ ಕಟ್ಟಮನಿ, ಎನ್. ವೆಂಕಟೇಶ, ಬಸವರಾಜ ಕಲೇಗಾರ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ ನೀಡಲಾಯಿತು. ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸಾಧನಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜ್ಞಾನ ಶಿಕ್ಷಕ ಸೂರ್ಯಪ್ರಕಾಶ ಘನಾತೆ, ಶಿಕ್ಷಕರ ಸಾಧನೆಗೆ ಸರಿಯಾದ ಪ್ರೋತ್ಸಾಹ ಈ ಭಾಗದಲ್ಲಿ ಇಲ್ಲದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀಕ್ಕುಮಾರ ದೋಖಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಾರುತಿ ಮುಂಡಾಸ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಲಿಂಗಪ್ಪ, ಮುಖ್ಯಾಧ್ಯಾಪಕರಾದ ಮಲ್ಲಿಕಾರ್ಜುನ, ಮಹ್ಮದ್ ಆಸಿಫುಲ್ಲ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿಂದ್ರಮ್ಮ, ಪಾಂಡಯ್ಯ, ಸಾಬಮ್ಮ, ಶರಣಬಸಪ್ಪಸ್ವಾಮಿ, ಮಹಾದೇವಪ್ಪ ಸ್ವಾಮಿ ಆಗಮಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರಪ್ಪ ಶಿರೋಳ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮಕ್ಕಳಿಂದ ರಚಿಸಿದ ಚಿತ್ರಗಳ ಪ್ರದರ್ಶನ ಮಾಡಲಾಯಿತು. ವರ್ಣಚಿತ್ರ, ರೇಖಾ ಚಿತ್ರ, ಹಸ್ಸೆ ಕಲಾ, ಕರಕುಶಲ ಪ್ರದರ್ಶನ ನೋಡುಗರಿಗೆ ಮಕ್ಕಳ ಪ್ರತಿಭೆಯನ್ನು ಪರಿಚಯಿಸಿದವು. ಶಿಕ್ಷಕರಾದ ಗೂಳಪ್ಪ ಮಲ್ಹಾರ, ಜಿ.ಎಸ್. ಗುರುನಂಜಿ, ರಾಚಯ್ಯ ಸ್ವಾಮಿ ಬಾಡಿಯಾಲ್, ವಿಜಯಕುಮಾರ, ಕಾಶಿನಾಥ, ವಿಶ್ವನಾಥ, ಚಿತ್ರಕಲಾ ಶಿಕ್ಷಕರಾದ ಶಂಕರಪ್ಪ, ಶಿವಕುಮಾರ ದಂಡಿಗಿಮಠ, ಸತೀಶ, ಗೋವಿಂದಪ್ಪ, ಶಿವಾನಂದ, ದೇವರಾಜ, ಗೋವಿಂದ, ಭೀಮಣ್ಣ ವಡವಟ್, ರಾಜುಸಿಂಗ್, ಅನಿಲ ನಾಯಕ, ಮಲ್ಲಿಕಾರ್ಜುನ ಕುಡ್ಲೂರು, ಉಪನ್ಯಾಸಕ ದೇವಿಂದ್ರಪ್ಪ, ಬಸಲಿಂಗಪ್ಪ ಕುಡ್ಲೂರು, ಬಸಲಿಂಗಪ್ಪ ವಡಿಗೇರಿಕರ್, ವಿಜಯಕುಮಾರ, ಹಣಮಂತಪ್ಪ ಮೇಸ್ತ್ರಿ, ಯಲ್ಲಪ್ಪ, ಶಾಲಾ ಮಕ್ಕಳು, ಗ್ರಾಮದ ನಾಗರಿಕರು ಭಾಗವಹಿಸಿದ್ದರು.

ಕೃಷ್ಣವೇಣಿ ಪ್ರಾರ್ಥಿಸಿದರು. ಸವಿತಾ ಸ್ವಾಗತ ಗೀತೆ ಹಾಡಿದರು. ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗೋಂಧಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಜಪ್ಪ ನಿರೂಪಿಸಿದರು. ಚಿತ್ರಕಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಗಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.