ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು `ಭಾರತಿ ಯುಗ~ ಆರಂಭವಾಗಿದೆ. ಇವರು ಡಾ.ಭಾರತಿ. ನಟನೆಗೂ ಮುನ್ನವೇ ಸ್ಟೆಥಸ್ಕೋಪ್ ಸಹವಾಸ ಮಾಡಿದವರು. ನಾಡಿ ಹಿಡಿದು ರೋಗ ಗುಣಪಡಿಸಲು ಹೊರಟವರು.

ಹಾಗೆ ಔಷಧ ಲೋಕದಲ್ಲಿ ವಿಹರಿಸುತ್ತಿರುವಾಗಲೇ ಅವರನ್ನು ಕೈ ಬೀಸಿ ಕರೆದಿದ್ದು ಸಿನಿಮಾ ಜಗತ್ತು. `ಕೃಷ್ಣ ಸನ್ಆಫ್ ಸಿ.ಎಂ~ ಅವರು ಅಭಿನಯಿಸುತ್ತಿರುವ ಮೊದಲ ಸಿನಿಮಾ. `ಕೃಷ್ಣನ್ ಲವ್ಸ್ಟೋರಿ~ ಖ್ಯಾತಿಯ ಅಜಯ್ರಾವ್ ಜೋಡಿಯಾಗಿ ಅವರು ನಟಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಪಿಯು ಮುಗಿಸಿದ ನಂತರ ಬೆಳ್ಳೂರು ಕ್ರಾಸ್ನ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ. ಏಳು ವರ್ಷ ಅಭ್ಯಾಸ. ಓದಿನಲ್ಲಿ ಸದಾ ಮುಂದು. ವೈದ್ಯಕೀಯ ಪದವಿಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗುವುದೇ ಅಪರೂಪ. ಅದನ್ನು ಸಾಧಿಸಿ ತೋರಿಸಿದರು ಭಾರತಿ.

ಅಂತಿಮ ವರ್ಷದಲ್ಲಿ ಶೇ 71ರಷ್ಟು ಅಂಕಗಳೊಂದಿಗೆ ಪದವಿ ಪಡೆದರು. ಚಿಕ್ಕಂದಿನಿಂದ ಭರತನಾಟ್ಯದ ಸೆಳೆತ. ಸಂಧ್ಯಾರಾವ್, ಸುಪ್ರಿಯಾ ಹರಿಪ್ರಸಾದ್ ಇವರ ನೃತ್ಯಗುರುಗಳು. ಕಾಲೇಜು ದಿನಗಳಲ್ಲಿ ಸಹಪಾಠಿಗಳು `ಸಿನಿಮಾ ನಾಯಕಿಯಾಗಲು ಲಾಯಕ್ಕು~ ಎಂದು ಹೇಳಿದ್ದೇ ಚಿತ್ರರಂಗ ಪ್ರವೇಶಿಸಲು ದಾರಿಯಾಯಿತು.

ಹಾಗೆಂದು ಧುತ್ತನೆ ಕ್ಯಾಮೆರಾ ಎದುರು ನಿಲ್ಲುವ ಇತರರಂತಲ್ಲ ಭಾರತಿ. ಎಲ್ಲವೂ ಶಿಸ್ತಾಗಿ ಆಗಬೇಕು ಎಂಬುದು ಅವರ ತಿಳಿವಳಿಕೆ. ಹೀಗಾಗಿ ನೇರ ಚಿತ್ರರಂಗಕ್ಕೆ ಬಾರದೆ `ಅಭಿನಯ ತರಂಗ~ ರಂಗ ತರಬೇತಿ ಸಂಸ್ಥೆಗೆ ಸೇರ್ಪಡೆ.

ಅಲ್ಲಿ ನಟನೆಯ ಪಾಠ. ಅಭಿನಯದ ಗುಟ್ಟುಗಳು, ಕ್ಯಾಮೆರಾ ಎದುರಿಸುವುದು ಹೇಗೆ, ಇತ್ಯಾದಿ ಇತ್ಯಾದಿ ಅಭಿನಯದ ಮೊದಲ ಅಕ್ಷರಗಳನ್ನು ಕಲಿತರು. ಆರ್ಕಿಟೆಕ್ಟ್ ಅಕ್ಕ, ಎಂಜಿನಿಯರ್ ಅಣ್ಣನಿಂದಲೂ ಅಭಿನಯಕ್ಕೆ ಬೆಂಬಲ.

ಅವರನ್ನು ಚಿತ್ರರಂಗಕ್ಕೆ ಕರೆತಂದದ್ದು ನಿರ್ಮಾಪಕ ಅಣಜಿ ನಾಗರಾಜ್. ಅವರ ನಿರ್ಮಾಣದ ಚಿತ್ರವೊಂದರಲ್ಲಿ ಮೊದಲು ಅಭಿನಯಿಸಬೇಕಿದ್ದ ಭಾರತಿ ಕಡೆಗೆ `ಕೃಷ್ಣ...~ನ ಕರೆಗೆ ಓಗೊಟ್ಟರು.

ಮೊದಲ ಸಿನಿಮಾ ಅವರಿಗೆ ಸಾಕಷ್ಟು ಪಾಠ ಹೇಳಿಕೊಟ್ಟಿದೆ. ಛಾಯಾಗ್ರಾಹಕರು ಸೇರಿದಂತೆ ವಿವಿಧ ತಂತ್ರಜ್ಞರಿಂದ ಸಿನಿಮಾದ ಬಗ್ಗೆ ಕಲಿತಿದ್ದಾರೆ. ಮೊದಲ ಸಲ ಕ್ಯಾಮೆರಾ ಎದುರಿಸಿದಾಗ ಆದ ರೋಮಾಂಚನ, ಆತಂಕ ಅವರ ಪಾಲಿಗೆ ಸವಿ ಸವಿ ನೆನಪು.

ಅವಿನಾಶ್, ಶೋಭರಾಜ್, ಭವ್ಯ ಮುಂತಾದ ಅನುಭವಿ ನಟರೊಂದಿಗೆ ಕಾಣಿಸಿಕೊಳ್ಳುವುದು ಸುಮ್ಮನೆ ಮಾತಾಗಿರಲಿಲ್ಲ. ಹೀಗಾಗಿ ಅಭಿನಯ ತರಂಗದಲ್ಲಿ ಕಲಿತದ್ದು ನೆರವಿಗೆ ಬಂದಿದೆ. ಸ್ವಲ್ಪವಾದರೂ ನಟನೆಯ ಬಗ್ಗೆ ತಿಳಿದಿದ್ದರೆ ದೊಡ್ಡ ಕಲಾವಿದರ ಮುಂದೆ ಅಭಿನಯಿಸುವುದು ಸುಲಭವಾಗುತ್ತದೆ ಎಂಬ ಅವರ ನಂಬಿಕೆ ಫಲಿಸಿದೆ.

ಚಿತ್ರದ ನಿರ್ಮಾಪಕ ಯೋಗೀಶ್ ಹುಣಸೂರು ಹೇಳುವಂತೆ ಭಾರತಿ ಎಂದಿಗೂ ಬೇಕಾಬಿಟ್ಟಿ ಕೆಲಸ ಮಾಡಿದವರಲ್ಲ. ತಿಳಿಯದೇ ಇರುವ ಸಂಗತಿಗಳನ್ನು ಆಸಕ್ತಿಯಿಂದ ಕಲಿತವರು.

ಇಷ್ಟರಲ್ಲಾಗಲೇ ತಮಿಳು ತೆಲುಗು ಚಿತ್ರರಂಗದಿಂದಲೂ ಕೆಲವು ಅವಕಾಶಗಳು ಅವರನ್ನು ಅರಸಿ ಬಂದವಂತೆ. ಆದರೆ ಒಂದು ಸಿನಿಮಾದ ನಂತರ ಮತ್ತೊಂದು ಸಿನಿಮಾ ಎನ್ನುವುದು ಅವರ ನೀತಿ. `ಕೃಷ್ಣ...~ ಇದೇ ಮೇ ಜೂನ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಆ ಹೊತ್ತಿಗೆ ಅಣಜಿ ನಾಗರಾಜ್ ಅವರ ಚಿತ್ರವೊಂದು ಸೆಟ್ಟೇರಲಿದೆ. ಆನಂತರವಷ್ಟೇ ಬೇರೆ ಚಿತ್ರಗಳತ್ತ ಮುಖ ಮಾಡಲು ಅವರು ನಿರ್ಧರಿಸಿದ್ದಾರೆ.

`ಬೇರೆ ಬೇರೆ ವೃತ್ತಿಯಲ್ಲಿರುವವರು ಚಿತ್ರರಂಗಕ್ಕೆ ಬರಬೇಕು. ಚಿತ್ರರಂಗವನ್ನು ಪ್ರವೃತ್ತಿಯಾಗಿಟ್ಟುಕೊಳ್ಳಬೇಕು~ ಎನ್ನುವ ಭಾರತಿ, `ಆಸಕ್ತಿ ಮುಖ್ಯ. ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ~ ಎಂದು ನಂಬಿದವರು.

ಚಿತ್ರರಂಗಕ್ಕೆ ಬಂದಮೇಲೆ ವೈದ್ಯಕೀಯ ವೃತ್ತಿ ಹೊಳೆಯಲ್ಲಿ ಹುಣಸೆ ತೊಳೆದಂತಾಯಿತು ಎಂಬ ಮಾತನ್ನು ಅವರು ಬಿಲ್ಕುಲ್ ಒಪ್ಪುವುದಿಲ್ಲ. ವೈದ್ಯಳಾಗಬೇಕು ಎಂಬುದು ಅವರು ಚಿಕ್ಕಂದಿನಿಂದಲೂ ಕಂಡ ಕನಸು. ಅದು ಈಗ ಸಾಧ್ಯವಾಗಿದೆ. ನಟನೆಯನ್ನೂ ಹಾಗೇ ಹಚ್ಚಿಕೊಂಡು ಬೆಳೆದ ಅವರಿಗೆ ವೈದ್ಯಳಾಗಿದ್ದು ಸಂತಸ ತಂದರೆ ನಟಿಯಾಗಿರುವುದು ಅದರ ದುಪ್ಪಟ್ಟು ಖುಷಿ ತಂದಿದೆ.

ಇಷ್ಟಾದರೂ ಅವರಿಗೆ ನಟಿಯರ ಅಭಿನಯದ ಆಯಸ್ಸು ಎಷ್ಟೆಂಬುದು ಗೊತ್ತು. ಹದಿ ಹರಯದಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ನಟಿಯರಂತಲ್ಲ ತಾನು ಎಂಬ ಅಳಕು ಕಾಡುತ್ತಿದೆ. ಚಿತ್ರರಂಗದಲ್ಲಿ ಕಳೆಯಬೇಕಿದ್ದ ಅರ್ಧದಷ್ಟು ಕಾಲವನ್ನು ಓದಿನಲ್ಲಿ ಕಳೆದಿದ್ದಾರೆ. ಹಾಗಾಗಿ ಎರಡೂ ದೋಣಿಯ ಯಾನ ಅವರಿಗಿಷ್ಟ.

ಆ ಪಯಣದಲ್ಲಿ ಅವರು ಕಡೆಗೂ ಆಯ್ದುಕೊಳ್ಳುವುದು ವೈದ್ಯಕೀಯ ಜಗತ್ತನ್ನೇ ಅಂತೆ. ಮಕ್ಕಳ ತಜ್ಞೆಯಾಗಿ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಬಹುದಿನದ ಕನಸನ್ನು ಅವರು ಬಿಚ್ಚಿಟ್ಟರು. ವೈದ್ಯ ವೃತ್ತಿಯಲ್ಲಿದ್ದರೂ ನಟನೆ ಮುಂದುವರಿಸಬಹುದಲ್ಲಾ ಎಂಬ ಲಹರಿ ಹರಿಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.