ಬುಧವಾರ, ಜೂಲೈ 8, 2020
29 °C

ಚಿತ್ರರಸಿಕರ ಎಕ್ಸ್‌ಪ್ರೆಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರರಸಿಕರ ಎಕ್ಸ್‌ಪ್ರೆಸ್!

`ಎಲ್ಲರನ್ನೂ ಒಲೈಸುವ, ತೃಪ್ತಿಪಡಿಸುವ ದೃಷ್ಟಿಯಿಂದ ಪ್ರಶಸ್ತಿ ಕೊಡಬೇಡಿ. ಸೀಮಿತ ವಿಭಾಗಗಳಿಗೆ ಮಾತ್ರ ಅರ್ಹರನ್ನು ಹುಡುಕಿ ಪ್ರಶಸ್ತಿ ಕೊಡಿ. ಆಗ ಮಾತ್ರ ಆ ಪ್ರಶಸ್ತಿಗೊಂದು ಗೌರವ ಬರಲು ಸಾಧ್ಯ~ ಎಂದರು ರಾಘವೇಂದ್ರ ರಾಜಕುಮಾರ್.ಸುವರ್ಣ ಚಾನಲ್ ನೀಡುವ ಮೂರನೇ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಆರಂಭದ ಸಂದರ್ಭದಲ್ಲಿ ಅವರು ಚಾನಲ್‌ನ ಮುಖ್ಯಸ್ಥರೊಂದಿಗೆ ವೇದಿಕೆ ಮೇಲಿದ್ದರು.`ಫಿಲಂಫೇರ್ ಮಟ್ಟಕ್ಕೆ ಒಂದು ಪ್ರಶಸ್ತಿ ಏರಬೇಕೆಂದರೆ ಪಾರದರ್ಶಕತೆ ಎಂಬುದು ಮುಖ್ಯ ಎಂದ~ ರಾಘವೇಂದ್ರ ರಾಜಕುಮಾರ್ ಅವರಿಗೆ ಸುವರ್ಣ ಪ್ರಶಸ್ತಿಗಳನ್ನು ಆರಿಸುತ್ತಿರುವ ತೀರ್ಪುಗಾರರು ಇಷ್ಟವಾಗಿದ್ದಾರೆ. ಈ ಸಲಹೆಗಳನ್ನು ಪರಿಗಣಿಸುವುದಾಗಿ ಹೇಳಿದ ವಾಹಿನಿಯ ಅಧಿಕಾರಿ ಅನೂಪ್ ಚಂದ್ರಶೇಖರ್, ಸಿನಿಮಾ ಮತ್ತು ಟಿವಿ ಎರಡೂ ಹೇಗೆ ಅವಲಂಬಿತ ಕ್ಷೇತ್ರಗಳು ಎಂಬುದನ್ನು ವಿವರಿಸಿದರು.`ರಾಜ್ಯದಾದ್ಯಂತ ನಮ್ಮ ವಾಹನ ಚಲಿಸುತ್ತದೆ. ಸಂಚಾರಿ ಮತಗಟ್ಟೆ ಮೂಲಕ ಪ್ರೇಕ್ಷಕರಿಂದ ಮತ ಸಂಗ್ರಹಿಸಿ ಪ್ರೇಕ್ಷಕರ ಮೆಚ್ಚುಗೆ ವಿಭಾಗದ ಪ್ರಶಸ್ತಿಗಳನ್ನು ಕೊಡಲಾಗುವುದು. ಜನರಿಂದ ಮತಸಂಗ್ರಹ ನಡೆಯುತ್ತದೆ. ಎಸ್‌ಎಂಎಸ್ ಮೂಲಕವೂ ಆಯ್ಕೆ ಪ್ರಕ್ರಿಯೆ ನಡೆಸಿ ಪ್ರಶಸ್ತಿ ನೀಡಲಾಗುವುದು~ ಎಂದ ಅವರಿಗೆ ತಮ್ಮದು ರಾಷ್ಟ್ರಮಟ್ಟದ ಪ್ರಶಸ್ತಿಯಾಗಬೇಕು ಎನ್ನುವ ಆಸೆ.ಆಸ್ಕರ್ ಮಟ್ಟಕ್ಕೆ ತಮ್ಮ ಪ್ರಶಸ್ತಿಯನ್ನು ರೂಪಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದವರು ಚಾನಲ್‌ನ ರಾಘವೇಂದ್ರ ಹುಣಸೂರು.ತೀರ್ಪುಗಾರರಲ್ಲಿ ಒಬ್ಬರಾದ ದ್ವಾರಕೀಶ್- `ಯುವಕರು ರೂಪಿಸಿರುವ ಸಿನಿಮಾಗಳನ್ನು ನೋಡಿ ಯುವಕನಾಗಿ ಹೋಗಿದ್ದೇನೆ~ ಎಂದು ನಗಿಸಿದರು. ಬಳಿಕ ಸೂಕ್ತರಿಗೆ ಪ್ರಶಸ್ತಿ ನೀಡುವುದಾಗಿ ಭರವಸೆ ನೀಡಿದ ಅವರು ಪ್ರಶಸ್ತಿಗಳ ಅಗತ್ಯವನ್ನು ಸೂಚ್ಯವಾಗಿ ತಿಳಿಸಿದರು.

 

ಮತ್ತೊಬ್ಬ ತೀರ್ಪುಗಾರರಾದ ನಟಿ ತಾರಾ ತಮಗೆ ಸಿಕ್ಕಿರುವ ಆಯ್ಕೆಯ ಸ್ವಾತಂತ್ರ್ಯವನ್ನು ಕೊಂಡಾಡಿದರು. `ಪ್ರಶಸ್ತಿ ಪ್ರಕಟವಾದ ನಂತರವೂ ತಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿ ಇರುವ ನಂಬಿಕೆ ಇದೆ~ ಎಂದು ಮುಗುಳ್ನಕ್ಕರು. ಜೋಗಿ ಇನ್ನೊಬ್ಬ ತೀರ್ಪುಗಾರರು. ಅವರು ಅರ್ಹರಿಗೆ ಪ್ರಶಸ್ತಿ ಕೊಟ್ಟು ನಂಬಿಕೆ ಉಳಿಸಿಕೊಳ್ಳುವ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರೇಕ್ಷಕರು ಆಯ್ಕೆ ಮಾಡುವ ಕಾಗದದ ಪ್ರತಿಗಳನ್ನು ರಾಘವೇಂದ್ರ ರಾಜ್‌ಕುಮಾರ್ ಬಿಡುಗಡೆ ಮಾಡಿದರೆ, ಅಭಿಪ್ರಾಯ ಸಂಗ್ರಹಿಸುವ ವಾಹನ `ಚಿತ್ರರಸಿಕರ ಎಕ್ಸ್‌ಪ್ರೆಸ್~ಗೆ ಗೃಹ ಸಚಿವ ಆರ್.ಅಶೋಕ್ ಸಚಿವ ಹಸಿರು ನಿಶಾನೆ ತೋರಿದರು.

ಜೂನ್ 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.