ಭಾನುವಾರ, ಜನವರಿ 26, 2020
28 °C

ಚಿತ್ರ ಸಂತೆಯಲ್ಲಿ ಚಿತ್ರಕಲಾ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾವಿದರನ್ನು ನೇರವಾಗಿ ಜನರೊಂದಿಗೆ ಮುಖಾಮುಖಿಯಾಗಿಸುವ ಚಿತ್ರಸಂತೆ ಈ ಭಾನುವಾರ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 8ರವರೆಗೂ ಈ ಸಂತೆಯಲ್ಲಿ ಕಲಾಕೃತಿಗಳ ವಹಿವಾಟು ನಡೆಯಲಿದೆ.

 

ಒಂದು ರೂಪಾಯಿಯಿಂದ ಲಕ್ಷ ರೂಪಾಯಿ ಮೌಲ್ಯಗಳವರೆಗಿನ ಕಲಾಕೃತಿಗಳು ಈ ಸಂತೆಯಲ್ಲಿ ಮಾರಾಟವಾಗಲಿವೆ. ಕಳೆದ ವರ್ಷ 2 ಕೋಟಿ ರೂಪಾಯಿಗೂ ಮೀರಿ ವ್ಯಾಪಾರವಾಗಿತ್ತು.ಈ ವರ್ಷವೂ ದೇಶದ ವಿವಿಧೆಡೆಯಿಂದ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಕಡಿಮೆ ಬೆಲೆಗೆ ಕಲಾಕೃತಿಗಳ ಮಾರಾಟವಾಗಲಿ ಎಂಬ ಉದ್ದೇಶದಿಂದಲೇ ಉಚಿತ ಮಳಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂತೆಯಲ್ಲಿ ಅಡ್ಡಾಡಿ ದಣಿದವರಿಗಾಗಿ ಆಹಾರ ವ್ಯವಸ್ಥೆಯೂ ಇದೆ. ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಪರವಾ ಇಲ್ಲ, ಕ್ರೆಡಿಟ್ ಕಾರ್ಡುಗಳನ್ನೂ ಸ್ವೀಕರಿಸಲಾಗುತ್ತದೆ. ಸಂತೆಗೆ ಬನ್ನಿ.ನೀವೂ ಪಾಲ್ಗೊಳ್ಳಿ: ನೀವೂ ಚಿತ್ರ ಸಂತೆಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ  `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಬಳಗವು ಎಲ್ಲ ವಯೋಮಾನದವರಿಗಾಗಿ ಪೇಂಟಿಂಗ್, ಡ್ರಾಯಿಂಗ್ ಹಾಗೂ ಫೇಸ್ ಪೇಂಟಿಂಗ್ ಸ್ಪರ್ಧೆಯನ್ನು ಏರ್ಪಡಿಸಿದೆ. ಚಿತ್ರ ಹಾಗೂ ಪೇಂಟಿಂಗ್‌ಗೆ ಹಾಳೆಯನ್ನು ನೀಡಲಾಗುವುದು. ಉಳಿದ ಪರಿಕರಗಳನ್ನು ಸ್ಪರ್ಧಾರ್ಥಿಗಳೇ ತರಬೇಕು. ಸ್ಪರ್ಧೆಯ ಸಮಯ ಬೆಳಗ್ಗೆ: 9.00 ಮಾಹಿತಿಗೆ: 9845553848

ಪ್ರತಿಕ್ರಿಯಿಸಿ (+)