ನವದೆಹಲಿ (ಪಿಟಿಐ): ಚಿನ್ನ ಖರೀದಿಯ ಪವಿತ್ರ ದಿನಗಳಲ್ಲಿ ಒಂದಾಗಿರುವ ಸೋಮವಾರದ `ದಂತೆರಾಸ್~ಗಾಗಿ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಚಿನ್ನದ ವಹಿವಾಟಿನ ಮ್ಯೂಚುವಲ್ ಫಂಡ್ಗಳಲ್ಲಿನ (ಜಿಇಟಿಎಫ್) ವಹಿವಾಟಿನ ಅವಧಿಯನ್ನು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಿವೆ.

ಚಿನಿವಾರ ಪೇಟೆಯಲ್ಲಿನ ವಹಿವಾಟಿಗೆ ಪೂರಕವಾಗಿ ಈ ಅವಧಿ ಹೆಚ್ಚಿಸಲಾಗಿದೆ. ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. `ಇಟಿಎಫ್~ ಖರೀದಿ ವಹಿವಾಟು ಶುಲ್ಕವನ್ನೂ ಮನ್ನಾ ಮಾಡಲೂ ಎರಡೂ ಷೇರುಪೇಟೆಗಳು ನಿರ್ಧರಿಸಿವೆ.

ಚಿನ್ನವನ್ನು ಭೌತಿಕ ರೂಪದಲ್ಲಿ ಖರೀದಿಸದೇ, ಷೇರುಪೇಟೆಗಳಲ್ಲಿ ಎಲೆಕ್ಟ್ರಾನಿಕ್ಸ್ ರೂಪದಲ್ಲಿ ಯೂನಿಟ್ ಲೆಕ್ಕದಲ್ಲಿ ಖರೀದಿಸಿ ಡಿಮ್ಯಾಟ್ ಖಾತೆಯಲ್ಲಿ ಇಟ್ಟುಕೊಳ್ಳುವ `ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್~ (ಜಿಇಟಿಎಫ್)ಗಳನ್ನು ಖರೀದಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರಲ್ಲಿ ತುಂಬ ಜನಪ್ರಿಯವಾಗಿದೆ.

ಚಿನ್ನದ ಇಟಿಎಫ್ಗಳ ಪ್ರತಿಯೊಂದು ಯೂನಿಟ್ ಸಾಮಾನ್ಯವಾಗಿ ಒಂದು ಗ್ರಾಂ ಚಿನ್ನಕ್ಕೆ ಸಮನಾಗಿರುತ್ತದೆ. ಈ ಯೂನಿಟ್ಗಳನ್ನು ಮಾರಾಟ ಮಾಡಿದರೆ ಭೌತಿಕ ರೂಪದ ಚಿನ್ನ ಮಾರಾಟ ಮಾಡಿದಷ್ಟೇ ವರಮಾನ ಬರುತ್ತದೆ. ಇಲ್ಲಿ ಚಿನ್ನವನ್ನು ಬಳಿಯಲ್ಲಿ ಭೌತಿಕ ರೂಪದಲ್ಲಿ ಇಟ್ಟುಕೊಳ್ಳುವ ತಲೆನೋವು ಇರುವುದಿಲ್ಲ.

`ಇಟಿಎಫ್~ ಯೂನಿಟ್ಗಳು ಇಲ್ಲಿ ಎಲೆಕ್ಟ್ರಾನಿಟ್ ರೂಪದಲ್ಲಿ ಡಿಮ್ಯಾಟ್ ಖಾತೆಯಲ್ಲಿ ಇರುತ್ತವೆ. ಕಳೆದ ವರ್ಷದ ದಂತೆರಾಸ್ದಿಂದ ಇಲ್ಲಿಯವರೆಗೆ `ಇಟಿಎಫ್~ಗಳ ಬೆಲೆ ಶೇ 33ರಷ್ಟು ಹೆಚ್ಚಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.