ಬುಧವಾರ, ಏಪ್ರಿಲ್ 21, 2021
23 °C

ಚಿನ್ನದ ಧಾರಣೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಕಳೆದ ಒಂದು ವಾರದಿಂದ ಕುಸಿಯುತ್ತಿದ್ದು, ಇದರ ಪರಿಣಾಮ ಶುಕ್ರವಾರದ  ಇಲ್ಲಿ 10 ಗ್ರಾಂ ಸ್ಟಾಂಡ ರ್ಡ್ ಚಿನ್ನದ ಬೆಲೆ  ರೂ 840  ಇಳಿಕೆ ಕಂಡು ರೂ32,100ರಷ್ಟಾಗಿದೆ. ಬೆಳ್ಳಿ ಧಾರಣೆ ಕೂಡ ಕೆ.ಜಿಗೆ ರೂ800 ಏರಿಕೆ ಕಂಡಿದ್ದು ರೂ62,800 ತಲುಪಿದೆ.

ಷೇರುಪೇಟೆಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಳೆದ ನಾಲ್ಕು ದಿನಗಳಿಂದ ಚಿನ್ನದ ಧಾರಣೆ ನಿರಂತರ ಇಳಿಕೆ ಕಾಣುತ್ತಿದೆ. ಶುಕ್ರವಾರ ಆಭರಣ ಚಿನ್ನದ ಬೆಲೆ 175 ಇಳಿಕೆಯಾಗಿದ್ದು, 31,475 ರಷ್ಟಾಗಿದೆ.

ಷೇರುಪೇಟೆ ಚೇತರಿಕೆ

ಮುಂಬೈ (ಪಿಟಿಐ)
: ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ  169 ಅಂಶಗಳಷ್ಟು ಏರಿಕೆ ಕಂಡಿದ್ದು 19 ತಿಂಗಳಲ್ಲೇ ಗರಿಷ್ಠ ಮಟ್ಟವಾದ 19,339 ಅಂಶಗಳನ್ನು ತಲುಪಿದೆ. `ನಿಫ್ಟಿ' 55 ಅಂಶಗಳಷ್ಟು ಚೇತರಿಕೆ ಕಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.