ಮಂಗಳವಾರ, ಮೇ 11, 2021
26 °C

ಚಿನ್ನ,ಬೆಳ್ಳಿ: ಧಾರಣೆ ಮತ್ತಷ್ಟು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಹೂಡಿಕೆದಾರರಿಂದ ಮಾರಾಟ ಒತ್ತಡ ಹೆಚ್ಚಿರುವುದರಿಂದ ಚಿನ್ನದ ಬೆಲೆ ಮತ್ತೊಮ್ಮೆ ರೂ 27 ಸಾವಿರದ ಗಡಿ ಇಳಿದಿದೆ. ಶುಕ್ರವಾರದ ವಹಿವಾಟಿನಲ್ಲಿ ಇಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ರೂ265 ಕುಸಿತ ಕಂಡು ರೂ 26,895ಕ್ಕೆ ಇಳಿದಿದೆ. ಬೆಳ್ಳಿ ಬೆಲೆ ಕೆ.ಜಿಗೆ ರೂ765 ಕುಸಿದಿದ್ದು ರೂ 42,350ರಷ್ಟಾಗಿದೆ.

  

ದೆಹಲಿಯಲ್ಲಿರೂ620 ಕುಸಿತ


ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ  ಸ್ಟ್ಯಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗಳಿಗೆರೂ620 ತಗ್ಗಿದ್ದು 2 ವಾರದ ಹಿಂದಿನ ಮಟ್ಟವಾದರೂ27,380ಕ್ಕೆ ಜಾರಿದೆ. ಬೆಳ್ಳಿ ಮೌಲ್ಯ ಕೆ.ಜಿಗೆರೂ1,400 ಕುಸಿದಿದ್ದುರೂ41,700ಕ್ಕೆ ಇಳಿದಿದೆ.  ಒಟ್ಟಾರೆ ಕಳೆದ 3 ವಹಿವಾಟು ಅವಧಿಗಳಲ್ಲಿ ಚಿನ್ನದ ಮೌಲ್ಯರೂ1100ರಷ್ಟು ಕುಸಿತ ಕಂಡಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಚಿನ್ನದ ಮೌಲ್ಯ ಶುಕ್ರವಾರ ಪ್ರತಿ ಔನ್ಸ್‌ಗೆ 73.50 ಡಾಲರ್‌ಗಳಷ್ಟು ಇಳಿಕೆ ಕಂಡಿದ್ದು 2010ರ ಸೆಪ್ಟೆಂಬರ್‌ನಲ್ಲಿ ದಾಖಲಾದ ಧಾರಣೆ ಮಟ್ಟಕ್ಕೆ ತಗ್ಗಿದೆ.ಮಾರಾಟ ಸ್ಥಗಿತ

ನವದೆಹಲಿ (ಪಿಟಿಐ): ಹಣಕಾಸು ಸೇವಾ ಸಂಸ್ಥೆ ರಿಲಯನ್ಸ್ ಕ್ಯಾಪಿಟಲ್ ತನ್ನ ಎಲ್ಲ ವಹಿವಾಟುಗಳಿಂದ ಚಿನ್ನ ಮಾರಾಟವನ್ನು ರದ್ದುಪಡಿಸಿದೆ.

ಚಾಲ್ತಿ ಖಾತೆ ಕೊರತೆ (ಸಿಎಡಿ) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.