ಗುರುವಾರ , ಮೇ 13, 2021
24 °C

ಚಿನ್ನ, ಬೆಳ್ಳಿ ಬೆಲೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾರಾಟ ಒತ್ತಡದ ಫಲವಾಗಿ, ಇಲ್ಲಿಯ ಚಿನಿವಾರ ಪೇಟೆಯಲ್ಲಿಯೂ ಚಿನ್ನದ ಬೆಲೆಯು ಕುಸಿಯುತ್ತಲೇ ಸಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿನ ಅನಿರೀಕ್ಷಿತ ವಿದ್ಯಮಾನದಿಂದ ಗಾಬರಿಗೊಂಡಿರುವ ಹೂಡಿಕೆದಾರರು ಮತ್ತು ವರ್ತಕರು ತಮ್ಮ ಬಳಿಯಲ್ಲಿ ಇರುವ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಕೈಗಾರಿಕೆ ಬೇಡಿಕೆ ಕುಸಿದ ಕಾರಣ ಮತ್ತು ಊಹಾತ್ಮಕ ಮಾರಾಟದ ಪರಿಣಾಮ ಬೆಳ್ಳಿ ಬೆಲೆಯೂ ಕುಸಿತ ಕಂಡಿತು.ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ ರೂ 1,270ರಂತೆ ಕುಸಿದು ರೂ 25,590ಕ್ಕೆ ತಲುಪಿತ್ತು. ಬೆಳ್ಳಿ ಬೆಲೆ ಪ್ರತಿ ಕೆಜಿಗೆ  5,535ರಷ್ಟು ಕಡಿಮೆಯಾಗಿ ರೂ 48,740ಕ್ಕೆ ಇಳಿದಿತ್ತು.ದಿನದಂತ್ಯದಲ್ಲಿ ಸ್ಟ್ಯಾಂಡರ್ಡ್ ಚಿನ್ನ (99.5 ಶುದ್ಧತೆ) ಪ್ರತಿ 10 ಗ್ರಾಂಗಳಿಗೆ ರೂ 635ರಂತೆ ಕುಸಿತ ಕಂಡು ರೂ 26,225ಕ್ಕೆ ತಲುಪಿತು. ಅಪರಂಜಿ ಚಿನ್ನ (99.9 ಶುದ್ಧತೆ) ರೂ 630ರಷ್ಟು ಕಡಿಮೆಯಾಗಿ ರೂ 26,355ಕ್ಕೆ ಇಳಿಯಿತು.ಬೆಳ್ಳಿಯು ಪ್ರತಿ ಕೆಜಿಗೆ ರೂ 2,450ರಷ್ಟು ಕಡಿಮೆಯಾಗಿ ರೂ 54,275ಕ್ಕೆ ಇಳಿಯಿತು. ಗ್ರೀಕ್ ಸಾಲದ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವ ವರದಿಗಳಿಂದಾಗಿ ಚಿನ್ನದ ಮಾರಾಟ ತೀವ್ರಗೊಂಡಿದೆ.

ನ್ಯೂಯಾರ್ಕ್ ವರದಿ (ಬ್ಲೂಂ       ಬರ್ಗ್):  ಚಿನ್ನ ಮತ್ತು ಬೆಳ್ಳಿ ಬೆಲೆಗಳು ನ್ಯೂಯಾರ್ಕ್‌ನಲ್ಲಿಯೂ ಗಮನಾರ್ಹವಾಗಿ ಕುಸಿತ ದಾಖಲಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.