ಗುರುವಾರ , ಏಪ್ರಿಲ್ 15, 2021
24 °C

ಚಿಪ್ಪಗಿರಿ ವಿಜಯದಾಸರ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಿನ ಹಿರಿಯ ದಾಸವರೇಣ್ಯರಾದ ಪುರಂದರದಾಸರು, ಗೋಪಾಲದಾಸರು, ವ್ಯಾಸವಿಠಲರು, ಹಯವದನ ವಿಠಲರ ವೇಷ ತೊಟ್ಟು ವೇದಿಕೆ ಮೇಲೇರಿದ ಸ್ವಾಮೀಜಿಗಳು ಅವರ ಪ್ರತಿರೂಪದಂತೆ ಭಾಸವಾಗುತ್ತಿದ್ದರು.ನಂಜನಗೂಡು ರಾಘವೇಂದ್ರಸ್ವಾಮಿ ಮಠದ ಸುಶಮೇಂದ್ರ ಪ್ರವಚನ ಪೂಜಾ ಮಂದಿರದಲ್ಲಿ ಮಠದ ಸಿಬ್ಬಂದಿ ವರ್ಗದವರಿಂದ ನಡೆದ ನಾಟಕ ಪ್ರದರ್ಶನವದು. ಗಣೇಶನ ಸ್ತುತಿಯೊಂದಿಗೆ ಪ್ರಾರಂಭವಾದ ನಾಟಕ ಭಕ್ತರು ಅಧ್ಯಾತ್ಮದಲ್ಲಿ ಮುಳುಗುವಂತೆ ಮಾಡಿತು.ವಿಶೇಷ ಅತಿಥಿಗಳಾಗಿ ಗೀತಾ ಭಾಯಿ, ಮಂತ್ರಾಲಯ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಮೇಂದ್ರಾಚಾರ್ಯ, ಮಠದ ವ್ಯವಸ್ಥಾಪಕ ವಾದೀಂದ್ರಾಚಾರ್ಯ ಹಾಗು ಉ. ಏ. ಆಚಾರ್ಯರು, ಧರ್ಮಾಧಿಕಾರಿಗಳು ಉಪಸ್ಥಿತರಿದ್ದರು.ಪಾತ್ರವರ್ಗದಲ್ಲಿ ಮಾಂಚಾಲ ಪದ್ಮನಾಭಾಚಾರ್ಯರು, ಶ್ರೀನಿವಾಸರಾವ್, ಲಕ್ಷ್ಮಿ ನರಸಿಂಹರಾವ್, ಹರಿಪ್ರಸಾದ್ ಮೊದಲಾದವರಿದ್ದರು. ರಚನೆ: ನರಸಿಂಹಮೂರ್ತಿ, ನಿರ್ದೇಶನ ಶ್ರೀನಿವಾಸರಾವ್ ಅವರದ್ದು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.