ಮಂಗಳವಾರ, ಆಗಸ್ಟ್ 11, 2020
27 °C

ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಲ್ಲರೆ ಹಣದುಬ್ಬರ ಅಲ್ಪ ಇಳಿಕೆ

ನವದೆಹಲಿ (ಪಿಟಿಐ): ಮದ್ಯ ಹೊರತುಪಡಿಸಿದ ಇತರೆ ಪಾನೀಯಗಳು ಮತ್ತು ಸಕ್ಕರೆ ಬೆಲೆ ತಗ್ಗಿದ ಹಿನ್ನೆಲೆಯಲ್ಲಿ, ಚಿಲ್ಲರೆ ಹಣದುಬ್ಬರ ದರ ಜೂನ್ ತಿಂಗಳಲ್ಲಿ ಅಲ್ಪ ಕುಸಿದಿದ್ದು 10.02ರಷ್ಟಾಗಿದೆ.

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ಮೇ ತಿಂಗಳಲ್ಲಿ ಶೇ 10.36ರಷ್ಟಿತ್ತು. `ಸಿಪಿಐ~ ತಗ್ಗಿದರೂ, ಆಹಾರ ಪದಾರ್ಥ ಮತ್ತು ತರಕಾರಿ ಬೆಲೆ ಹೆಚ್ಚಿದೆ ಎಂದು ಅಂಕಿ ಅಂಶ ಮತ್ತು ಕಾರ್ಯಕ್ರಮ ಜಾರಿ ಖಾತೆಯ ರಾಜ್ಯ ಸಚಿವ  ಶ್ರೀಕಾಂತ್ ಕುಮಾರ್ ಜೀನಾ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ ತರಕಾರಿ ಶೇ 27,  ಖಾದ್ಯ ತೈಲ ಶೇ 16 ಮತ್ತು ಹಾಲಿನ ಉತ್ಪನ್ನಗಳು ಶೇ 12ರಷ್ಟು ತುಟ್ಟಿಯಾಗಿವೆ. ಮೊಟ್ಟೆ, ಮಾಂಸ, ಮೀನು ಮತ್ತು ಬೇಳೆಕಾಳುಗಳ ಧಾರಣೆ ಶೇ 9ರಿಂದ ಶೇ 12ರಷ್ಟು ಹೆಚ್ಚಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ಮತ್ತು `ಸಿಪಿಐ~ ಕುಸಿದಿರುವುದರಿಂದ `ಆರ್‌ಬಿಐ~ ಈ ಬಾರಿ ಬಡ್ಡಿದರ ತಗ್ಗಿಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಸೂಚ್ಯಂಕ ಚೇತರಿಕೆ

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 80 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17,185 ತಲುಪಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವುದರಿಂದ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಖರೀದಿ ಭರಾಟೆ ಹೆಚ್ಚಿದೆ.  ಬಜಾಜ್ ಆಟೊ, ಟಾಟಾ ಪವರ್, ಮಾರುತಿ ಸುಜುಕಿ ಷೇರಗಳು ಲಾಭ ಮಾಡಿಕೊಂಡವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.