ಚೀನಾದಲ್ಲಿ ಭಾರಿ ಮಳೆ, ಪ್ರವಾಹ: 14 ಸಾವು- 11 ಮಂದಿ ಕಣ್ಮರೆ

ಸೋಮವಾರ, ಮೇ 20, 2019
32 °C

ಚೀನಾದಲ್ಲಿ ಭಾರಿ ಮಳೆ, ಪ್ರವಾಹ: 14 ಸಾವು- 11 ಮಂದಿ ಕಣ್ಮರೆ

Published:
Updated:

ಬೀಜಿಂಗ್ (ಪಿಟಿಐ): ಚೀನಾದ ನೈಋತ್ಯ ಭಾಗದಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಕಾರಣ 14 ಮಂದಿ ಸಾವನ್ನಪ್ಪಿದ್ದಾರೆ. 11 ಜನರು ಕಣ್ಮರೆ ಆಗಿದ್ದು, ನೆರೆ ಹಾವಳಿಯಿಂದ 30 ಲಕ್ಷಕ್ಕೂ ಹೆಚ್ಚು ಜನರು ತತ್ತರಿಸಿದ್ದಾರೆ ಎಂದು ಸಿಚುವಾನ್ ಪ್ರಾಂತ್ಯದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.ಸಿಚುವಾನ್ ಪ್ರಾಂತ್ಯದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 16,700 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. 31 ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಒಟ್ಟಾರೆ ಆರು ನೂರು ಕೋಟಿ ಯುವಾನ್‌ಗಳಷ್ಟು (93.75 ಕೋಟಿ ಡಾಲರ್) ನಷ್ಟ ಉಂಟಾಗಿದೆ ಎಂದು `ಕ್ಸಿನ್‌ಹುವಾ~ ಪತ್ರಿಕೆ ವರದಿ ಮಾಡಿದೆ.ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯ ಪಡೆಯು ತನ್ನ ವಿಶೇಷ ತಂಡವನ್ನು ನೆರೆ ಪೀಡಿತ ಪ್ರದೇಶಕ್ಕೆ ರವಾನಿಸಿದೆ. ಪ್ರವಾಹದಲ್ಲಿ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ.ಚೀನಾದಲ್ಲಿ 1847ರ ನಂತರ ದೊಡ್ಡ ಮಟ್ಟದಲ್ಲಿ ಉಂಟಾದ ಪ್ರವಾಹ ಇದಾಗಿದೆ ಎಂದು `ಕ್ಸಿನ್‌ಹುವಾ~ ಪತ್ರಿಕೆ ಹೇಳಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry