ಕ್ರಿಕೆಟ್: ಫೈನಲ್ಗೆ ಜವಾಹರ್, ವಲ್ಚರ್ಸ್
ಬೆಂಗಳೂರು: ಜವಾಹರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಕೆಎಸ್ಸಿಎ ಆಶ್ರಯದ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಸೋಮವಾರ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಈ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6.30ಕ್ಕೆ ಆರಂಭವಾಗಲಿದೆ. ಭಾನುವಾರ ನಡೆದ ಸೆಮಿಫೈನಲ್ನಲ್ಲಿ ಜವಾಹರ್ ತಂಡದವರು 42 ರನ್ಗಳಿಂದ ಸೋಷಿಯಲ್ ಕ್ರಿಕೆಟರ್ಸ್ ಎದುರು ಗೆಲುವು ಸಾಧಿಸಿದರು. ಮತ್ತೊಂದು ಸೆಮಿಫೈನಲ್ನಲ್ಲಿ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡದವರು ಆರು ವಿಕೆಟ್ಗಳಿಂದ ಬೆಂಗಳೂರು ಒಕೆಷನಲ್ಸ್ ತಂಡವನ್ನು ಮಣಿಸಿದರು.

ಸಂಕ್ಷಿಪ್ತ ಸ್ಕೋರ್: ಜವಾಹರ್ ಸ್ಪೋರ್ಟ್ಸ್ ಕ್ಲಬ್: 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 (ಶಿಶಿರ್ ಭವಾನಿ 30, ಮಿರ್ ಕೌನಯನ್ ಅಬ್ಬಾಸ್ 41, ಕೆ.ಸಿ.ಅವಿನಾಶ್ 30, ಜೆ.ಸುಚಿತ್ 23, ಕೆ.ಗೌತಮ್ 33; ಕೆ.ಪಿ.ಅಪ್ಪಣ್ಣ 10ಕ್ಕೆ2); ಸೋಷಿಯಲ್ ಕ್ರಿಕೆಟರ್ಸ್: 19.2 ಓವರ್ಗಳಲ್ಲಿ 148 (ಕೆ.ಬಿ.ಪವನ್ 42, ದೀಪಕ್ ಚೌಗುಲೆ 36; ಕೆ.ಪಿ.ರೋಹನ್ 30ಕ್ಕೆ3, ಜೆ.ಸುಚಿತ್ 4ಕ್ಕೆ16, ಕೆ.ಗೌತಮ್ 36ಕ್ಕೆ2). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್ಗೆ 42 ರನ್ ಗೆಲುವು.

ಬೆಂಗಳೂರು ಒಕೆಷನಲ್ಸ್: 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 (ಅಭಿಷೇಕ್ ರೆಡ್ಡಿ 42, ಸಮರ್ಥ್ ಊಟಿ 22; ಎಸ್.ಅರವಿಂದ್ 18ಕ್ಕೆ2, ಅನಿರುದ್ಧ ಜೋಶಿ 29ಕ್ಕೆ2, ಪವನ್ ದೇಶಪಾಂಡೆ 33ಕ್ಕೆ2); ವಲ್ಚರ್ಸ್ ಕ್ರಿಕೆಟ್ ಕ್ಲಬ್: 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 (ನಿಶ್ಚಿತ್ 22, ಅನಿರುದ್ಧ ಜೋಶಿ ಔಟಾಗದೆ 44, ಬಿ.ಎನ್.ಭರತ್ ಔಟಾಗದೆ 29); ಫಲಿತಾಂಶ: ವಲ್ಚರ್ಸ್ ಕ್ರಿಕೆಟ್ ಕ್ಲಬ್ಗೆ ಆರು ವಿಕೆಟ್ ಜಯ.

ಚೆಸ್: ಆನಂದ್ಗೆ ಗೆಲುವು
ಖಾಂಟಿ ಮನ್ಸಿಸ್ಕ್, ರಷ್ಯಾ (ಪಿಟಿಐ): ಗ್ರ್ಯಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅವರು ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ.

ಭಾನುವಾರ ನಡೆದ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆನಂದ್ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್ ಅವರನ್ನು ಮಣಿಸಿದರು. ಹಾಗಾಗಿ ಅವರಿಗೆ ಪೂರ್ಣ ಪಾಯಿಂಟ್ ಲಭಿಸಿತು. ಭಾರತದ ಈ ಆಟಗಾರನ ಬಳಿ ಈಗ ಒಟ್ಟು ಆರು ಪಾಯಿಂಟ್ಗಳಿವೆ. ಉಳಿದ ಆಟಗಾರರಿಗಿಂತ ಆನಂದ್ ಈಗ ಒಂದು ಪಾಯಿಂಟ್ ಹೆಚ್ಚು ಹೊಂದಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಅರ್ಮೇನಿಯಾದ ಲೆವೋನ್ ಅರೋನಿಯನ್ (5 ಪಾಯಿಂಟ್) ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಆಘಾತ ಅನುಭವಿಸಿದರು. ಅವರು ಅಜರ್ಬೈಜಾನ್ನ ಶಖ್ರಿಯಾರ್ ಮಮೆದ್ಯಾರೋವ್ ಎದುರು ಸೋಲು ಕಂಡರು.

ರಷ್ಯಾದ ಸರ್ಜಿ ಕರ್ಜಾಕಿನ್ ತಮ್ಮ ದೇಶದವರೇ ಆದ ವ್ಲಾಡಿಮಿರ್ ಕ್ರಾಮ್ನಿಕ್ಗೆ ಆಘಾತ ನೀಡಿದರು. ರಷ್ಯಾದ ಡಿಮಿಟ್ರಿ ಆ್ಯಂಡ್ರಿಕಿನ್ ಹಾಗೂ ಪೀಟರ್ ಸ್ವಿಡ್ಲರ್ ನಡುವಿನ ಪಂದ್ಯ ಡ್ರಾ ಆಯಿತು. ಈ ಟೂರ್ನಿಯಲ್ಲಿ ಇನ್ನೂ ಐದು ಸುತ್ತುಗಳ ಆಟ ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.