ಭಾನುವಾರ, ಜೂನ್ 13, 2021
22 °C

ಚುಟುಕು ಗುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕ್ರೀಡಾ ಸಂಸ್ಥೆಗಳು/ಕ್ಲಬ್‌ಗಳ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕ್ರೀಡಾ ತರಬೇತಿ ಶಿಬಿರಗಳ ವಿವರಗಳು ಇಂತಿವೆ.ಕ್ರಿಕೆಟ್: ರಘು ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ 9ನೇ ವರ್ಷದ ಕ್ರಿಕೆಟ್ ಬೇಸಿಗೆ ಶಿಬಿರವು ಏಪ್ರಿಲ್ 4ರಿಂದ ಮೇ 20ರ ವರೆಗೆ ಹಾಗೂ ಜೂನ್ 12ರಿಂದ                2013ರ ಫೆಬ್ರುವರಿ 17ರ ವರೆಗೆ ವಾರ್ಷಿಕ ಶಿಬಿರ ಜರುಗಲಿದೆ.ಮಾಗಡಿ ಮುಖ್ಯರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಶಾಲಾ ಮೈದಾನದಲ್ಲಿ ಶಿಬಿರ ನಡೆಯಲಿದೆ. ರಘು    ಸ್ಪೋರ್ಟ್ಸ್, ನಂ. 180, ಕೆಳಗಿನ ಮಹಡಿ, ಸಂಜೀವಿನಿ ಬಿಲ್ಡಿಂಗ್, ದೊಡ್ಡಯ್ಯ ಗಾರ್ಡನ್, ಮಾಗಡಿ ಮುಖ್ಯ ರಸ್ತೆ, ಕೊಟ್ಟಿಗೆಪಾಳ್ಯ, ಬೆಂಗಳೂರು ಇಲ್ಲಿ ಅರ್ಜಿಗಳು ಸಿಗುತ್ತವೆ.ಹೆಚ್ಚಿನ ಮಾಹಿತಿಗೆ ಮುಖ್ಯ ತರಬೇತುದಾರ ಆರ್. ರಾಘವೇಂದ್ರ 9845104498 ಹಾಗೂ 9964595852 ಇಲ್ಲಿ ವ್ಯವಹರಿಸಿ.ಕ್ರಿಕೆಟ್: ದೊಡ್ಡ ಗಣೇಶ್ ಕ್ರಿಕೆಟ್ ಅಕಾಡೆಮಿ ಆಶ್ರಯದಲ್ಲಿ ಏಪ್ರಿಲ್ 2ರಿಂದ ಬೇಸಿಗೆ ಹಾಗೂ ವಾರ್ಷಿಕ ಕ್ರಿಕೆಟ್ ಶಿಬಿರ ಆರಂಭವಾಗಲಿದೆ.ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತರಬೇತಿ ನೀಡಲಿದ್ದಾರೆ. ಹೇಸರಘಟ್ಟದ ಮುಖ್ಯರಸ್ತೆಯಲ್ಲಿರುವ ಬಾಗಲಕುಂಟೆ ಪಿ.ಯು. ಕಾಲೇಜಿನ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ದೊಡ್ಡ ಗಣೇಶ್ 9844022207, ಮಲ್ಲಿಕಾರ್ಜುನ 9964088652, ನವನೀತ್ 9663210096, ಮಂಜುನಾಥ್ 7259191744 ಹಾಗೂ ಶ್ರೀಕುಮಾರ್ 9886843370 ಇಲ್ಲಿಗೆ ಸಂಪರ್ಕಿಸಬಹುದು.ಟೇಬಲ್ ಟೆನಿಸ್: ಸ್ಟಾರ್ ಟೇಬಲ್ ಟೆನಿಸ್ ಅಕಾಡೆಮಿ ವತಿಯಿಂದ ಮಾರ್ಚ್ 31ರಿಂದ ಏಪ್ರಿಲ್ 30ರ ವರೆಗೆ ಹಾಗೂ ಮೇ 1ರಿಂದ 28ರ ವರೆಗೆ ಎರಡು ಹಂತದಲ್ಲಿ ಬೇಸಿಗೆ ಟೇಬಲ್ ಟೆನಿಸ್ ಶಿಬಿರ ಜರುಗಲಿದೆ.195 `ಎ~, 4ನೇ ಬ್ಲಾಕ್, 56ನೇ ಕ್ರಾಸ್, ರಾಜಾಜಿನಗರ, ಬೆಂಗಳೂರು-560010 ಇಲ್ಲಿ ಶಿಬಿರ ನಡೆಯಲಿದೆ. ಭಾಗವಹಿಸಲು ಆಸಕ್ತಿ ಹೊಂದಿದವರು ಅಕಾಡೆಮಿಯ ಗೌರವ ಕಾರ್ಯದರ್ಶಿ ಎಂ. ಶಶಿಧರನ್ 9844701696 ಅವರನ್ನು ಸಂಪರ್ಕಿಸವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕ್ರಿಕೆಟ್: ಆರ್.ಕೆ. ಕ್ರಿಕೆಟ್ ಅಕಾಡೆಮಿ ಏಪ್ರಿಲ್ 1ರಿಂದ ಮೇ 30ರ ವರೆಗೆ ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಬಾಲಕ ಹಾಗೂ ಬಾಲಕಿಯರಿಗಾಗಿ ಬೇಸಿಗೆ ತರಬೇತಿಶಿಬಿರ ಹಮ್ಮಿಕೊಂಡಿದೆ.7 ವರ್ಷ ಮೇಲ್ಪಟ್ಟ ಹಾಗೂ 20 ವರ್ಷದವರೆಗಿನರಿಗೆ ತರಬೇತಿ ದೊರೆಯಲಿದೆ. ಆಸಕ್ತರು ಆರ್. ಕೃಷ್ಣಪ್ಪ 9141802852 ಇಲ್ಲಿ ವ್ಯವಹರಿಸಬಹುದು.ಕ್ರಿಕೆಟ್: ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 1ರಿಂದ ಮೇ 27ರ ವರೆಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರ ಜರುಗಲಿದೆ.ಪ್ರತಿ ದಿನ ಬೆಳಿಗ್ಗೆ 6.30ರಿಂದ 9.30ರ ವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಪದ್ಮನಾಭನ್ 9845731561 ಇಲ್ಲವೇ Padhud@rediffmail.com ಸಂಪರ್ಕಿಸಬಹುದು.ರುದ್ರೇಶ್‌ಗೆ ಜಿಲ್ಲಾ ಪ್ರಶಸ್ತಿ

ಬೆಂಗಳೂರು: ಅತ್ತಿಬೆಲೆಯ ಶ್ರೀಜಯಭಾರತಿ ಸಹಕಾರ ಪ್ರೌಢಶಾಲಾಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಎಚ್. ರುದ್ರೇಶ್ ಅವರಿಗೆ 2011-12ನೇ ಸಾಲಿನ ಜಿಲ್ಲಾ ಮಟ್ಟದ `ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ~ ಪ್ರಶಸ್ತಿ ಲಭಿಸಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ನಾಗರಾಜನ್ ಅವರು ಇತ್ತೀಚಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.