ಗುರುವಾರ , ಮೇ 6, 2021
22 °C
ಅಕ್ರಮ ಮದ್ಯ ಸಂಗ್ರಹ ದೂರು ಹಿನ್ನೆಲೆ

ಚುನಾವಣಾ ತಂಡದಿಂದ ಮೋಟಮ್ಮ ಮನೆ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಪಟ್ಟಣದ ಹೊಯ್ಸಳ ಕ್ರೀಡಾಂಗ ಣದ ಎದುರಿನಲ್ಲಿರುವ ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅವರ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಡಲಾಗಿದೆ ಎಂದು ಚುನಾವಣಾ ಕಂಟ್ರೋಲ್‌ ರೂಂಗೆ ದೂರು ಬಂದ ಹಿನ್ನೆಲೆ ಯಲ್ಲಿ, ತಾಲ್ಲೂಕು ಚುನಾವಣಾ ಅಧಿಕಾರಿಯೂ ಆದ ತಹಶೀಲ್ದಾರ್‌ ಶಾರದಾಂಬ ನೇತೃತ್ವ ದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ತಂಡ ದಾಳಿ ನಡೆಸಿ ಮನೆಯನ್ನು ತಪಾಸಣೆ ನಡೆಸಿದ ಘಟನೆ ಸೋಮ ವಾರ ನಡೆಯಿತು.ಬೆಳಗ್ಗೆ 10 ಗಂಟೆಯ ಸುಮಾರಿಗೆ ಚುನಾವಣಾ ನಿಯಂತ್ರಣ ಕೊಠಡಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಮೋಟಮ್ಮ ಅವರ ಮನೆಯಲ್ಲಿ ಮದ್ಯ ದಾಸ್ತಾನು ಮಾಡಲಾಗಿದೆ ಎಂಬ ದೂರು ನೀಡಿದ್ದು, ತಕ್ಷಣವೇ ತಹಶೀಲ್ದಾರ್‌ ಶಾರ ದಾಂಬ ಪೊಲೀಸ್‌ ಸಿಬ್ಬಂದಿ, ಅಬಕಾರಿ ಸಿಬ್ಬಂದಿ ಮತ್ತು ನೀತಿ ಸಂಹಿತೆ ಜಾರಿ ತಂಡದೊಡನೆ ಶಾಸಕಿ ಮೋಟಮ್ಮ ಅವರ ಮನೆಗೆ ದೌಡಾಯಿಸಿತು. ದಾಳಿಯ ವೇಳೆ ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಪಿ.ಮನು, ಜಿ.ಪಂ. ಸದಸ್ಯ ಎಂ.ಎಸ್‌. ಅನಂತ್‌ ಅವರು ಮನೆಯ ಒಳಗಿದ್ದರು. ದಾಳಿಯ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ಚುನಾವಣಾಧಿಕಾರಿ ಶಾರದಾಂಬ ತಪಾಸಣೆಗೆ ಅಡ್ಡಿಪಡಿಸ ದಂತೆ ಕೋರಿದರು.ಪ್ರಾರಂಭದಲ್ಲಿ ಅಧಿಕಾರಿ ಗಳೊಂದಿಗೆ ಶಾಸಕಿ ಮೋಟಮ್ಮ ಮತ್ತು ಬ್ಲಾಕ್‌ ಅಧ್ಯಕ್ ಎಂ.ಪಿ.ಮನು ವಾಗ್ವಾದ ನಡೆಸಿದ ರಾದರೂ ತಪಾಸಣೆಗೆ ಅವಕಾಶ ಕಲ್ಪಿಸಿಕೊ ಟ್ಟರು. ತಂಡ ಮೊದಲು ಶಾಸಕಿ ಮೋಟಮ್ಮ ಅವರು ವಾಸಿಸುತ್ತಿರುವ ನೆಲ ಅಂತಸ್ತಿನ ಕಟ್ಟಡ ವನ್ನು ತಪಾಸಣೆ ನಡೆಸಿ, ನಂತರ ಮೊದಲ ಮಹಡಿಯಲ್ಲಿರುವ ಮೋಟಮ್ಮ ಅವರ ಸಂ ಬಂಧಿಕರ ಮನೆಯನ್ನೂ ತಪಾಸಣೆ ನಡೆಸಿದರು.ಇಡೀ ಮನೆಯನ್ನು ಶೋಧಿಸಿದರೂ ತಂಡಕ್ಕೆ ಯಾವುದೇ ಮದ್ಯ ಲಭ್ಯವಾಗಲಿಲ್ಲ. ನಂತರ ದೂರು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸ  ಲಾಗಿದೆ ಯಾವುದೇ ಅಕ್ರಮ ಕಂಡು ಬಂದಿಲ್ಲ ಎಂದು ಚುನಾವಣಾಧಿಕಾರಿ ಶಾರದಾಂಬ ತಿಳಿಸಿದರು. ದಾಳಿಯ ವೇಳೆ ಪೊಲೀಸ್‌ ಠಾಣಾಧಿಕಾರಿ ಅನಂತ ಪದ್ಮನಾಭ, ಅಬಕಾರಿ ಇನ್ಸ್‌ಪೆಕ್ಟರ್‌ ರವೀಶ್‌, ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಮುಖ್ಯಸ್ಥ ರವೀಂದ್ರ, ವಿಡಿಯೋಗ್ರಾಫರ್‌ ಸೋಮಶೇಖರ್‌ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.