ಬುಧವಾರ, ಜೂನ್ 16, 2021
28 °C
ಕ್ರಮಕ್ಕೆ ಚುನಾವಣಾ ಆಯೋಗ ಪತ್ರ

ಚುನಾವಣಾ ಪೂರ್ವ ಸಮೀಕ್ಷೆಯ ಕುಟಿಲತನ: ಕಾಂಗ್ರೆಸ್‌ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದಹೆಲಿ (ಪಿಟಿಐ): ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಕೆಲವು ಸಂಸ್ಥೆ­ಗಳು ಸಮೀಕ್ಷೆಯ ಮಾಹಿತಿಯನ್ನು ತಿರು­ಚಿವೆ ಎಂದು ಆಪಾದಿಸಿ ಕಾಂಗ್ರೆಸ್‌ ನೀಡಿ­ರುವ ದೂರಿಗೆ ಸ್ಪಂದಿಸಿರುವ ಚುನಾ­ವಣಾ ಆಯೋಗ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.ಕಾರ್ಪೊರೇಟ್‌ ವ್ಯವಹಾರ, ವಾರ್ತಾ ಮತ್ತು ಪ್ರಚಾರ ಸಚಿವಾಲಯಗಳಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ‘ಕೆಲವು ಸಂಸ್ಥೆಗಳು ಅಕ್ರಮವಾಗಿ ಹಣ ತೆಗೆದುಕೊಂಡು ಸಂಚು ನಡೆಸಿ ಸಮೀ­ಕ್ಷೆಯ ಅಂಕಿ-ಅಂಶಗಳನ್ನು ತಿರುಚಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದ್ದರಿಂದ ಈ ಬಗ್ಗೆ ತುರ್ತು ಗಮನ­ಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೋರ­ಲಾಗಿದೆ’ ಎಂದು ತಿಳಿಸಲಾಗಿದೆ.ಕಾಂಗ್ರೆಸ್‌ ಅಸಮಾಧಾನ: ಚುನಾವಣಾ ಆಯೋಗದ ಈ ನಡೆಯ ಬಗ್ಗೆ ಅಸ­ಮಾಧಾನ ವ್ಯಕ್ತ ಪಡಿ­ಸಿ­ರುವ ಕಾಂಗ್ರೆಸ್‌, ‘ಸಂವಿಧಾನದ 324ನೇ ಕಲಂ ಅನ್ವಯ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊ­ಳ್ಳುವ ಅಧಿಕಾರ ಇದೆ. ಇದನ್ನು ಆಯೋಗ ಚಲಾಯಿಸಿ­ದ್ದರೆ ಸಮೀಕ್ಷೆ ಮಾಹಿತಿ ತಿರುಚಿ ಜನ­ರನ್ನು ದಿಕ್ಕು ತಪ್ಪಿ­ಸಿದ ಕೆಲವು ಸಂಸ್ಥೆ­ಗಳೊಂದಿಗೆ ನಿಕಟ ಸಂಬಂಧ ಹೊಂದಿ­ರುವ ರಾಜ­ಕೀಯ ಪಕ್ಷ­ಗಳು ಮತ್ತು ವ್ಯಕ್ತಿಗಳ ನೈಜ ಬಣ್ಣವನ್ನು ಬಯಲಾಗು­ತ್ತಿತ್ತು’ ಎಂದು ಹೇಳಿದೆ.ಚುನಾವಣಾ ಸಮೀಕ್ಷೆ ನಡೆಸಿದ 11 ಸಂಸ್ಥೆಗಳು ವರದಿಯನ್ನು ತಿರುಚಿರುವ ಬಗ್ಗೆ ಸುದ್ದಿ ವಾಹಿನಿಗಳು ಮಾರುವೇಷದ ಕಾರ್ಯಾಚರಣೆ ನಡೆಸಿದ್ದವು. ಇದಾದ ನಂತರ ಕಾಂಗ್ರೆಸ್‌ ಚುನಾವಣಾ ಆಯೋ­ಗಕ್ಕೆ ದೂರು ನೀಡಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.