ಗುರುವಾರ , ಜೂನ್ 17, 2021
22 °C

ಚುನಾವಣೆ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ನಿಯುಕ್ತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಲೋಕಸಭೆ ಚುನಾವಣೆ ಅಕ್ರಮ ತಡೆಯಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ಯರನ್ನು ಮಾಹಿತಿದಾ ರರನ್ನಾಗಿ ಬಳಕೆ ಮಾಡಿಕೊಳ್ಳುವ ಚುನಾ ವಣಾ ಆಯೋಗದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ವಿರೋಧ ವ್ಯಕ್ತಪಡಿಸಿದೆ.ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಅಭ್ಯರ್ಥಿಗಳ, ಬೆಂಬಲಿಗರ ಮನೆ, -ಮನೆ ಪ್ರಚಾರದ ವಿವರ, ಹಣ, -ಹೆಂಡ, ಉಡುಗೊರೆ ಹಂಚುವ ಕುರಿತು ತಕ್ಷಣಕ್ಕೆ ನೀತಿ ಸಂಹಿತೆ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆ ಆದೇಶಿಸಲಿರುವ ಆಯೋಗ ಈ ಕುರಿತು ಪುನರ್‌ ಪರಿಶೀಲನೆ ನಡೆಸಬೇಕು ಎಂದು ಕೋರಲಾಗಿದೆ.ಚುನಾವಣೆ ಅಕ್ರಮ ತಡೆಯಲು ಆಡಳಿತ ಯಂತ್ರಕ್ಕೂ, ಪೊಲೀಸ್‌ ಸಿಬ್ಬಂದಿಗೂ ಅಸಾಧ್ಯವಾಗಿರುವಾಗ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರನ್ನು ಮಾಹಿತಿ ನೀಡಲು ನಿಯೋಜಿಸಿದಲ್ಲಿ, ಜನರ ನಡುವೆ ಕೆಲಸ ಮಾಡುವವರು ವಿವಿಧ ರಾಜಕೀಯ ಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.