ಭಾನುವಾರ, ಮೇ 9, 2021
25 °C

ಚೆನ್ನೈಗೆ ಮಣಿದ ಡೆಕ್ಕನ್ : ಮಿಂಚಿದ ಜಡೇಜಾ, ಬ್ರಾವೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ಡ್ವೇನ್ ಬ್ರಾವೊ (ಅಜೇಯ 43, 18 ಎಸೆತ, 5 ಸಿಕ್ಸರ್) ಮತ್ತು ರವೀಂದ್ರ ಜಡೇಜ (48, 29 ಎಸೆತ, 3 ಬೌಂ, 3  ಸಿಕ್ಸರ್) ತೋರಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು 74 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ಬಳಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193 ರನ್ ಗಳಿಸಿತು. ಈ ಸವಾಲನ್ನು ಮುಟ್ಟುವಲ್ಲಿ ಪರದಾಡಿದ ಡೆಕ್ಕನ್ ಜಾರ್ಜರ್ಸ್ 17.1 ಓವರ್‌ಗಳಲ್ಲಿ 119 ರನ್ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು.ರವೀಂದ್ರ ಜಡೇಜಾ (16ಕ್ಕೆ5), ಡಗ್ ಬೊಲಿಂಜರ್ (20ಕ್ಕೆ2) ಹಾಗೂ ಶಾದಬ್ ಜಕಾತಿ (14ಕ್ಕೆ2) ಡೆಕ್ಕನ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.ಸಮರ್ಥವಾಗಿ ಬೌಲಿಂಗ್ ಮಾಡಿದ ಜಡೇಜ ಮತ್ತು ಬ್ರಾವೊ ಎದುರಾಳಿ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ವೆಸ್ಟ್ ಇಂಡೀಸ್‌ನ  ಬ್ಯಾಟ್ಸ್‌ಮನ್ ಕೊನೆಯ ಎರಡು ಓವರ್‌ಗಳಲ್ಲಿ 40 ರನ್‌ಗಳನ್ನು ಪೇರಿಸಿದರು.ಚೆನ್ನೈ ತಂಡ ಮುರಳಿ ವಿಜಯ್ (2) ಅವರನ್ನು ಬೇಗನೇ ಕಳೆದುಕೊಂಡಿತು. ಫಾಫ್ ಡು ಪ್ಲೆಸಿಸ್ (39, 25 ಎಸೆತ, 1 ಬೌಂ, 4 ಸಿಕ್ಸರ್) ಮತ್ತು ಸುರೇಶ್ ರೈನಾ (16) ತಂಡದ ಇನಿಂಗ್ಸ್‌ಗೆ ಬಲ ನೀಡಿದರು. ಎಸ್. ಬದರೀನಾಥ್ 25 ರನ್ ಗಳಿಸಿದರು. ದೋನಿ   (7) ಹೆಚ್ಚು ಹೊತ್ತು ಕ್ರೀಸ್ ಬಳಿ ನಿಲ್ಲಲಿಲ್ಲ.ಸ್ಕೋರು ವಿವರ

ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 193


ಮುರಳಿ ವಿಜಯ್ ಬಿ ಅಂಕಿತ್ ಶರ್ಮ  02

ಫಾಫ್ ಡು ಪ್ಲೆಸಿಸ್ ಸಿ ಕ್ರಿಸ್ಟಿಯನ್ ಬಿ ಸುಧೀಂದ್ರ  39

ಸುರೇಶ್ ರೈನಾ ಸಿ ಮತ್ತು ಬಿ ಡೇನಿಯಲ್ ಕ್ರಿಸ್ಟಿಯನ್  16

ಎಸ್. ಬದರೀನಾಥ್ ಸಿ ಚಿಪ್ಲಿ ಬಿ ಡೇನಿಯಲ್ ಕ್ರಿಸ್ಟಿಯನ್  25

ರವೀಂದ್ರ ಜಡೇಜ ಹಿಟ್‌ವಿಕೆಟ್ ಬಿ ಡೆಲ್ ಸ್ಟೇನ್  48

ಮಹೇಂದ್ರ ಸಿಂಗ್ ದೋನಿ ಸಿ ಹ್ಯಾರಿಸ್ ಬಿ ಡೆಲ್ ಸ್ಟೇನ್  07

ಡ್ವೇನ್ ಬ್ರಾವೊ ಔಟಾಗದೆ  43

ಅಲ್ಬಿ ಮಾರ್ಕೆಲ್ ಔಟಾಗದೆ  02

ಇತರೆ (ಬೈ-1, ಲೆಗ್‌ಬೈ-2, ವೈಡ್-7, ನೋಬಾಲ್-1)  11

ವಿಕೆಟ್ ಪತನ: 1-2 (ವಿಜಯ್; 0.5), 2-42 (ರೈನಾ; 5.3), 3-63 (ಪ್ಲೆಸಿಸ್; 8.1), 4-94 (ಬದರೀನಾಥ್; 12.2), 5-120 (ದೋನಿ; 14.5), 6-147 (ಜಡೇಜ; 17.2)

ಬೌಲಿಂಗ್: ಅಂಕಿತ್ ಶರ್ಮ 3-0-28-1, ಡೆಲ್ ಸ್ಟೇನ್ 4-0-25-2, ಮನ್‌ಪ್ರೀತ್ ಗೋನಿ 4-0-54-0, ಡೇನಿಯಲ್ ಕ್ರಿಸ್ಟಿಯನ್ 4-0-26-2, ಡೇನಿಯಲ್ ಹ್ಯಾರಿಸ್ 1-0-11-0, ಟಿ.ಪಿ. ಸುಧೀಂದ್ರ 4-0-46-1

ಡೆಕ್ಕನ್ ಚಾರ್ಜರ್ಸ್ 17.1 ಓವರ್‌ಗಳಲ್ಲಿ 119


ಡೇನಿಯಲ್ ಹ್ಯಾರಿಸ್ ಸಿ ದೋನಿ ಬಿ ಬೊಲಿಂಜರ್  15

ಶಿಖರ್ ಧವನ್ ಸಿ ಬ್ರಾವೋ ಬಿ ಸುರೇಶ್ ರೈನಾ  21

ಪಾರ್ಥಿವ್ ಪಟೇಲ್ ಬಿ ರವೀಂದ್ರ ಜಡೇಜಾ  20

ಕ್ಯಾಮರಾನ್ ವೈಟ್ ಸಿ ಸುರೇಶ್ ರೈನಾ ಬಿ ಜಕಾತಿ  23

ಭರತ್ ಚಿಪ್ಲಿ ಬಿ ರವೀಂದ್ರ ಜಡೇಜಾ  10

ಡೇನಿಯಲ್ ಕ್ರಿಸ್ಟಿಯನ್ ಸಿ ಬ್ರಾವೋ ಬಿ ಜಕಾತಿ  02

ಮನ್‌ಪ್ರೀತ್ ಗೋಣಿ ಸಿ ಸುರೇಶ್ ರೈನಾ ಬಿ ಜಡೇಜಾ  04

ಡಿ. ರವಿತೇಜ ಸ್ಟಂಪ್ಡ್ ದೋನಿ ಬಿ ಜಡೇಜಾ  00

ಅಂಕಿತ್ ಶರ್ಮ ಸಿ ಮಾರ್ಕೆಲ್ ಬಿ ಬೊಲಿಂಜರ್  15

ಡೇಲ್ ಸ್ಟೈನ್ ಎಲ್‌ಬಿಡಬ್ಲ್ಯು ಜಡೇಜಾ  05

ಟಿ.ಪಿ. ಸುಧೀಂದ್ರ ಔಟಾಗದೆ  00

ಇತರೆ: ಲೆಗ್ ಬೈ-1, ವೈಡ್-3  04

ವಿಕೆಟ್ ಪತನ: 1-32 (ಹ್ಯಾರಿಸ್; 3.6), 2-45 (ಧವನ್; 6.2), 3-77 (ಪಾರ್ಥಿವ್; 10.3), 4-85 (ವೈಟ್; 11.3), 5-94 (ಚಿಪ್ಲಿ; 12.3), 6-98 (ಕ್ರಿಸ್ಟಿಯನ್; 13.5), 7-99 (ಗೋಣಿ; 14.1), 8-99 (ರವಿತೇಜ; 14.3), 9-119 (ಸ್ಟೇನ್; 16.6), 10-119 (ಅಂಕಿತ್; 17.1).

ಬೌಲಿಂಗ್ ವಿವರ: ಆರ್. ಅಶ್ವಿನ್ 3-0-12-0, ಮಾರ್ಕೆಲ್ 2-0-20-0, ಡಗ್ ಬೊಲಿಂಜರ್ 2.1-0-20-2, ಸುರೇಶ್ ರೈನಾ 2-0-10-1, ಡ್ವೇನ್ ಬ್ರಾವೊ 1-0-10-0, ರವೀಂದ್ರ ಜಡೇಜಾ 4-0-16-5, ಶಾದಾಬ್ ಜಕಾತಿ 2-0-14-2, ಫಾಪ್ ದು ಪ್ಲೆಸಿಸ್ 1-0-16-0.

ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ 74 ರನ್ ಜಯ. ಪಂದ್ಯ ಶ್ರೇಷ್ಠ: ರವೀಂದ್ರ ಜಡೇಜಾ (ಚೆನ್ನೈ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.