ಚೆನ್ನೈ (ಐಎಎನ್ಎಸ್): ಈ ಹಿಂದಿನ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟೂರ್ನಿಗಳಲ್ಲಿ ಸಫಲರಾಗಿರುವ ಮಹೇಂದ್ರ ಸಿಂಗ್ ದೋನಿ ಬಳಗ ಮತ್ತೊಂದು ಯಶಸ್ಸಿನ ಸಿಹಿ ಸವಿಯಲು ಸಿದ್ಧವಾಗಿ ನಿಂತಿದೆ.

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಎದುರು ಪೈಪೋಟಿ ನಡೆಸಲಿದೆ.

ಆದರೆ ಕಾಲಿನ ಹೆಬ್ಬೆಟ್ಟಿನ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಮುಂಬೈ ಇಂಡಿಯನ್ಸ್ ನಾಯಕ ಸಚಿನ್ ತೆಂಡೂಲ್ಕರ್ ಈ ಟೂರ್ನಿಗೆ ಲಭ್ಯರಾಗಿಲ್ಲ. ಹಾಗಾಗಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ತಂಡ ಮುನ್ನಡೆಸಲಿದ್ದಾರೆ. ಈ ತಂಡದ ಪ್ರಮುಖ ಅಸ್ತ್ರ ಲಸಿತ್ ಮಾಲಿಂಗ. ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ಗಳನ್ನು ಕಾಡಲು ಸಜ್ಜಾಗಿದ್ದಾರೆ. ಜೊತೆಗೆ ಕೀರನ್ ಪೊಲಾರ್ಡ್ ಹಾಗೂ ಅಂಬಾಟಿ ರಾಯುಡು ಅವರ ಮೇಲೂ ಭರವಸೆ ಇಡಲಾಗಿದೆ.

ಆದರೆ ಚೆನ್ನೈ ತಂಡದ ಮುರಳಿ ವಿಜಯ್ ಹಾಗೂ ಮೈಕ್ ಹಸ್ಸಿ ಅಪಾಯಕಾರಿ ಆರಂಭಿಕ ಬ್ಯಾಟ್ಸ್ಮನ್ಗಳು. ಇದು ಐಪಿಎಲ್ ನಾಲ್ಕನೇ ಅವತರಣಿಕೆಯಲ್ಲಿಯೇ ಸಾಬೀತಾಗಿದೆ. ಸುರೇಶ್ ರೈನಾ, ಎಸ್.ಬದರೀನಾಥ್ ಹಾಗೂ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಈ ತಂಡದ ಬೆನ್ನೆಲುಬು.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.
ವೇಲ್ಸ್ಗೆ ಕೋಬ್ರಾಸ್ ಸವಾಲು: ಶನಿವಾರ ಸಂಜೆ ನಡೆಯಲಿರುವ `ಎ~ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೇಪ್ ಕೋಬ್ರಾಸ್ ಹಾಗೂ ನ್ಯೂ ಸೌಥ್ ವೇಲ್ಸ್ ತಂಡಗಳು ಪೈಪೋಟಿ ನಡೆಸಲಿವೆ. 2009ರಲ್ಲಿ ಚಾಂಪಿಯನ್ ಆಗಿದ್ದ ವೇಲ್ಸ್ ಈ ಪಂದ್ಯದಲ್ಲಿ ಗೆಲುವಿನ ಫೇವರಿಟ್.
ಪಂದ್ಯ ಆರಂಭ: ಸಂಜೆ 4 ಗಂಟೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.