ಗುರುವಾರ , ಫೆಬ್ರವರಿ 25, 2021
23 °C

ಚೆಲ್ಲಾ ಪಿಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಲ್ಲಾ ಪಿಲ್ಲಿ

10ಕೆ ಓಟಕ್ಕಾಗಿ ನೂತನ ಟಿ–ಶರ್ಟ್‌

ಟಿಸಿಎಸ್‌ ವರ್ಲ್ಡ್‌ 10ಕೆ ಓಟಕ್ಕಾಗಿ ನೈಕಿ ಕಂಪೆನಿಯು ನೂತನ ಟಿ–ಶರ್ಟ್‌ ಬಿಡುಗಡೆ ಮಾಡಿದೆ. ಮೇ 18ರಂದು ನಗರದಲ್ಲಿ ನಡೆಯುವ ಓಟದ ಸ್ಪರ್ಧೆಗಾಗಿ ಕಂಪೆನಿಯು ವಿಶೇಷವಾಗಿ ವಿನ್ಯಾಸ ಮಾಡಿದ ಟಿ–ಶರ್ಟ್‌ ಇದಾಗಿದೆ. ಶೇ 100ರಷ್ಟು ಪಾಲಿಸ್ಟರ್‌ನಿಂದ ಮಾಡಿದ ಈ ಟಿ–ಶರ್ಟ್‌ ಹಗುರವಾಗಿದೆ.‘ರನ್‌ ಬೆಂಗಳೂರು’ ಎಂದು ಟಿ–ಶರ್ಟ್‌ ಮುಂಭಾಗದಲ್ಲಿ ಹಾಗೂ ಓಟಗಾರರಿಗೆ ಸ್ಫೂರ್ತಿ ನೀಡುವ ಬರಹವನ್ನು ಹಿಂಬದಿಯಲ್ಲಿ ಮುದ್ರಿಸಲಾಗಿದೆ. ಈ ಟಿ–ಶರ್ಟ್‌ನ ಬೆಲೆ ₨795.

ವಿಮಾನ ನಿಲ್ದಾಣದಲ್ಲಿ ನೂತನ ಲಾಂಜ್

ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ಲಾಜಾ ಪ್ರೀಮಿಯಂ ಲಾಂಜ್ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌, ನೂತನ ಲಾಂಜ್‌ ಆರಂಭಿಸಿದೆ.‘ಆರಾಮದಾಯಕ ವಿಶ್ರಾಂತಿ ಸ್ಥಳ, ಬಿಸಿನೆಸ್‌ ಸೆಂಟರ್‌ ಸೇರಿದಂತೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಅಲ್ಲದೇ ಸ್ಪಾ ಹಾಗೂ ಮಸಾಜ್‌ ಕೇಂದ್ರಗಳೂ ಇಲ್ಲಿವೆ. ಆಸ್ಟ್ರೇಲಿಯಾದ ಮಿಚೆಲ್‌ ಸ್ಕ್ವೇರ್ಸ್‌ ಅವರು ಲಾಂಜನ್ನು ವಿನ್ಯಾಸ ಮಾಡಿದ್ದು, ಹೆಚ್ಚು ಹಸಿರು ಕಾಣುವಂತೆ ಮಾಡಲಾಗಿದೆ.ಈ ಮೂಲಕ ಗ್ರಾಹಕರು ಆಹ್ಲಾದಕರ ಅನುಭವ ಪಡೆಯಬಹುದು’ ಎಂದು ಪ್ಲಾಜಾ ಪ್ರೀಮಿಯಂ ಲಾಂಜ್ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಂಗ್‌ ಹೊಯ್‌ ಸೀ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.