ಶುಕ್ರವಾರ, ಮೇ 7, 2021
27 °C

ಛಪ್ರಾ ಉಪಚುನಾವಣೆ: ಲಾಲೂ ಮೇಲುಗೈ, ಆರ್ ಜೆಡಿ ಅಭ್ಯರ್ಥಿ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಪ್ರಾ ಉಪಚುನಾವಣೆ: ಲಾಲೂ ಮೇಲುಗೈ, ಆರ್ ಜೆಡಿ ಅಭ್ಯರ್ಥಿ ಮುನ್ನಡೆ

ಛಪ್ರಾ (ಬಿಹಾರ) (ಪಿಟಿಐ): ಮಹಾರಾಜಗಂಜ್ ಲೋಕಸಭಾ ಉಪಚುನಾವಣೆಯಲ್ಲಿ ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುನ್ನಡೆ ಸಾಧಿಸಿದ್ದು, ಪಕ್ಷದ ಅಭ್ಯರ್ಥಿ ಪ್ರಭುನಾಥ ಸಿಂಗ್ ಅವರು ನಾಲ್ಕನೇ ಸುತ್ತಿನ ಮತ ಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜನತಾದಳ (ಯು) ಅಭ್ಯರ್ಥಿಗಿಂತ 27,000 ಮತಗಳಿಂದ ಮುಂದಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸ್ವಾಮಿ ಸಾಕಷ್ಟು ಹಿಂದೆ ಬಿದ್ದಿದ್ದಾರೆ.ನಾಲ್ಕನೇ ಸುತ್ತಿನ ಮತಗಳ ಎಣಿಕೆ ಬಳಿಕ ಪ್ರಭುನಾಥ ಸಿಂಗ್ ಅವರು 85,455 ಮತಗಳನ್ನು ಗಳಿಸಿದರೆ, ಜನತಾದಳ (ಯು) ಅಭ್ಯರ್ಥಿ ಪಿ.ಕೆ. ಶಾಹಿ 57,629 ಮತ ಗಳಿಸಿದ್ದರು. ಕಾಂಗ್ರೆಸ್ಸಿನ ಜಿತೇಂದ್ರ ಸ್ವಾಮಿ ಕೇವಲ 9058 ಮತಗಳಿಸಲು ಶಕ್ತರಾದರು.ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸ್ವಾಮಿ ಅವರ ತಂದೆ ಆರ್ ಜೆಡಿ ಸಂಸತ್ ಸದಸ್ಯ ಉಮಾಶಂಕರ ಸಿಂಗ್ ನಿಧನದ ಕಾರಣ ಇಲ್ಲಿ ಉಪಚುನಾವಣೆ ನಡೆದಿತ್ತು.ಪಕ್ಷದ ಅಭ್ಯರ್ಥಿಯ ಮುನ್ನಡೆಯಿಂದ ಬೀಗಿದ ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, ಪಟ್ನಾ ಮತ್ತು ಮಹಾರಾಜಗಂಜ್ ಫಲಿತಾಂಶವು ನಿತೀಶ್ ಕುಮಾರ್ ಸರ್ಕಾರದ ಪತನಕ್ಕೆ ನಾಂದಿಯಾಗಲಿದೆ ಎಂದು ಹೇಳಿದರು. ಇದು 2014ರಲ್ಲಿ ಬಿಹಾರಿನಲ್ಲಿ 14 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ದಿಕ್ಸೂಚಿ ಎಂದು ಅವರು ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.