ಸೋಮವಾರ, ಜನವರಿ 27, 2020
25 °C

ಛಾಯಾಚಿತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರ ಕಲಾವಿದ ಎಂ. ರಾಮು ಅವರ ಅಪರೂಪದ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಭಾನುವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾಯಿತು.ನಟಿ ಪೂಜಾ ಗಾಂಧಿ ಪ್ರದರ್ಶನವನ್ನು ಉದ್ಘಾಟಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಶ್ರೀನಿವಾಸ್, ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಸರವಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವ ಆರ್. ಅಶೋಕ ಕೂಡ ಮಧ್ಯಾಹ್ನದ ನಂತರ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.ಈ ಛಾಯಾಚಿತ್ರ ಪ್ರದರ್ಶನವು ಜ. 19ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆವರೆಗೆ ಪ್ರವೇಶ ಉಚಿತ. ಅಪರೂಪದ ಪ್ರಾಣಿ-ಪಕ್ಷಿಗಳ ಸುಮಾರು 56 ಛಾಯಾಚಿತ್ರಗಳನ್ನು ಈ `ವೈಲ್ಡ್ ಫ್ರೇಮ್ಸ -2012~ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ. ವನ್ಯ ಜೀವಿಗಳ ಜೀವನಶೈಲಿಯನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.

ಪ್ರತಿಕ್ರಿಯಿಸಿ (+)