ಮೊನ್ನೆ ನಮ್ಮ ಗುರು ಮೂರನೇ ಫ್ಲೋರಿಂದ ಕೆಳಗೆ ಹಾರೇ ಬಿಡ್ತಿದ್ದ. ನಾನೂ ಅವನನ್ನು ತಡೆಯೋಕೆ ಹೋಗ್ತಿರ್ಲಿಲ್ಲ. ಈ ಹಿರಿಯರ ಸಹವಾಸ ಬೇಡ ಅಂದ್ಕೊಂಡು ಗುಟ್ಟಾಗಿ ಬಾರಿಗೆ ಬಂದು ಕೂತಿದ್ರೆ ಇಲ್ಲಿಗೂ ಬಂದ ಆ ಅಂಕಲ್ ಬಂದು ಮಾತಾಡಿಸಿದ್ರು.

ನಮ್ಮೆದುರು ಗ್ಲಾಸ್ ಇರಲಿಲ್ಲ. ಧೈರ್ಯವಾಗಿ ನಾವು `ಊಟಕ್ಕೆ ಬಂದಿದ್ವಿ ಅಂಕಲ್. ಇಲ್ಲಿ ಚಿಕನ್ ಚೆನ್ನಾಗಿರುತ್ತೆ~ ಅಂತ ಓಳು ಬಿಟ್ಟು ಸಕ್ಸಸ್ ಆಗಿದ್ವಿ. ಅಷ್ಟೊತ್ತಿಗೆ ಅವರು ಗುರುವಿಗೊಂದು ಕ್ವೈರಿ ಹಾಕೇ ಬಿಟ್ರಲ್ಲ- `ನಿನ್ನ ಮದುವೆ ಫಿಕ್ಸ್ ಆಯ್ತೇನೋ?~. ಕಿಟಕಿ ಪಕ್ಕದಲ್ಲೇ ಕೂತಿದ್ದ ಗುರು ನೆಗ್ದೇ ಬಿಟ್ಟ. ಆದರೆ ಕಿಟಕಿಗೆ ಗ್ರಿಲ್ ಇತ್ತಲ್ಲ. ಹಂಗಾಗಿ ಏನೂ ಆಗ್ಲಿಲ್ಲ.

ಅಲ್ಲಾ ಈ ದೊಡ್ಡವರು ಅನ್ನಿಸಿಕೊಂಡವರಿಗೆ ಇದೇನು ರೋಗ ಅಂತ ಗೊತ್ತಿಲ್ಲ. ನಾವು ಒಂದು ಕೆಲ್ಸಕ್ಕೆ ಸೇರಿ ನಾಲ್ಕು ಕಾಸು ಕಾಣೋಕೆ ಶುರು ಮಾಡಿದ ಮಾರನೇ ದಿನಾನೇ ವರಾತ ಶುರು- `ಮದ್ವೇ ಆಗೋ...~. ಮನೇಲಿ ಅಜ್ಜೀನೋ ಅಜ್ಜಾನೋ ಇದ್ರೆ ಮುಗ್ದೋಯಿತು. `ಅಜ್ಜನಿಗೆ ವಯಸ್ಸಾಯಿತು~ ಅಂತ ಪೀಠಿಕೆ ಶುರುವಾಗುತ್ತೆ.

ದಿನ ಕಳೆದ ಹಾಗೆ ಎಲ್ಲರಿಗೂ ವಯಸ್ಸಾಗುತ್ತೆ. ಅಜ್ಜನಿಗೂ ವಯಸ್ಸಾಗಿದೆ. ಅದಕ್ಕೂ ನಾನು ಮದುವೆಯಾಗೋಕೂ ಏನ್ ಸಂಬಂಧ ಅಂತ ಏನಾದ್ರೂ ಲಾಜಿಕಲ್ ಆಗಿ ಕೇಳಿದ್ರೆ ಅಪ್ಪ ಗುರುಗುಡೋಕೆ ಶುರು ಮಾಡ್ತಾರೆ. ಅಮ್ಮ ಮುಸಿಮುಸಿ ಅಳ್ತಾರೆ. ಆಮೇಲೆ ಮಾವ ಬಂದವರು, `ಈಗಿನ ಕಾಲದ ಹುಡುಗರಿಗೆ ಹಿರಿಯರ ಮನಸ್ಸೇ ಅರ್ಥ ಆಗಲ್ಲ~ ಅಂತ ಮತ್ತದೇ ಭಾಷಣ ಸ್ಟಾರ್ಟ್.

ಇಷ್ಟಕ್ಕೂ ಮನುಷ್ಯ ಹುಟ್ಟಿರೋದೇನು ಮದುವೇ ಆಗೋಕ್ಕಾ? ಅದಕ್ಕೊಂದು ಟೈಮ್ ಅಂತ ಇಲ್ವಾ? ಇಂಥ ಪ್ರಶ್ನೆ ಕೇಳಿದ್ರೆ ಟೈಮ್ ತಗೋ ಅಂದು `ಒಂದು ವಾರ ಸಾಕಾ ಒಂದು ತಿಂಗಳು ಬೇಕಾ?~ ಅಂತ ಕೇಳ್ತಾರೆ. ಒಂದು ತಿಂಗಳಲ್ಲಿ ಜೀವಮಾನವಿಡೀ ಅನುಭವಿಸಬೇಕಾಗಿರೋ ಪ್ರಾರಬ್ಧದ ಬಗ್ಗೆ ಡಿಸಿಷನ್ ತಗಳ್ಳೋಕೆ ಆಗುತ್ತಾ ಅಂತಾನೂ ಇವ್ರ ಯೋಚನೆ ಮಾಡಲ್ವಲ್ಲ.

`ನಾನೇ ಟೈಂ ಬಂದಾಗ ಹೇಳ್ತೀನಿ~ ಅಂದು ನೋಡಿ. ಮತ್ತೆ ಶುರುವಾಗುತ್ತೆ. `ಯಾವ್ಯಾವ ವಯಸ್ಸಲ್ಲಿ ಏನೇನ್ ಆಗ್ಬೇಕೋ ಅದು ಆಗ್ಲೇ ಆಗ್ಬಿಡ್ಬೇಕು. ನಿನಗಾಗ್ಲೇ 30 ಆಗ್ತಾ ಬಂತು. ಇನ್ನೂ ಮುಂದಕ್ಕೆ ಎಳ್ಯೋದು ಬೇಡ~. ಅಲ್ಲಾ ಈ ಮೂವತ್ತಾಗೋದು ಅಂದ್ರೆ ಏನು? ಸಾಯೋಕೆ ಹತ್ರ ಆಗೋದು ಅಂತಾನಾ? ಐವತ್ತು ಅರವತ್ತು ದಾಟಿದವರೆಲ್ಲಾ ಮದುವೆ ಆಗ್ತಾ ಇರೋ ಈ ಕಾಲದಲ್ಲಿ ಮೂವತ್ತಕ್ಕೆ ಹಿಂಗಂತಾರಲ್ಲ...!

ಇದೆಲ್ಲಾ ಅವರ ತಪ್ಪಲ್ಲ. ಬಿ.ಇ.ನೋ ಎಂಬಿಬಿಎಸ್ಸೋ ಮುಗಿಸಿಕೊಂಡು ಅಮೆರಿಕಾಕ್ಕೆ ಹಾರಿರ್ತಾರಲ್ಲ ಅವರ ಕಿತಾಪತಿ. ಹೋಗಿ ಅಲ್ಲಿ ಏನೋ ಮಾಡಿ ಲಕ್ಷಾಂತರ ದುಡಿದು ಜೊತೆಗೊಂದು ಗ್ರೀನ್ ಕಾರ್ಡ್ ಸಂಪಾದಿಸಿಕೊಂಡು ಮತ್ತೆ ಮಾಡೋದು ಇಂಡಿಯನ್ ಹುಡುಗಿ ಅದೇ ಸಬ್ ಕ್ಯಾಸ್ಟ್ ಒಳಗೆ ಹುಡುಕೋದು. ಅದೂ ಅಮೆರಿಕದಲ್ಲಿ ಹುಟ್ಟಿರೋ ಹುಡುಗಿ ಆಗಿರ್ಬಾರ್ದು ಇಲ್ಲೇ ಇಂಡಿಯನ್ ಸಾಯಿಲ್ನಲ್ಲಿ ಹುಟ್ಟಿರ್ಬೇಕು. ಬರೋದು 15 ದಿನದ ರಜೆಯಲ್ಲಿ.

ಮತ್ತೊಂದು ಗೈಡೆಡ್ ಟೂರ್ ಟು ಪಾಸಿಬಲ್ ಮಾವನ ಮನೆಗಳಿಗೆ. ಅಮೆರಿಕದ ಗಂಡು ಅವರು ಮಗಳಿಗೆ ಮಾಡೋಕೆ ಗೊತ್ತಿರೋದು ಗೊತ್ತಿಲ್ಲದೇ ಇರೋದನ್ನೆಲ್ಲಾ ಮಾಡಿ ಬಡಿಸ್ತಾರೆ. ಇವ್ನೆ ಅದನ್ನ ತಿಂದುಕೊಂಡು ಯಾವುದೋ ಒಂದು ಗುಂಡಿಗೆ ಬೀಳ್ತಾನೆ. ಮತ್ತೊಂದು ವಾರದಲ್ಲಿ ಲಗ್ನ. ಆಮೇಲೆ ಅವಳನ್ನ ಅಲ್ಲಿಗೆ ಕರೆಸ್ಕೊಳ್ಳೋದು.

ಮತ್ತೆ ಹೆಂಡತಿ ಹೆರೋ ಹೊತ್ತಿಗೆ ಅಪ್ಪ-ಅಮ್ಮನಿಗೂ ಅತ್ತೆ-ಮಾವನಿಗೂ ಅಮೆರಿಕ ಪ್ರವಾಸದ (ಪ್ರಸವ-ಪ್ರವಾಸ) ಸುಖ. ಇವ್ರೆಲ್ಲಾ ಸೇರ್ಕೊಂಡು ಇಂಡಿಯನ್ ಸಾಯಿಲ್ನಲ್ಲೇ ಸುಖ ಕಂಡುಕೊಳ್ಳೋಕೆ ಒದ್ದಾಡ್ತಿರೋ ನಮಗೆ ತೊಂದರೆ ಮಾಡ್ತಿದ್ದಾರೆ.

ಈ ಎಲ್ಲಾ ಪ್ರೆಶರ್ಸ್ನೂ ಸರಿಯಾಗಿ ಹ್ಯಾಂಡಲ್ ಮಾಡಿ ಮದುವೇನ ಮುಂದಕ್ಕೆ ಹಾಕ್ತಾನೆ ಹೋಗಿ. ಆಗ ಈ ದೊಡ್ಡವರ ಹಿಕ್ಮತ್ತು ಅರ್ಥ ಆಗೋಕೆ ಶುರುವಾಗುತ್ತೆ. ಮೊದಲಿಗೆಲ್ಲಾ ಅಕ್ಕ ನೋಡಿದ, ಅಮ್ಮ ಒಪ್ಪಿದ, ಅಪ್ಪನಿಗೂ ಆಗಬಹುದಾದ ಹುಡುಗಿಯನ್ನೂ ನೀವೂ ಒಪ್ಪ ಬೇಕಾಗಿರುತ್ತದೆ. ತಡವಾದ ಹಾಗೆ `ನಿಮ್ಮ ಮನಸ್ಸಿನಲ್ಲಿ ಯಾವ್ದಾದ್ರೂ ಹುಡುಗಿ ಇದ್ರೆ ಹೇಳು? ಜಾತಿ ಬಿಟ್ಟು ಹೊರಗೆ ಬೇಡ~ ಅನ್ನೋ ಮಾತು ಬರುತ್ತೆ.

ಮತ್ತೂ ಸ್ವಲ್ಪ ಮುಂದಕ್ಕೆ ತಳ್ಳಿಕೊಂಡು ಹೋದರೆ `ಜಾತಿ ಯಾವ್ದಾದ್ರೂ ಆಗಬಹುದು. ಆದ್ರೆ ಧರ್ಮ ಮಾತ್ರ ನಮ್ಮದೇ ಆಗಿರ್ಲಿ...~ ಅನ್ನೋಕೆ ಶುರು ಮಾಡ್ತಾರೆ. ಮತ್ತೂ ಸ್ವಲ್ಪ ಮುಂದಕ್ಕೆ ತಳ್ಳಿದ್ರೆ `ಅವ್ಳ್ಯಾರಾಗಿದ್ರೂ ಸರಿ ಮನೆ ತುಂಬಿಸಿಕ್ಕೊಳ್ತೀವಿ. ರಿಜಿಸ್ಟರ್ ಮಾಡ್ಕೊಂಡು ಬಂದ್ರೂ ಆಗಬಹುದು~ ಎಂದು ಧೈರ್ಯ ಕೊಡ್ತಾರೆ.

ಇದೇ ಮಾತನ್ನ ಮೊದಲನೇ ಸಾರಿ ಮದುವೆ ಪ್ರಸ್ತಾಪ ಬಂದಾಗಲೇ ಹೇಳಿದ್ರೆ ಎಷ್ಟು ಒಳ್ಳೇದಿರ್ತಿತ್ತು. ಅಪ್ಪ-ಅಮ್ಮನಿಗೆ ಹೆದರಿ ಕೈಗೆ ಬಂದ ತುತ್ತನ್ನೆಲ್ಲಾ ಬಾಯಿಯವರೆಗೂ ತೆಗೆದುಕೊಂಡು ಹೋಗದೆ ಹಾಳು ಮಾಡಿಕೊಂಡಿರ್ತೇವೆ. ಅವರಿಗೆಲ್ಲಾ ಈಗ ಮದುವೆಯಾಗಿ ಅವರ ಮಕ್ಕಳು ನಮ್ಮನ್ನೇ `ಅಂಕಲ್~ ಅಂತ ಕರ್ಯೋಕೂ ಶುರು ಮಾಡಿರೋ ಹೊತ್ತಲ್ಲಿ ಹಿರಿಯರಿಗೆ ಜ್ಞಾನೋದಯ ಆಗಿರುತ್ತದೆ.

ನಮ್ಮ ಅವಕಾಶಗಳೆಲ್ಲಾ ಕೈತಪ್ಪಿ ಹೋಗಿ ಮತ್ತೆ ಅದೇ ಅರೇಂಜ್ಡ್ ಮ್ಯಾರೇಜು, ಆಮೇಲೆ ಅರೇಂಜ್ಡ್ ಆಗೀನೇ ಮಕ್ಕಳು, ನಾಮಕರಣ, ಸೈಟು, ಇಂಜಿನಿಯರಿಂಗ್, ಮೆಡಿಕಲ್ ಸೀಟು ಮತ್ತೆ ನಾವೂ ನಮ್ಮ ಹಿರಿಯರ ತರಾನೇ ಆಗಿ ನಮ್ಮ ಮಕ್ಕಳ ತಲೆ ತಿನ್ತೀರ್ತೀವಿ. ಛೆ... ಏನಾದ್ರೂ ಸರಿ ಕ್ರಾಂತಿ ಆಗ್ಬೇಕು ಸಾರ್ ಕ್ರಾಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.