ಶನಿವಾರ, ಏಪ್ರಿಲ್ 10, 2021
32 °C

ಜಂಝೀರ್‌ಗೆ ಪ್ರಿಯಾಪುರಿ ವಿನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಂಝೀರ್‌ಗೆ ಪ್ರಿಯಾಪುರಿ ವಿನ್ಯಾಸ

ವಸ್ತ್ರ ವಿನ್ಯಾಸಕಿ ಪ್ರಿಯಾ ಕತಾರಿಯಾ ಪುರಿ ಬಾಲಿವುಡ್ ಪ್ರವೇಶಿಸಲಿದ್ದಾರೆ. `ಜಂಝೀರ್' ಚಿತ್ರದ ಮೂಲಕ.ವಸ್ತ್ರವಿನ್ಯಾಸದಲ್ಲಿ ಖ್ಯಾತನಾಮರಾಗಿದ್ದೂ ಬಾಲಿವುಡ್‌ನಿಂದ ದೂರವುಳಿದಿದ್ದ ಪ್ರಿಯಾ ಈ ಸಲ ಈ ಪ್ರೊಜೆಕ್ಟ್ ಒಪ್ಪಿಕೊಳ್ಳಲು ಕಾರಣ ನಿರ್ದೇಶಕ ಅಪೂರ್ವ ಲಾಖಿಯಾ ಜೊತೆಗಿನ ಸ್ನೇಹ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.ಗೋವಾದಲ್ಲಿ ಈ ಬಗ್ಗೆ ಮೊದಲ ಸಲ ಪ್ರಿಯಾ ಪುರಿ ಮಾತನಾಡಿದ್ದಾರೆ. ಗೋವಾದಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಪಿಕಾಸೊ ಪೇಂಟಿಂಗ್‌ನಿಂದ ಪ್ರೇರಣೆ ಪಡೆದಿರುವ ಸಂಗ್ರಹವನ್ನು ಪ್ರದರ್ಶಿಸಿದರು.ಜಂಝೀರ್ ಚಿತ್ರಕ್ಕಾಗಿ ಎಂಥ ವಸ್ತ್ರಗಳನ್ನು ವಿನ್ಯಾಸಗೊಳಿಸಲಾಗಿದೆ ಎಂಬ ಪ್ರಶ್ನೆಗೆ ನಗುತ್ತ ಉತ್ತರಿಸಿದ ಪ್ರಿಯಾ, ಇದಿನ್ನೂ ಯೋಜನೆಯಲ್ಲಿದೆ. ಹಳೆಯ ಜಂಝೀರ್‌ನಲ್ಲಿ ಜಯಾಬಾಧುರಿ ನಿರ್ವಹಿಸಿದ ಪಾತ್ರವನ್ನು ಪ್ರಿಯಾಂಕಾ ನಿರ್ವಹಿಸಲಿದ್ದಾರೆ. ಆ ಕಾಲದಲ್ಲಿ ಜಯಾ, ಘಾಗ್ರಾ, ಚೋಲಿಗಳಲ್ಲಿ ಸರಳವಾಗಿ ಮಿಂಚಿದ್ದರು. ಆದರೆ ಸಮಕಾಲೀನ ಟ್ರೆಂಡ್‌ಗೆ ಹೊಂದುವಂತೆ ವಿನ್ಯಾಸಗೊಳಿಸಲಾಗುವುದು. ಈ ನಿಟ್ಟಿನಲ್ಲಲಿ ಜಿನಿವಾ, ಪ್ಯಾರಿಸ್, ಇಟಲಿ ಹಾಗೂ ಕುವೈತ್‌ಗೂ ಪ್ರವಾಸ ಕೈಗೊಂಡಿದ್ದೇನೆ' ಎಂದು ವಿವರಿಸಿದ್ದಾರೆ.ಪ್ರಿಯಾಂಕಾ ಚೋಪ್ರಾ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ನಟಿ. ಅವರಿಗೆ ತಮಗೇನು ಬೇಕು ಎನ್ನುವುದು ಗೊತ್ತಿದೆ. ಅವರೊಂದಿಗೆ ಕೆಲಸ ಮಾಡುವುದೇ ಒಂದು ಅನುಭವವಾಗಿದೆ. ಆದರೆ ಮಾಹಿ ಗಿಲ್ ಮಾತ್ರ ಸಂಪೂರ್ಣ ಭಿನ್ನ ನಟಿಯಾಗಿದ್ದಾರೆ. ಅವರಿಗೆ ಬಳಸಬೇಕಾದ ವಸ್ತ್ರವಿನ್ಯಾಸಕ್ಕೆ ಸಂಪೂರ್ಣ ಸ್ವತಂತ್ರವನ್ನು ನೀಡಿದ್ದಾರೆ. ಇದೂ ಖುಷಿ ನೀಡಿದೆ' ಎಂದು ಇಬ್ಬರೂ ನಟಿಯರ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದಾರೆ ಪ್ರಿಯಾ ಪುರಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.