ಜನಚೇತನ ಯಾತ್ರೆ: ಇಂದು ಸಿಪಿಐಎಂ ಧರಣಿ

7

ಜನಚೇತನ ಯಾತ್ರೆ: ಇಂದು ಸಿಪಿಐಎಂ ಧರಣಿ

Published:
Updated:

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕೈಗೊಂಡಿರುವ ಜನ ಚೇತನ ಯಾತ್ರೆಯನ್ನು ರಾಜ್ಯದಲ್ಲಿ ನಡೆಸದಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷವು (ಮಾರ್ಕ್ಸ್‌ವಾದಿ) ಶನಿವಾರ (ಅ.29) ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾರ್ಯದರ್ಶಿ ವಿ.ಜಿ.ಕೆ.ನಾಯರ್ ಲೋಕಾಯುಕ್ತ ವರದಿ ಅಂಗೀಕಾರ ಮಾಡುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಪ್ರಗತಿಪರ ವೇದಿಕೆ ನವೆಂಬರ್ 11 ರಂದು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಹಮ್ಮಿಕೊಂಡಿರುವ ಹೋರಾಟಕ್ಕೆ ಸಿಪಿಐ (ಎಂ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.ಲೋಕಾಯುಕ್ತ ವರದಿ ಅಂಗೀಕಾರ ಹಾಗೂ ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಲು ಕೂಡಲೇ ವಿಧಾನಸಭೆ ಅಧಿವೇಶನವನ್ನು ಕರೆಯಬೇಕೆಂದು ಈ ವೇಳೆ ಒತ್ತಾಯಿಸಿದರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಳಿಗ್ಗೆ 11ಕ್ಕೆ ಪ್ರತಿಭಟನಾ ಧರಣಿ ನಡೆಯಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry