ಭಾನುವಾರ, ಮೇ 16, 2021
22 °C

ಜನಪರ ಕಾರ್ಯಕ್ಕೆ ಮುಂದಾಗಿರಿ: ನಾಗರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ: ಜನರು ದುರ್ವ್ಯಸನ ಗಳಿಂದ ದೂರವಿದ್ದು ಸ್ವಸ್ಥ ಬದುಕನ್ನು ಕಟ್ಟಿಕೊಳ್ಳಬೇಕು. ಉಳ್ಳವರು ಇಲ್ಲದ ವರ ಬಾಳಿಗೆ ನೆರವಾಗುವ ವಿವಿಧ ವಿಧಾಯಕ ಕಾರ್ಯಗಳಲ್ಲಿ ಮುಂದಾಗ ಬೇಕು ಎಂದು ಮಾಜಿ ಸಚಿವ ಎಸ್.ಬಿ. ನಾಗರಾಳ ಹೇಳಿದರು.ಅವರು ಇಲ್ಲಿನ ಸರಕಾರಿ ಆಸ್ಪತ್ರೆ ಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಹುಬ್ಬಳ್ಳಿ ಡಾ.ಎಂ.ಎಂ. ಜೋಶಿ ನೇತ್ರ ಸಂಶೋಧನಾ ಸಂಸ್ಥೆ ಸಂಯುಕ್ತ ವಾಗಿ ಶಾಸಕ ದೊಡ್ಡನಗೌಡ ಪಾಟೀಲ ತಮ್ಮ ತಂದೆ ಗುಂಡನಗೌಡ ಸ್ಮರಣಾರ್ಥ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಸಶಕ್ತರು ಅಶಕ್ತರಿಗೆ ವಿವಿಧ ನೆಲೆಯಲ್ಲಿ ನೆರವು ಮಾಡುವ ಗುಣಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಮಾನವೀಯತೆ ಮೆರೆಯಲು ಸಾಧ್ಯವಾಗುತ್ತದೆ ಎಂದರು.ಧನ್ನೂರ ಜಿಪಂ ಸದಸ್ಯ ಈರಣ್ಣ ಬಂಡಿ ಜ್ಯೋತಿ ಬೆಳಗಿಸಿದರು. ಪ.ಪಂ. ಅಧ್ಯಕ್ಷ ಬಸಪ್ಪ ಆಲೂರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಮ ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ನೇತ್ರದಾನಕ್ಕೆ ಸಹಿ ಹಾಕಿದರು.ಪ.ಪಂ. ಅಕ್ಕಮಹಾದೇವಿ ಹಂಡಿ, ಮುಖಂಡರಾದ ಶಶಿಕಾಂತ ಪಾಟೀಲ, ಗುರಣ್ಣ ಗೋಡಿ, ಶೇಖರಪ್ಪ ಬಾದವಾ ಡಗಿ, ಅನ್ನದಾನಿಶ್ವರ ಹಾದಿಮನಿ, ಅಕ್ಕಮಹಾದೇವಿ ಕಡಪಟ್ಟಿ, ಮಲ್ಲಣ್ಣ ಲೆಕ್ಕಿಹಾಳ, ದೊಡ್ಡಮ್ಮ ಹವಾಲ್ದಾರ, ಮುತ್ತಕ್ಕ ಭಾವಿಕಟ್ಟಿ, ಶಾಂತಾ ಆಲೂರ, ಹನಮಂತಪ್ಪ ಮುಕ್ಕಣ್ಣವರ, ಶಿವಲಿಂಗಪ್ಪ ವಡಗೇರಿ, ಸಿ.ಪಿ.ಕುರಿ ಹಾಗೂ ಶಿವಣ್ಣ ನಾಗೂರ ಉಪಸ್ಥಿತರಿದ್ದರು.ಶಿಬಿರದಲ್ಲಿ 700 ಜನರ ತಪಾಸಣೆ ಮತ್ತು 300 ಜನರನ್ನು ಶಸ್ತ್ರಚಿಕಿತ್ಸೆ ಮಾಡಲಾಯಿತು. ಮಲ್ಲಿಕಾರ್ಜುನ ದರಗಾದ ಸ್ವಾಗತಿಸಿದರು. ಅಪ್ಪು ಆಲೂರ ವಂದಿಸಿದರು. ಮಹಾಂತೇಶ ತೆಗ್ಗಿನಮಠ ನಿರೂಪಿಸಿದರು.`ಶಿಕ್ಷಕ ರಾಷ್ಟ್ರ ನಿರ್ಮಾಪಕ~

ಬಾಗಲಕೋಟೆ: ಶಿಕ್ಷಕ ರಾಷ್ಟ್ರದ ನಿರ್ಮಾಪಕ ಎಂದು ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ಬಿ.ದಾನಶೆಟ್ಟಿ ಹೇಳಿದರು.ನಗರದ ವಿದ್ಯಾ ಪ್ರಸಾರಕ ಮಂಡಳಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಸಂಸ್ಥೆಯ ಆಡಳಿತಾಧಿಕಾರಿ ಜಿ.ಎನ್.ಕುಲಕರ್ಣಿ, ಪ್ರಾಂಶುಪಾಲ ಗಿರೀಶ, ವೈ.ಎಂ. ಮೋರೆ, ಎಚ್.ಬಿ.ಹಣಮರ, ವೈ.ವಿ. ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.