ಮಂಗಳವಾರ, ಜೂನ್ 22, 2021
24 °C
ಮಹಾನಗರ ಪಾಲಿಕೆಯ ಪ್ರಥಮ ಬಜೆಟ್‌

ಜನಪ್ರಿಯ ಯೋಜನೆಗಳ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಹಾನಗರಪಾಲಿಕೆ ತನ್ನ ಮೊಟ್ಟ ಮೊದಲ ಬಜೆಟ್‌ನ್ನು ಶುಕ್ರವಾರ ಮಂಡಿಸಿದ್ದು, ಹತ್ತು ಜನಪ್ರಿಯ ಯೋಜನೆಗಳನ್ನು ಘೋಷಿಸಿದೆ.

ದಿನದ 24 ಗಂಟೆಗಳ ಕಾಲ ನಾಗರಕರಿಗೆ ತುರ್ತು ಸೇವೆ ಒದಗಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲು ಮುಂದಾಗಿದೆ. ಇದಕ್ಕಾಗಿ ₨10ಲಕ್ಷ ರೂಪಾಯಿ ಮೀಸಲಿಟ್ಟಿದೆ. ಈ ವಾಹನಕ್ಕೆ ‘ಅನವರತ’ ಎಂದು ಹೆಸರು ಇಡಲು ಮುಂದಾಗಿದೆ.ನಗರದ ಮುಖ್ಯ ರಸ್ತೆಗಳಲ್ಲಿ ಆರು ಮಹಾದ್ವಾರ ನಿರ್ಮಾಣಕ್ಕೆ ಎಸ್ಎಫ್‌ಸಿ ಅನುದಾನದಲ್ಲಿ ₨1ಕೋಟಿ ಮೀಸ ಲಿಟ್ಟಿದೆ. ನಗರದಲ್ಲಿನ ಒಂದು ವಾರ್ಡ್‌ನ್ನು ಮಾದರಿ ವಾರ್ಡ್‌ ಆಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ಅದಕ್ಕಾಗಿ ₨50 ಲಕ್ಷ  ಮೀಸಲಿಡಲಾಗಿದೆ.ನಗರದ ಅತ್ಯಂತ ಹಳೆಯ ಸರ್ಕಾರಿ ಶಾಲೆಯಾಗಿರುವ ಮೇಯಿನ್ ಮಿಡ್ಲ್ ಸ್ಕೂಲ್‌ನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಪಾರದರ್ಶಕ ಆಡಳಿತಕ್ಕಾಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲು ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ₨5 ಲಕ್ಷ ಮೀಸಲಿಡಲಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಉದ್ಯಾನ ಹಾಗೂ ರಸ್ತೆ ಸೌಂದರ್ಯೀ ಕರಣ, ಕೈಗಾರಿ ಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಘಗಳ ಸಹಯೋಗದೊಂದಿಗೆ ನಗರದ ವಿವಿಧ ರಸ್ತೆಗಳ ಇಕ್ಕೆಲಗಳಲ್ಲಿ ಗಿಡ ನೆಡುವ ಯೋಜನೆ ಅನುಷ್ಠಾನಕ್ಕೆ ಪಾಲಿಕೆ ಆಡಳಿತ ನಿರ್ಧಾರ ಕೈಗೊಂಡಿದೆ.

ನಗರದಲ್ಲಿ ಬೇಕಾಬಿಟ್ಟಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಮಹಾನಗರ ಪಾಲಿಕೆ ಕಡಿವಾಣ ಹಾಕಲು ಮುಂದಾಗಿದೆ.ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುವ ಹಾಗೂ ಟ್ರಾಫಿಕ್ ವ್ಯವಸ್ಥೆಯ ದೃಷ್ಟಿಯಿಂದ ಮಹಾನಗರ ಪಾಲಿಕೆ ಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ಇನ್ನೂ ಮುಂದೆ ಫ್ಲೆಕ್ಸ್, ಬ್ಯಾನರ್ ಸೇರಿದಂತೆ ಮತ್ತಿತರ ಪ್ರಚಾರ ಫಲಕ ಅಳವಡಿಕೆ ಮಾಡಬೇಕಾಗುತ್ತದೆ. ಇದಕ್ಕಾಗಿ ಬಜೆಟ್‌ನಲ್ಲಿ ₨25 ಲಕ್ಷ ಮೀಸಲಿರಿ ಸಲಾಗಿದೆ.ಮಹಾನಗರ ಪಾಲಿಕೆ ಆಸ್ತಿಗಳ ಸಂರಕ್ಷಣೆ ಹಾಗೂ ದುರ್ಬಳಕೆ ತಡೆಯುವ ಉದ್ದೇಶದಿಂದ ಪಾಲಿಕೆ ಆಸ್ತಿ ಎಂದು ನಾಮಫಲಕ ಬರೆಯಿಸಲು ₨15 ಲಕ್ಷ, ಉದ್ಯಾನವನ ನಿರ್ವಹಣೆ ಮಾಡಲು ಮುಂದಾಗುವ ನಾಗರಿಕ ಸಂಸ್ಥೆಗಳಿಗೆ ಹಾಗೂ ಆಯಾ ಬಡಾವಣೆಯ ನಾಗರಿಕರಿಗೆ ನೆರವಾಗಲು ₨1ಕೋಟಿ ಅನುದಾನ ಮೀಸಲಿಡಲಾಗಿದೆ.ನೀರು ಪೋಲಾಗುವುದನ್ನು ತಡೆಯಲು ನಗರದಲ್ಲಿ ಹಾಲಿ ಇರುವ ಮಿನಿ ನೀರು ಸರಬರಾಜು ಘಟಕಕ್ಕೆ ಎಸ್ಎಂಎಸ್ ಆಧಾರಿತ ತಂತ್ರಜ್ಞಾನ ಬಳಕೆಯ ಮೂಲಕ ನಿಯಂತ್ರಣ ಮಾಡಲು ₨25 ಲಕ್ಷ ಮೀಸಲಿಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.