ಭಾನುವಾರ, ಜನವರಿ 19, 2020
20 °C

ಜನರ ಅನುಕೂಲಕ್ಕಾಗಿ ಠಾಣೆ ಪುನರ್‌ವಿಂಗಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪೂರ್ವ ವಿಭಾಗದ ಕಾಡುಗೊಂಡನಹಳ್ಳಿ, ರಾಮಮೂರ್ತಿನಗರ, ಮಹದೇವಪುರ, ಬಯ್ಯಪ್ಪನಹಳ್ಳಿ ಮತ್ತು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳನ್ನು ಸ್ಥಳೀಯರ ಹಿತದೃಷ್ಟಿಯಿಂದ ಪುನರ್‌ವಿಂಗಡಣೆ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.`ಕೆಲ ಬಡಾವಣೆಗಳು ಠಾಣೆಗಳಿಂದ ಸಾಕಷ್ಟು ದೂರ ಇದ್ದದ್ದರಿಂದ ಸ್ಥಳೀಯರಿಗೆ ದೂರು ನೀಡಲು ತೊಂದರೆಯಾಗುತ್ತಿತ್ತು. ಸ್ಥಳೀಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಠಾಣೆಗಳ ವ್ಯಾಪ್ತಿಯನ್ನು ಪುನರ್‌ವಿಂಗಡಣೆ ಮಾಡಲಾಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ `ಪ್ರಜಾವಾಣಿ~ಗೆ ತಿಳಿಸಿದರು.ಹೆಣ್ಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಎಚ್‌ಬಿಆರ್ ಲೇಔಟ್‌ನ ಎರಡು, ಮೂರು ಮತ್ತು ನಾಲ್ಕನೇ ಹಂತ, ಹೆಣ್ಣೂರು ಮುಖ್ಯರಸ್ತೆಯ ಪಶ್ಚಿಮ ಭಾಗ ಮತ್ತು ನಾಗವಾರ ವರ್ತುಲ ರಸ್ತೆಯ ದಕ್ಷಿಣ ಭಾಗದ ಪ್ರದೇಶವನ್ನು ಕಾಡುಗೊಂಡನಹಳ್ಳಿ ಠಾಣೆಗೆ ಸೇರ್ಪಡೆ ಮಾಡಲಾಗಿದೆ.ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿದ್ದ ಕೋಡಿಚಿಕ್ಕನಹಳ್ಳಿ, ಬೆನ್ನಿಗಾನಹಳ್ಳಿ ಕೆರೆ, ಕೃಷ್ಣರೆಡ್ಡಿ ಕೈಗಾರಿಕಾ ಪ್ರದೇಶ, ಜ್ಯೋತಿಪುರ, ದರ್ಗಾ ಮೊಹಲ್ಲಾ ಪ್ರದೇಶವನ್ನು ರಾಮಮೂರ್ತಿನಗರ ಠಾಣೆಗೆ ಸೇರಿಸಲಾಗಿದೆ. ಅಂತೆಯೇ ಕೆ.ಆರ್.ಠಾಣೆ ವ್ಯಾಪ್ತಿಯಲ್ಲಿದ್ದ ಪೆ  ಲೇಔಟ್, ಶಕ್ತಿನಗರ, ಉದಯನಗರ, ಹಳೆ ಮದ್ರಾಸ್ ರಸ್ತೆಯ ಪೂರ್ವ ಭಾಗವನ್ನು ಮಹದೇವಪುರ ಠಾಣೆಗೆ ಸೇರ್ಪಡೆ ಮಾಡಲಾಗಿದೆ.ಮಹದೇವಪುರ ಠಾಣೆಗೆ ಸೇರಿದ್ದ ಕಗ್ಗದಾಸಪುರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಬಯ್ಯಪ್ಪನಹಳ್ಳಿ ಠಾಣೆಗೆ ಸೇರ್ಪಡೆ ಮಾಡಲಾಗಿದೆ. ಕಾಡುಗೋಡಿ ಮತ್ತು ಹೊಸಕೋಟೆ ಠಾಣೆಗಳ ವ್ಯಾಪ್ತಿಗೆ ಸೇರಿದ್ದ ಕೊಡಿಗೇಹಳ್ಳಿ, ಸೀಗೆಹಳ್ಳಿ, ಮೇಡಹಳ್ಳಿ, ಕಿತ್ತಗನೂರು, ಮಾರಗೊಂಡನಹಳ್ಳಿ, ವಾರಣಾಸಿ, ಹಳೆಹಳ್ಳಿ, ಭಟ್ಟರಹಳ್ಳಿ ಪ್ರದೇಶವನ್ನು ಕೆ.ಆರ್.ಪುರ ಠಾಣೆಗೆ ಸೇರಿಸಲಾಗಿದೆ.ಠಾಣೆಗಳ ವ್ಯಾಪ್ತಿಯನ್ನು ಪುನರ್‌ವಿಂಗಡಣೆ ಮಾಡಿರುವ ಪೊಲೀಸ್ ಇಲಾಖೆಯ ಕ್ರಮಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.`ಪುನರ್‌ವಿಂಗಡಣೆಗೂ ಮುನ್ನ ಠಾಣೆಗಳು ಸಾಕಷ್ಟು ದೂರದಲ್ಲಿದ್ದವು. ನಾಲ್ಕೈದು ಕಿ.ಮೀ ದೂರದಲ್ಲಿದ್ದ ಠಾಣೆಗಳಿಗೆ ಹೋಗಿ ದೂರು ನೀಡಲು ತೊಂದರೆಯಾಗುತ್ತಿತ್ತು. ಠಾಣೆಗಳ ವ್ಯಾಪ್ತಿಯನ್ನು ಪುನರ್‌ವಿಂಗಡಣೆ ಮಾಡುವ ಮೂಲಕ ಇಲಾಖೆಯು ಅನುಕೂಲ ಮಾಡಿಕೊಟ್ಟಿದೆ~ ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)