ಸೋಮವಾರ, ಏಪ್ರಿಲ್ 19, 2021
23 °C

ಜನಸೇವೆಗೆ ಮುಂದಾಗಿ: ಶಾಸಕ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಅಧಿಕಾರ ಸಿಕ್ಕಾಗ ಮರೆಯದೆ, ಮುರಿಯದೆ, ಮೆರೆಯದೆ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕು. ಅಧಿಕಾರವನ್ನು ದರ್ಪದಿಂದ ಬಳಸದೆ ಜನರಸೇವೆಗೆ ಸಿಕ್ಕ ಅವಕಾಶವೆಂದು ಭಾವಿಸಿ ಸಾರ್ಥಕಪಡಿಸಿಕೊಳ್ಳಬೇಕೆಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು.ಕಡೂರು ತಾಲ್ಲೂಕು ಎಸ್.ಕೊಪ್ಪಲು ಗ್ರಾಮದಲ್ಲಿ ವೀರಭದ್ರ ಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜಿಪಂ ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ ವ್ಯಯಿಸಿದೆ. ಗ್ರಾಮಗಳು ಹಿಂದೆಂದೂ ಕಂಡರಿಯದ ಪ್ರಗತಿ ಕಾಣುತ್ತಿವೆ. ಬಹುವರ್ಷಗಳ ಬೇಡಿಕೆಯಾದ ಬೆಳವಾಡಿ ಕೆರೆಯಿಂದ ನೀರು ತರುವ ಕೆಲಸ ಪ್ರಗತಿಯಲ್ಲಿದೆ ಎಂದರು.ಜಿಪಂ ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ್ ಮಾತನಾಡಿದರು.

 

ಚಿಕ್ಕಮಗಳೂರು ತಾಪಂ ಅಧ್ಯಕ್ಷ ಕನಕರಾಜ ಅರಸ್, ಕಡೂರು ತಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯ ಚಂದ್ರಪ್ಪ, ಜಿಪಂ ಸದಸ್ಯ ಕಲ್ಮುರಡಪ್ಪ, ಅಮೃತೇಶ, ಗ್ರಾಪಂ ಅಧ್ಯಕ್ಷೆ ಭಾರತಿ, ಸದಸ್ಯ ಪುಟ್ಟಸ್ವಾಮಿಗೌಡ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಸವರಾಜು ಸೇರಿದಂತೆ  ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಜಿಪಂ ಉಪಕಾರ್ಯದರ್ಶಿ ಮಹೇಶ್ವರಯ್ಯ, ಸಾಹಿತಿ ಚಟ್ನಳ್ಳಿ ಮಹೇಶ್, ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕ ನಟರಾಜ್, ಚಿಕ್ಕದೇವನೂರು ರವಿ ನಿರೂಪಿಸಿ, ಕೊಪ್ಪಲು ಇದ್ದರು.

 

ಅಗ್ನಿಶಾಮಕ ಸೇವಾ ಸಪ್ತಾಹ

ಚಿಕ್ಕಮಗಳೂರು: ಜಿಲ್ಲೆಯ ಎಲ್ಲ ಅಗ್ನಿಶಾಮಕ ಠಾಣೆಗಳಲ್ಲಿ ಇದೇ 20 ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ ನಡೆಸಲಾಗುತ್ತಿದೆ. ಈ ಸಪ್ತಾಹ ಸಂದರ್ಭದಲಿ ್ಲನಾಗರೀಕರಿಗೆ ಬೆಂಕಿ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ ಹಾಗೂ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ ಇಂದು

 

ಚಿಕ್ಕಮಗಳೂರು: ತಾಂತ್ರಿಕ ಕಾರಣಗಳಿಂದಾಗಿ ಸೋಮವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಚಿಕ್ಕಮಗಳೂರು, ಕರ್ತಿಕೆರೆ, ಕಳಸಾಪುರ ಮತ್ತು ಮೂಡಿಗೆರೆ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲ ಪಟ್ಟಣ ಮತ್ತು ಗ್ರಾಮೀಣ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ಚಿಕ್ಕಮಗಳೂರು: ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಇದೇ 23 ಹಾಗೂ 24ರಂದು ಹೊಸಪೇಟೆ ಮೈದಾನದಲ್ಲಿ ನವಜ್ಯೋತಿ ಕ್ರಿಕೆಟರ್ಸ್‌ ಆಯೋಜಿಸಿದೆ.

‘ನವಜ್ಯೋತಿ ಕಪ್-2011’ ಟ್ರೋಫಿಯೊಂದಿಗೆ 11,100 ರೂ ನಗದು ಬಹುಮಾನ ನೀಡಲಾಗುವುದು. 5,500 ರೂ ದ್ವಿತೀಯ ಬಹುಮಾನವಿದೆ ಎಂದು ನವಜ್ಯೋತಿ ಕ್ರಿಕೆಟರ್ಸ್‌ ಅಧ್ಯಕ್ಷ ಹರೀಶ್ ತಿಳಿಸಿದ್ದಾರೆ. ಮಾಹಿತಿಗಾಗಿ 9480333370 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.