ಬಸವಾಪಟ್ಟಣ: ಜನಸಾಮಾನ್ಯರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸಿ ಅವರ ನೋವುಗಳಿಗೆ ಸಾಂತ್ವನ ನೀಡುವಲ್ಲಿ ಚನ್ನಗಿರಿ ತಾಲ್ಲೂಕು ಕೆಂಗಾಪುರದ ರಾಮಲಿಂಗೇಶ್ವರಸ್ವಾಮಿ ಮಠ ಈ ಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿವರ್ಷ ಶಿವರಾತ್ರಿಯ ಸಮಯದಲ್ಲಿ ಮಠದಲ್ಲಿ ನಡೆಸುವ ಸರ್ವಧರ್ಮ ಸಮ್ಮೇಳನ, ಮುಳ್ಳುಗದ್ದುಗೆ ಉತ್ಸವ, ಉಚಿತ ಸಾಮೂಹಿಕ ವಿವಾಹಗಳಂತಹ ಜನಹಿತ ಕಾರ್ಯಗಳೊಂದಿಗೆ ನಿತ್ಯ ಅನ್ನದಾಸೋಹ ಅವರ ಜನಸೇವೆಗೆ ಸಾಕ್ಷಿಯಾಗಿವೆ.

ಸುಮಾರು 40 ವರ್ಷಗಳ ಹಿಂದೆ ಕೆಂಗಾಪುರದ ರಾಮಪ್ಪ ಅವರಿಗೆ ಆದ ದೈವೀ ಪ್ರೇರಣೆ ಅವರಲ್ಲಿ ಧಾರ್ಮಿಕ ಶಕ್ತಿ ಬೆಳೆಯಲು ಕಾರಣವಾಯಿತು. ನಂತರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಾಗ ಬ್ರಹ್ಮ ಸ್ವಾಮಿಗಳೆಂಬ ಮಹಾನ್ ಪುರುಷರ ಪ್ರೇರಣೆ ಅವರನ್ನು ಆಧ್ಯಾತ್ಮಿಕ ಲೋಕದತ್ತ ಕರೆದೊಯ್ಯಿತು. ಇದರ ಪರಿಣಾಮವಾಗಿ ಅವರು ಸನ್ಯಾಸ ಸ್ವೀಕರಿಸಿ ರಾಮಲಿಂಗೇಶ್ವರಸ್ವಾಮಿಗಳಾಗಿ ಸಮಾಜದ ದೀನರು, ದಲಿತರು ಬಡವರ ಸೇವೆಗೆ ನಿಂತರು.

ಪ್ರತಿ ತಿಂಗಳ ಅಮಾವಾಸ್ಯೆಯಂದು ಸ್ವಾಮೀಜಿ ನಡೆಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಬಡವ ಬಲ್ಲಿದರೆನ್ನದೇ ಭಾಗವಹಿಸುವ ಎಲ್ಲರ ಕಷ್ಟಗಳಿಗೆ ಮಾರ್ಗೋಪಾಯಗಳನ್ನು ಸೂಚಿಸಿ ಅವರ ನೋವುಗಳ ನಿವಾರಣೆಗೆ ಕಂಕಣ ಬದ್ಧರಾಗಿದ್ದಾರೆ. ಇದರೊಂದಿಗೆ ಬಡ ವಿದ್ಯಾರ್ಥಿಗಳಿಗಾಗಿ ಕೆಂಗಾಪುರದಲ್ಲಿ ಶಿಕ್ಷಕರ ತರಬೇತಿ ಕೇಂದ್ರ, ಪದವಿಪೂರ್ವ ಕಾಲೇಜು, ಕೈಗಾರಿಕಾ ತರಬೇತಿ ಕೇಂದ್ರ, ಹೊನ್ನಾಳಿ ತಾಲ್ಲೂಕು ನಿಂಬೆಗೊಂದಿ, ಕ್ಯಾಸಿನಕೆರೆ ಗ್ರಾಮಗಳಲ್ಲಿ ಪ್ರೌಢಶಾಲೆಗಳು, ಕಬ್ಬಳ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಯಾವ ಶುಲ್ಕವನ್ನೂ ವಿಧಿಸದೇ ತಮ್ಮ ಸಂಸ್ಥೆಯಿಂದಲೇ ಭರಿಸಿ ಅವರಿಗೆ ಉಚಿತವಾಗಿ ಸಮವಸ್ತ್ರ ಮತ್ತು ಪುಸ್ತಕಗಳನ್ನು ಒದಗಿಸಿರುವುದು, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯದ ವ್ಯವಸ್ಥೆ ಮಾಡಿರುವುದು ಸ್ವಾಮೀಜಿಯ ಸೇವೆಗೆ ಮೆರಗನ್ನು ನೀಡಿದೆ. ಕೆಂಗಾಪುರದಲ್ಲಿ ಉಚಿತವಾಗಿ ಒಂದು ವೃದ್ಧಾಶ್ರಮ ಮತ್ತು ಅನಾಥಾಶ್ರಮ ಸ್ಥಾಪಿಸಿ ವಯೋವೃದ್ಧರ ಮತ್ತು ಅನಾಥರ ಸೇವೆ ಮಾಡಬೇಕೆನ್ನುವುದು ಅವರ ತೀವ್ರ ಹಂಬಲವಾಗಿದೆ. ಮುಖ್ಯರಸ್ತೆಯಿಂದ ದೂರ ಇರುವ ಕೆಂಗಾಪುಕ್ಕೆ ಉತ್ತಮವಾದ ರಸ್ತೆ, ಇಲ್ಲಿನ ಸೂಳೆಕೆರೆ ಹಳ್ಳಕ್ಕೆ ಎತ್ತರದ ಸೇತುವೆ ಹಾಗೂ ಸಾರಿಗೆ ಬಸ್ಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಟ್ಟರೆ ನನ್ನ ಜನಸೇವೆಗೆ ಉತ್ತಮ ಅವಕಾಶವಾಗುತ್ತದೆ ಎಂದು ಸ್ವಾಮೀಜಿ ನುಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.