ಶುಕ್ರವಾರ, ಮೇ 27, 2022
22 °C

ಜಮಾಬಂದಿ: ವಾರ್ಷಿಕ ಜಮಾ, ಖರ್ಚು ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಪಂಚಾಯತ್‌ರಾಜ್ ವ್ಯವಸ್ಥೆಯ ತಾ.ಪಂ. ವಾರ್ಷಿಕ ಜಮಾ-ಖರ್ಚುಗಳ ವಿವರದ ಪರಿಶೀಲನೆಗಾಗಿ ಹಮ್ಮಿಕೊಂಡಿದ್ದ ಜಮಾಬಂದಿ ಕಾರ್ಯಕ್ರಮ ಸೋಮವಾರ ತಾ.ಪಂ. ಕಚೇರಿಯ ರಾಜೀವ್‌ಗಾಂಧಿ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೋಡೆಲ್ ಅಧಿಕಾರಿ ಪ್ರಶಾಂತ್ ಬಾರಿಗಡದ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕಾಗಿ 2009-10ನೇ ಸಾಲಿನಲ್ಲಿ ತಾ.ಪಂ.ಗ್ಙೆ 4.65ಕೋಟಿ, ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಪರಿಶಿಷ್ಟರ ಕಾಲೊನಿಯಲ್ಲಿ ಮೂಲ ಸೌಲಭ್ಯಕ್ಕಾಗಿ ್ಙ 28 ಲಕ್ಷ ಪ.ಪಂ. ಕಾಲೊನಿಗೆ ್ಙ 4ಲಕ್ಷ, ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ್ಙ 5ಲಕ್ಷ ಅನುದಾನ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗಿದೆ ಎಂದರು.ಕಚೇರಿಯ ಉಪಯೋಗಕ್ಕಾಗಿ ಸಂಪರ್ಕ ಪಡೆದಿರುವ ದೂರವಾಣಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಉಪಯೋಗಿಸಲು ಹಾಗೂ ಕಚೇರಿಯ ಕೆಲಸಕ್ಕಾಗಿ ಅಲೆದಾಡುವ ಕೆಲ ಸಾರ್ವಜನಿಕರು ದೂರವಾಣಿ ಉಪಯೋಗಿಸುವ ದೂರುಗಳು ಕೇಳಿ ಬಂದಿದ್ದು, ಈ ಕುರಿತು ನಿಗಾ ವಹಿಸುವಂತೆ ಇಒ ಕೃಷ್ಣನಾಯ್ಕ ಅವರಿಗೆ ಸೂಚಿಸಿದರು.ತಾ.ಪಂ. ವ್ಯಾಪ್ತಿಯಲ್ಲಿ ಬರುವ ಎಲ್ಲಾ 35ಗ್ರಾ.ಪಂ.ಗಳ ಗ್ರಾಮಸಭೆಯ ನಡಾವಳಿ ದಾಖಲೆಗಳು, ಪ್ರಗತಿ ಪರಿಶೀಲನಾ ವರದಿ, ಸಾರ್ವಜನಿಕ ಕುಂದು-ಕೊರತೆ, ಸಾಮಾನ್ಯ ಸಭೆ, ಕೆಡಿಪಿ ಸಭೆ, ಹಣಕಾಸು ಮತ್ತು ಲೆಕ್ಕ ಪರಿಶೋಧನೆ ನ್ಯಾಯ ಸಮಿತಿಯ ಸಭೆ ಹಾಗೂ ಸಾಮಾಜಿಕ ನ್ಯಾಯಸಮಿತಿ ಸಭೆಯ ನಡಾವಳಿಯ ದಾಖಲೆಗಳನ್ನು ಅಧ್ಯಕ್ಷರ ಪರಿಶೀಲನೆಗಾಗಿ ಕಾರ್ಯ ನಿರ್ವಹಣಾಧಿಕಾರಿ ಎಲ್.ಎ. ಕೃಷ್ಣನಾಯ್ಕ ಮಂಡಿಸಿದರು.ಜಿ.ಪಂ.ನ ಲೆಕ್ಕ ಅಧೀಕ್ಷರೂ ಆದ ಜಮಾಬಂದಿ ಸಹಾಯಕ ಅಧಿಕಾರಿ ರಾಜಣ್ಣ, ಇಒ ಕೃಷ್ಣನಾಯ್ಕ, ತಾ.ಪಂ. ಲೆಕ್ಕಾಧಿಕಾರಿ ಯದು ಸೇರಿದಂತೆ ವಿವಿಧ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.